Preparatory Exam: SSLC ಪರೀಕ್ಷೆಯಲ್ಲಿ ಮತ್ತೆ ದೊಡ್ಡ ಬದಲಾವಣೆ, ಹೊಸ ವೇಳಾಪಟ್ಟಿ ಈ ರೀತಿಯಲ್ಲಿದೆ

ರಾಜ್ಯ ಸರ್ಕಾರ ಮುಸ್ಲಿಮರಿಗಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಬದಲಿಸಿದೆ.

Preparatory Exam Timings Change: ಸದ್ಯ 2023 -24 ಸಾಲಿನ ವಿದ್ಯಾರ್ಥಿಗಳಿಗೆ ಇನ್ನೇನು ಕೆಲವೇ ತಿಂಗಳಿನಲ್ಲಿ ವಾರ್ಷಿಕ ಪರೀಕ್ಷೆ ಎದುರಾಗುತ್ತದೆ. ಈಗಾಗಲೇ ಕರ್ನಾಟಕ ಶಾಲಾ ಶಿಕ್ಷಣ ಮಂಡಳಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಇನ್ನು ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಎದುರಿಸುವ ಮುನ್ನ ಪೂರ್ವ ಸಿದ್ದತಾ ಪರೀಕ್ಷೆಯನ್ನು (Preparatory Exam) ಎದುರಿಸಬೇಕಾಗುತ್ತದೆ. ಈಗಾಗಲೇ SSLC ವಿದ್ಯಾರ್ಥಿಗಳ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿಯನ್ನು ಕೂಡ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆದರೆ ಇದೀಗ ರಾಜ್ಯ ಸರ್ಕಾರ ಮುಸ್ಲಿಮರಿಗಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಬದಲಿಸಿದೆ.

Preparatory Exam Timings Change
Image Credit: Brainfeedmagazine

ಮುಸ್ಲಿಮರಿಗಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಬದಲಿಸಿದ ರಾಜ್ಯ ಸರ್ಕಾರ …!
ಸದ್ಯ ರಾಜ್ಯ ಸರ್ಕಾರ ಮುಸ್ಲಿಮರಿಗಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಬದಲಿಸಿದೆ. ಶುಕ್ರವಾರವಷ್ಟೇ ಪರೀಕ್ಷೆಯನ್ನು ಬೆಳಗ್ಗೆ ಬದಲು ಮಧ್ಯಾಹ್ನ ನಿಗದಿಪಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಸರಕಾರ ಈಗ ಪರೀಕ್ಷೆಯಲ್ಲೂ ರಾಜಕೀಯ ಮಾಡುತ್ತಿದೆ ಮತ್ತು ಮುಸ್ಲಿಮರನ್ನು ಮೆಚ್ಚಿಸಲು ಯತ್ನಿಸುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದಾರೆ.

ನಮಾಜ್ ಗಾಗಿ ಪರೀಕ್ಷೆಯ ಸಮಯ ಬದಲಾವಣೆ
ಇನ್ನು SSLC ಪೂರ್ವ ಸಿದ್ಧತಾ ಪರೀಕ್ಷೆ ಫೆಬ್ರವರಿ 26 ರಿಂದ ಮಾರ್ಚ್ 2 ರವರೆಗೆ ನಡೆಯಲಿದ್ದು, ಶುಕ್ರವಾರ ಹೊರತುಪಡಿಸಿ ವಿವಿಧ ವಿಷಯಗಳ ಪರೀಕ್ಷಾ ಸಮಯವನ್ನು ಬೆಳಿಗ್ಗೆ 10.15 ರಿಂದ 1.30 ರ ವರೆಗೆ ನಿಗದಿಪಡಿಸಲಾಗಿದೆ. ಶಿಕ್ಷಣ ಇಲಾಖೆಯು ಮುಸ್ಲಿಮರು ನಮಾಜ್ ಮಾಡಲು ಸಹಕಾರಿಯಾಗಬೇಕು ಎನ್ನುವ ಉದ್ದೇಶದಿಂದ ಶುಕ್ರವಾರದಂದು ಮಾತ್ರ ಮಧ್ಯಾಹ್ನ 2 ರಿಂದ ಸಂಜೆ 5.15 ರ ವರೆಗೆ ಸಮಯವನ್ನು ನಿಗದಿಪಡಿಸಿದೆ. ಹೀಗಾಗಿ ಆಕ್ಷೇಪ ವ್ಯಕ್ತವಾಗಿದೆ. ಈ ರೀತಿಯ ವೇಳಾಪಟ್ಟಿಯನ್ನು ತಿದ್ದುಪಡಿ ಮಾಡಿದ್ದಾಕಾಗಿ ಸಾಕಷ್ಟು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Karnataka SSLC Preparatory Exam 2024
Image Credit: Jagranjosh

SSLC ಪೂರ್ವ ಸಿದ್ದತಾ ಪರೀಕ್ಷಾ ವೇಳಾಪಟ್ಟಿ
26-02-2024: ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ಉರ್ದು,ಸಂಸ್ಕೃತ

Join Nadunudi News WhatsApp Group

27-02-2024: ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ

28-02-2024: ತೃತೀಯ ಭಾಷೆ ಹಿಂದಿ, ಇಂಗ್ಲಿಷ್, ಕನ್ನಡ, ಕೊಂಕಣಿ, ಅರೇಬಿಕ್, ಪರ್ಷಿಯನ್, ಉರ್ದು,ಸಂಸ್ಕೃತ.

29-02-2024: ಗಣಿತ

1-03-2024: ವಿಜ್ಞಾನ

2-03-2024: ಸಮಾಜ ವಿಜ್ಞಾನ

Join Nadunudi News WhatsApp Group