Narendra Modi: ಯಾರು ಮಾಡದ ಸಾಧನೆ ಮಾಡಿದ ನರೇಂದ್ರ ಮೋದಿ, ಸಮೀಕ್ಷೆಯಿಂದ ತಿಳಿದುಬಂದು ರೋಚಕ ಮಾಹಿತಿ.

ವಿಶ್ವದ ಜನಪ್ರಿಯ ನಾಯಕರಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ.

Narendra Modi Achievements: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕರ್ನಾಟಕ ಜನತೆಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಜನಸಾಮನ್ಯರ ಅನುಕೂಲಕ್ಕಾಗಿ ನರೇಂದ್ರ ಮೋದಿ ಅವರು ಸಾಕಷ್ಟು ಯೋಜನೆಗಳನ್ನು ಬಿಡಿಗಡೆ ಮಾಡಿದ್ದಾರೆ. ಮಹಿಳೆಯರಿಗೂ ಕೂಡ ಮೋದಿ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಲ್ಲಿವೆ.

ಇದೀಗ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಜನಪ್ರಿಯ ನಾಯಕರಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದಾರೆ.

Narendra Modi is the number one popular leader
Image Credit: Hindustantimes

ಜನಪ್ರಿಯ ನಾಯಕರಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡ ನರೇಂದ್ರ ಮೋದಿ
ಜಾಗತಿಕ ಜನಪ್ರಿಯ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ವಿಶ್ವದ ನಂಬರ್ 1 ಜನಪ್ರಿಯ ನಾಯಕರ ಪಟ್ಟಿಯಲ್ಲೇ ಮುಂದುವರೆದಿದ್ದಾರೆ.

ಈ ಬಗ್ಗೆ ಮಾರ್ನಿಂಗ್ ಕನ್ಸಲ್ಟ್ ಎನ್ನುವಂತಹ ಸಂಸ್ಥೆ ಸಮೀಕ್ಷೆ ನಡೆಸಿದೆ. ತನ್ನ ವರದಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಶೇಕಡಾ 76 ರಷ್ಟು ಅನುಮೋದನೆಯ ರೇಟಿಂಗ್ ಪಡೆದಿರುವಂತ ಪ್ರಧಾನಿ ಮೋದಿಯವರು ನಂಬರ್ 1 ಜನಪ್ರಿಯ ಜಾಗತಿಕ ನಾಯಕರಾಗಿ ಮತ್ತೊಮ್ಮೆ ಮೊದಲ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

ಅಮೇರಿಕಾದ ಸಮೀಕ್ಷೆಯಲ್ಲಿ ಮೋದಿಗೆ ನಂಬರ್ ಒನ್ ಸ್ಥಾನ
ಅಮೆರಿಕಾ ಮೂಲಕ ಈ ಸಂಸ್ಥೆ ಪ್ರತಿ ತಿಂಗಳು ಸಮೀಕ್ಷೆ ನಡೆಸುತ್ತದೆ. ಅದೇ ರೀತಿ ಜೂನ್ ತಿಂಗಳಿನಲ್ಲಿ ಸಮೀಕ್ಷೆ ನಡೆಸಿತ್ತು. ಅದರಲ್ಲಿ ಪ್ರಧಾನಿ ಮೋದಿ ಜನಪ್ರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Join Nadunudi News WhatsApp Group

Narendra Modi is the number one popular leader
Image Credit: Economictimes

ಇನ್ನು ಶೇಕಡಾ 59 ರಷ್ಟು ರೇಟಿಂಗ್ ಪಡೆದುಕೊಂಡಿರುವಂತ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುವಲ್ ಲೋಪೆಜ್ ಒಬ್ರಡಾರ್ 2 ನೇ ಸ್ಥಾನದಲ್ಲಿದ್ದರೆ, ಶೇಕಡಾ 53 ರಷ್ಟು ರೇಟಿಂಗ್ ಪಡೆದುಕೊಂಡಿರುವಂತ ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಆಲ್ಬನಿಸ್ ಅವರು 3 ನೇ ಸ್ಥಾನದಲ್ಲಿದ್ದಾರೆ.

ಈ ನಂತರದಲ್ಲಿ ಶೇಕಡಾ 40 ರಷ್ಟು ರೇಟಿಂಗ್ ಪಡೆದ ಅಮೆರಿಕಾ ಅಧ್ಯಕ್ಷ ಜೋ ಬೈಡನ್ 6 ನೇ ಸ್ಥಾನ, ಶೇಕಡಾ 32 ರಷ್ಟು ರೇಟಿಂಗ್ ಪಡೆದಿರುವಂತ ಬ್ರಿಟನ್ ಪ್ರಧಾನಿ ರಿಷಿ ಸುನಕ್ 9 ನೇ ಸ್ಥಾನವನ್ನು ಗಳಿಸಿದ್ದಾರೆ.

Join Nadunudi News WhatsApp Group