Prakash Raj Tweet: ಬೊಮ್ಮಾಯಿ ನನ್ನ ಮಾವ ಅಂದ ಸುದೀಪ್ ಗೆ ಟಾಂಗ್ ಕೊಟ್ಟ ಪ್ರಕಾಶ್ ರಾಜ್, ವೈರಲ್ ಆಯಿತು ಟ್ವೀಟ್.

ಕಿಚ್ಚ ಸುದೀಪ್ ಅವರು ಬಸವರಾಜ್ ಬೊಮ್ಮಾಯಿ ಅವರು ನನ್ನ ಮಾವ ಅಂದ್ದ ಬಗ್ಗೆ ಟ್ವೀಟ್ ಮಾಡಿದ ನಟ ಪ್ರಕಾಶ್ ರಾಜ್

Prakasj Raj Tweet About Sudeep: ನಟ ಕಿಚ್ಚ ಸುದೀಪ್ (Kiccha Sudeep) ಬಿಜೆಪಿ ಸೇರ್ಪಡೆ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತಿದ್ದಂತೆಯೇ ಅವರಿಗೆ ಬೆದರಿಕೆ ಪತ್ರ ಬಂದಿದೆ. ಈಗಾಗಲೇ ನಟ ಸುದೀಪ್ ಅವರ ರಾಜಕೀಯ ಸೇರ್ಪಡೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಡಿದೆ.

ನಟ ಸುದೀಪ್ ಅವರು ಈ ಭಾರಿ ವಿಧಾನಸಭಾ ಚುನಾವಣೆಯಲ್ಲಿ (Assembly Election Krantaka) ಭಾಗವಹಿಸುವುದಿಲ್ಲ. 2028 ರಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ. ಆದರೆ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

Prakasj Raj Tweet About Sudeep
Image Source: Republic Word

ನಟ ಪ್ರಕಾಶ್ ರಾಜ್ ಟ್ವೀಟ್ (Prakash Raj Tweet)
ನಟ ಕಿಚ್ಚ ಸುದೀಪ್ ನಾನು ಚುನಾವಣೆಗೆ ಭಾಗವಹಿಸದಿದ್ದರು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ ಅಲ್ಲದೆ ನಟ ಸುದೀಪ್ ಬಸವರಾಜ ಬೊಮ್ಮಾಯಿಗೆ ನನ್ನ ಮಾಮನಿಗೆ ನನ್ನ ಬೆಂಬಲ ಇದೆ ಎಂದಿದ್ದರು. ನಟ ಸುದೀಪ್ ಬಿಜೆಪಿ ಪರವಾಗಿ ಸುದ್ದಿಗೋಷ್ಠಿ ಮಾಡುತ್ತಿದ್ದಂತೆಯೇ ಪ್ರಕಾಶ್ ರಾಜ್ (Prakash Raj) ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕಿಚ್ಚ ಸುದೀಪ್ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಕೇಳಿ ಬಂದಾಗ ಪ್ರಕಾಶ್ ರಾಜ್ ಅದೆಲ್ಲ ಸುಳ್ಳು, ನಮ್ಮ ಕಿಚ್ಚ ಮಾರಿಕೊಳ್ಳುವವರು ಅಲ್ಲ ಎಂದು ಟ್ವೀಟ್ ಮಾಡಿದ್ದರು.

Prakasj Raj Tweet About Sudeep
Image Source: Times Now

Join Nadunudi News WhatsApp Group

ಕಿಚ್ಚನಿಗೆ ಟಾಂಗ್ ಕೂಟ ನಟ ಪ್ರಕಾಶ್ ರಾಜ್
ಇದೀಗ ನಟ ಕಿಚ್ಚ ಸುದೀಪ್ ರಾಜಕೀಯ ಸೇರ್ಪಡೆ ಬಗ್ಗೆ ಪ್ರಕಾಶ್ ರಾಜ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ನಟ ಸುದೀಪ್ ಸುದ್ದಿಗೋಷ್ಠಿಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ನಾನು ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಮಾಮ ಎಂದು ಕರೆಯುತ್ತ ಬಂದಿದ್ದೇನೆ. ನನ್ನ ಕಷ್ಟದ ದಿನಗಳಲ್ಲಿ ಅವರು ನನಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಅವರಿಗೆ ನನ್ನ ಬೆಂಬಲ ಇರುತ್ತದೆ ಎಂದಿದ್ದರು.

ಸದ್ಯ ಈ ವಿಚಾರವನ್ನು ಇಟ್ಟುಕೊಂಡು ನೋಡ್ರಪ್ಪಾ ನಿಮ್ ಮಾಮನೋ, ನಿಮ್ ಅತ್ತೇನೋ, ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದರೆ ನೀವು ದುಡಿದಿದ್ರಲ್ಲಿ 10%, 20% ಇಲ್ಲ 30% ಕೊಡಿ ಮತ್ತು ಅದು ನಿಮ್ಮಿಷ್ಟ. ಆದರೆ ಪ್ರಜೆಗಳ 30% ಕೊಳ್ಳೆ ಹೊಡೆಯೋಕೆ ಬಿಡಬೇಡಿ ಅಷ್ಟೇ ಎಂದು ಹೇಳಿ ಪ್ರಕಾಶ್ ರಾಜ್ ಕಿಚ್ಚನಿಗೆ ಟಾಂಗ್ ಕೊಟ್ಟಿದ್ದಾರೆ.

Prakasj Raj Tweet About Sudeep
Image Source: Times Now

Join Nadunudi News WhatsApp Group