Primo Electric: ಮಾರುಕಟ್ಟೆಗೆ ಬಂತು ದೇಸಿ ಎಲೆಕ್ಟ್ರಿಕ್ ಸ್ಕೂಟರ್, ಕಡಿಮೆ ಬೆಲೆ ಮತ್ತು 65 ಕಿಲೋಮೀಟರ್ ಮೈಲೇಜ್

ಅತಿ ಅಗ್ಗದ ಬೆಲೆಗೆ ಲಾಂಚ್ ಆಗಲಿದೆ ಹೊಚ್ಚ ಹೊಸ Primo Electric ಮಾದರಿ, ದೇಶದ ಮೊದಲ ಪಾರದರ್ಶಕ ಸ್ಕೂಟರ್

Primo Electric Scooter Price And Mileage: ಭಾರತೀಯ ಆಟೋ ವಲಯದಲ್ಲಿ Electric Scooter ಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನರು ತಮ್ಮ ಇಂಧನದ ಖರ್ಚನ್ನು ಉಳಿಸಲು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನೇ ಬಳಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳೇ ಹೆಚ್ಚು ಪರಿಚಯವಾಗುತ್ತಿದೆ. ಇನ್ನು ಗ್ರಾಹಕರು ಹೆಚ್ಚಾಗಿ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಖರೀದಿಸಲು ಬಯಸುತ್ತಾರೆ.

ಇದೀಗ ನೀವು ಹೊಸ ವರ್ಷಕ್ಕೆ ಹೊಸ Electric scooter ಖರೀದಿಸುವ ಯೋಜನೆಯಲ್ಲಿದ್ದು, ನಿಮಗೆ ಯಾವ ಮಾದರಿಯ ಸ್ಕೂಟರ್ ಖರೀದಿಸಬೇಕು ಎನ್ನುವ ಗೊಂದಲವಿದ್ದರೆ ಇಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಹೆಚ್ಚಿನ ಮೈಲೇಜ್ ನೀಡುವ Electric Scooter ನ ಬಗ್ಗೆ ಮಾಹಿತಿಯನ್ನು ಹೇಳಲಿದ್ದೇವೆ. ಈ ಮಾಹಿತಿ ನಿಮಗೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಸಹಾಯವಾಗಬಹುದು.

Primo Electric Scooter
Image Credit: Hindustantimes

Primo Electric Scooter
ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ Jitendra EV Tech ಸದ್ಯ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಸಲು ನೂತನ ಮಾದರಿಯ Primo Electric Scooter ಅನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಜನರಿಗೆ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ. ಕೇವಲ 79,999 ರೂ. ಎಕ್ಸ್ ಶೋರೂಮ್ ಬೆಲೆಯಲ್ಲಿ ಕಂಪನಿಯು Primo Electric Scooter ಅನ್ನು ಗ್ರಾಹಕರಿಗಾಗಿ ಪರಿಚಯಿಸಿದೆ.

ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 65 ಕಿಲೋಮೀಟರ್ ಮೈಲೇಜ್
ಟ್ರಾನ್ಸಫರೆಂಟ್ ಬಾಡಿವರ್ಕ್ ನೊಂದಿಗೆ ನೂತನ ಮಾದರಿ ಬರಲಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಡಿಸಿಲ್ಲ. Transparent Bodywork ನಲ್ಲಿ ಪರಿಚಯವಾದರೆ ದೇಶಿಯ ಮಾರುಕಟ್ಟೆಯಲ್ಲಿ ಮೊಟ್ಟ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿ Primo Electric Scooter ಗುರುತಿಸಿಕೊಳ್ಳಲಿದೆ.

Primo Electric Scooter Price
Image Credit: Hindustantimes

ನೀವು Primo Electric Scooter ನಲ್ಲಿ ಪ್ರೈಮೊ ಎಕೊನಾಮಿ, ಹೈ ಸ್ಪೀಡ್ ಮತ್ತು ಬೂಸ್ಟ್ ನ ಮೂರು ರೌಡಿಂಗ್ ಮೋಡ್ ನ ಆಯ್ಕೆಯನ್ನು ನೋಡಬಹುದು. ಕಂಪನಿಯು Primo Electric Scooter ನಲ್ಲಿ ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ನೂತನ ಮಾದರಿಯು ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 65 ಕಿಲೋಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group

Primo Electric Scooter Feature
•Digital instrument console
•LED lamps
•USB charging port
•Side-stand indicator
•Thermal Propagation Alert
•Reverse assist

Join Nadunudi News WhatsApp Group