ಅಮೇರಿಕಾದಲ್ಲಿ ಹೊಸ ಉದ್ಯಮ ಆರಂಭಿಸಿದ ನಟಿ ಪ್ರಿಯಾಂಕಾ ಚೋಪ್ರಾ, ಭಾರತದ ಹೆಮ್ಮೆ ಎಂದ ಫ್ಯಾನ್ಸ್.

ನಟಿ ಪ್ರಿಯಾಂಕಾ ಚೋಪ್ರಾ ದೇಶದ ಚಿತ್ರರಂಗ ಕಂಡ ಖ್ಯಾತ ನಟಿಯರಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಹಳ ಇದೆ ಎಂದು ಹೇಳಬಹುದು. ಆರಂಭದಲ್ಲಿ ಹಿಂದಿ ಚಿತ್ರರಂಗದಲ್ಲಿ ಮಿಂಚಿದ ನಟಿ ಪ್ರಿಯಾಂಕಾ ಚೋಪ್ರಾ ಅವರು ನಂತರ ಹಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡು ದೇಶದಲ್ಲಿ ಸ್ಟಾರ್ ನಟಿ ಅನ್ನುವ ಹೆಗ್ಗಳಿಕೆಯನ್ನ ಗಳಿಸಿಕೊಂಡರು. ಬರಿ ಚಿತ್ರದಲ್ಲಿ ಮಾತ್ರ ಕಾಣಿಸಿಕೊಳ್ಳದ ನಟಿ ಪ್ರಿಯಾಂಕಾ ಚೋಪ್ರಾ ಅವರು ಕೆಲವು ದೊಡ್ಡ ದೊಡ್ಡ ಜಾಹಿರಾತಿನಲ್ಲಿ ಕೂಡ ಕಾಣಿಸಿಕೊಂಡು ಸಕತ್ ಫೇಮಸ್ ಆದರೂ ಎಂದು ಹೇಳಬಹುದು.

ಹಾಲಿವುಡ್ ನಲ್ಲಿ ಅವಕಾಶಗಳು ಬಂದ ನಂತರ ಯುಎಸ್ ಗೆ ಹಾರಿದ ನಟಿ ಪ್ರಿಯಾಂಕಾ ಚೋಪ್ರಾ ಅವರು ನಂತರ ಖ್ಯಾತ ಗಾಯಕ ನಿಕ್ ಜೋನಸ್ ಅನ್ನು ಮದುವೆ ಮಾಡಿಕೊಂಡರು. ಹೌದು ನಿಕ್ ಜೋನಸ್ ಅನ್ನು ಮದುವೆ ಮಾಡಿಕೊಂಡ ನಂತರ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಈಗ ಮತ್ತೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದ್ದಾರೆ ಎಂದು ಹೇಳಬಹುದು. ಹೌದು ಯುಎಸ್ ನಲ್ಲಿ ಹೊಸ ವ್ಯವಹಾರವನ್ನ ನಟಿ ಪ್ರಿಯಾಂಕಾ ಚೋಪ್ರಾ ಅವರು ಗಂಡ ನಿಕ್ ಜೊತೆ ಸೇರಿ ಆರಂಭ ಮಾಡಿದ್ದು ಸದ್ಯ ಈ ವಿಷಯ ಸಕತ್ ವೈರಲ್ ಆಗಿದೆ.

Priyanka chopra sona home

ಹಾಗಾದರೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಆರಂಭಿಸಿದ ಹೊಸ ಉದ್ಯಮ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಯುಎಸ್ ನಲ್ಲಿ ಸೋನಾ ಅನ್ನುವ ಹೊಸ ರೆಸ್ಟೋರೆಂಟ್ ಅನ್ನು ಆರಂಭ ಮಾಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಅವರು ಕಳೆದ ವರ್ಷವೇ ಯುಎಸ್ ನಲ್ಲಿ ಈ ಹೊಸ ಸೋನಾ ರೆಸ್ಟೋರೆಂಟ್ ಆರಂಭ ಮಾಡಿದ್ದು ತುಂಬಾ ತಾಂಡವಾಗಿ ಬೆಳಕಿಗೆ ಬಂದಿದೆ ಎಂದು ಹೇಳಬಹುದು. ಯುಎಸ್ ಪ್ರವಾಸಕ್ಕಾಗಿ ಬರುವ ಭಾರತದ ಜನರ ಅನುಕೂಲಕ್ಕಾಗಿ ನಟಿ ಪ್ರಿಯಾಂಕಾ ಚೋಪ್ರಾ ಅವರು ಯುಎಸ್ ನಲ್ಲಿ ಸೋನಾ ರೆಸ್ಟೋರೆಂಟ್ ಆರಂಭ ಮಾಡಿದ್ದಾರಂತೆ.

ಇನ್ನು ಇದರ ಕುರಿತು ಮಾಹಿತಿ ನೀಡಿರುವ ನಟಿ ಪ್ರಿಯಾಂಕಾ ಚೋಪ್ರಾ, ನನಗೆ ನಿಮ್ಮೆಲ್ಲರಿಗೂ ಸೋನಾ ಹೋಮ್ ಅನ್ನು ಪರಿಚಯಿಸಲು ಹೆಮ್ಮೆಯಾಗುತ್ತಿದೆ. ಭಾರತದಿಂದ ಬಂದು, ಅಮೇರಿಕಾವನ್ನು ಎರಡನೇ ಮನೆಯಾಗಿಸಿಕೊಳ್ಳುವುದು ಸವಾಲಿನ ಕೆಲಸವಾಗಿತ್ತು. ಆದರೆ ನನ್ನ ಪಯಣ, ನನ್ನ ಎರಡನೇ ಕುಟುಂಬ ಮತ್ತು ಸ್ನೇಹಿತರನ್ನು ಪಡೆಯುವ ಸ್ಥಳಕ್ಕೆ ತಲುಪಿಸಿತು. ನಾನು ಮಾಡುವ ಪ್ರತಿಯೊಂದರಲ್ಲೂ ಭಾರತವನ್ನು ಬಿಂಬಿಸಲು ಪ್ರಯತ್ನಿಸುತ್ತೇನೆ ಮತ್ತು ಇದು ಆ ಆಯೋಚನೆಯ ಮುಂದುವರಿಕೆ ಎಂದಿರುವ ಪ್ರಿಯಾಂಕ, ಮತ್ತೊಂದು ಪೋಸ್ಟಿನಲ್ಲಿ ತನ್ನ ಹೋಮ್‍ವೇರ್ ಲೈನ್‍ನ ಕೆಲವು ವಸ್ತುಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ನೇಹಿತರೆ ಪ್ರಿಯಾಂಕಾ ಚೋಪ್ರಾ ಅವರ ಈ ಹೊಸ ಉದ್ಯಮದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Priyanka chopra sona home

Join Nadunudi News WhatsApp Group