Prajwal Revanna: ಪ್ರಜ್ವಲ್ ರೇವಣ್ಣ ಅವರನ್ನ ಮಹಿಳಾ ಸಿಬ್ಬಂದಿಗಳೇ ಅರೆಸ್ಟ್ ಮಾಡಿದ್ದು ಏಕೆ…? ಇಲ್ಲಿದೆ ಅಸಲಿ ಕಾರಣ.

ಪ್ರಜ್ವಲ್ ರೇವಣ್ಣ ಅವರನ್ನ ಮಹಿಳಾ ಸಿಬ್ಬಂದಿಗಳೇ ಅರೆಸ್ಟ್ ಮಾಡಿದ್ದು ಯಾಕೆ..?

Prajwal Revanna Arrest: ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಇದೀಗ ಬಂದಿತರಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದ ದಿನದಿಂದ 33 ದಿನಗಳು ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಮೇ 30 ರ ಗುರುವಾರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಗುರುವಾರ ರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲಾಗಿದೆ. ಪ್ರಜ್ವಲ್ ರೇವಣ್ಣ ಅವರನ್ನ ಮಹಿಳಾ ಸಿಬ್ಬಂದಿಗಳೇ ಅರೆಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಪ್ರಜ್ವಲ್ ರೇವಣ್ಣ ಅವರನ್ನ ಮಹಿಳಾ ಸಿಬ್ಬಂದಿಗಳೇ ಅರೆಸ್ಟ್ ಮಾಡಿದ್ದು ಯಾಕೆ..? ಎನ್ನುವ ಪ್ರಶ್ನೆ ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ.

Prajwal Revanna Case
Image Credit: The Economic Times

ಪ್ರಜ್ವಲ್ ರೇವಣ್ಣ ಅವರನ್ನ ಮಹಿಳಾ ಸಿಬ್ಬಂದಿಗಳೇ ಅರೆಸ್ಟ್ ಮಾಡಿದ್ದು ಏಕೆ…?
ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣನನ್ನು ಮಹಿಳಾ ಪೋಲೀಸರು ಆರಂಭದಲ್ಲಿ ಕಸ್ಟಡಿಗೆ ತೆಗೆದುಕೊಂಡಿರುವುದು ಬಹಿರಂಗವಾಗಿದೆ. ಎಸ್‌ಐಟಿ ಸೇರಿದಂತೆ ವಿವಿಧ ಇಲಾಖೆಗಳ ಹಲವಾರು ಪುರುಷ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಅವರ ಬಂಧನಕ್ಕೆ ಕಾಯುತ್ತಿದ್ದರೂ ಮಹಿಳಾ ಸಿಬ್ಬಂದಿಯನ್ನು ಬಂಧಿಸಲು ನಿರ್ದಿಷ್ಟ ಕಾರಣಗಳೇನು ಎಂಬುದು ಬಹಿರಂಗವಾಗಿಲ್ಲ. ಹಿರಿಯ ಅಧಿಕಾರಿಗಳ ಈ ನಡೆ ಮಾತ್ರ ಸೋಜಿಗದಂತಿದೆ.

ಗುರುವಾರ ಮಧ್ಯರಾತ್ರಿ 12.47 ರ ಸುಮಾರಿಗೆ ಲುಫ್ತಾನ್ಸಾ ಏರ್‌ ಲೈನ್ಸ್ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಜ್ವಲ್ ರೇವಣ್ಣ ಅವರನ್ನು ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಎಸ್‌ಐಟಿಗೆ ಹಸ್ತಾಂತರಿಸಿದ್ದರು. ಸಾವಿರಾರು ಮಹಿಳೆಯರಿಗೆ ಅನ್ಯಾಯ ಮಾಡಿ ಕಣ್ಣೀರುಹಾಕಿಸಿದ ಪ್ರಜ್ವಲ್ ರೇವಣ್ಣ ಅವರನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮಹಿಳಾ ಇನ್ಸ್‌ ಪೆಕ್ಟರ್ ಹಾಗೂ ಇತರೆ ಮಹಿಳಾ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಎಸ್‌ಐಟಿ ಕಚೇರಿಗೆ ಕರೆ ತಂದಿರುವ ವಿಡಿಯೋ ವೈರಲ್ ಆಗಿದೆ.

Prajwal Revanna Arrest New Updates
Image Credit: Hindustan Times

ಮಹಿಳಾ ಸಿಬ್ಬಂದಿಗಳೇ ಅರೆಸ್ಟ್ ಮಾಡಲು ಇಲ್ಲಿದೆ ಅಸಲಿ ಕಾರಣ
ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಕಚೇರಿಗೆ ಕರೆತಂದಾಗ ಪೊಲೀಸ್ ವಾಹನದ ಚಾಲಕ ಹೊರತುಪಡಿಸಿ ಉಳಿದ ಅಧಿಕಾರಿಗಳು ಮಹಿಳೆಯರೇ ಆಗಿದ್ದರು. ಮುಂದಿನ ಸೀಟಿನಲ್ಲಿ ಪ್ರಜ್ವಲ್ ಅವರ ಮುಂದೆ ಮತ್ತು ಹಿಂದೆ ಮಹಿಳೆಯರೇ ಇದ್ದರು. ಇದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತದೆ.

Join Nadunudi News WhatsApp Group

ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಪ್ರಜ್ವಲ್ ನನ್ನು ಮಹಿಳಾ ಪೊಲೀಸರು ಬಂಧಿಸಿದ್ದು, ಅವಮಾನಿಸಲು ಎಂದು ಹೇಳಲಾಗುತ್ತಿದೆ. ಅದೇ ರೀತಿ 33 ದಿನಗಳ ಕಾಲ ಪೊಲೀಸರಿಗೆ ಸಿಗದೇ ಅಡಗಿಕೊಂಡ ಕಾರಣ ತಕ್ಕ ಪಾಠ ಕಲಿಸಲು ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೆ ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ಮಹಿಳಾ ಪೊಲೀಸರ ನೆರವು ಪಡೆದು ಅವರಿಂದ ಒಂದಷ್ಟು ಮಾಹಿತಿ ಸಂಗ್ರಹಿಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಮಾಹಿತಿಯೂ ಇದೆ.

Prajwal Revanna Arrest Latest News
Image Credit: Rtv Live

Join Nadunudi News WhatsApp Group