Property Limits: ಒಬ್ಬ ಅವಿವಾಹಿತ ಪುರುಷ ಎಷ್ಟು ಭೂಮಿ ಖರೀದಿಸಬಹುದು, ಇದಕ್ಕಿಂತ ಹೆಚ್ಚು ಖರೀದಿಸುವಂತಿಲ್ಲ.

ದೇಶದಲ್ಲಿ ಒಬ್ಬ ಮದುವೆಯಾಗದ ವ್ಯಕ್ತಿ ಎಷ್ಟು ಆಸ್ತಿಯನ್ನ ಖರೀದಿ ಮಾಡಬಹುದು.

Land Purchase Limit For Unmarried Person: ಸಾಮಾನ್ಯವಾಗಿ ಭಾರತೀಯ ಕಾನೂನಿನಲ್ಲಿ (Indian Law) ಆಸ್ತಿಗೆ (Property)  ಸಂಬಂಧಿಸಿದಂತೆ ಅನೇಕ ನಿಯಮಗಳಿವೆ. ತಂದೆ ತಾಯಿಯ ಆಸ್ತಿಗೆ ಅರ್ಹರಾಗಿರುವವರು ಯಾರು ಎನ್ನುವ ಬಗ್ಗೆ ಭಾರತೀಯ ಕಾನೂನು ಅನೇಕ ತಿದ್ದುಪಡಿಯನ್ನು ತಂದಿದೆ.

ಇನ್ನು ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಕೂಡ ಕಾನೂನಿನಲ್ಲಿ ಅನೇಕ ನಿಯಮಗಳಿವೆ. ಇದೀಗ ಭಾರತೀಯ ಕಾನೂನಿನ ಪ್ರಕಾರ ಒಬ್ಬ ಅವಿವಾಹಿತ ಪುರುಷ ಎಷ್ಟು ಭೂಮಿ ಖರೀದಿಸಬಹುದು ಎನ್ನುವ ನಿಯಮದ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

How much property can an unmarried person buy in the country
Image Credit: Sochparprahaar

ಒಬ್ಬ ಅವಿವಾಹಿತ ಪುರುಷ ಎಷ್ಟು ಭೂಮಿ ಖರೀದಿಸಬಹುದು
ಒಬ್ಬ ವ್ಯಕ್ತಿ ಎಷ್ಟು ಭೂಮಿಯ ಮಾಲೀಕತ್ವವನ್ನು ಪಡೆಯಲು ಸಾಧ್ಯ ಎನ್ನುವುದಕ್ಕೆ ಪ್ರತ್ಯೇಕ ನಿಯಮವಿದೆ. ಆಸ್ತಿ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಒಂದೊಂದು ರಾಜ್ಯದಲ್ಲಿ ಒಂದು ರೀತಿಯ ಆಸ್ತಿ ಖರೀದಿಯ ನಿಯಮಗಳಿರುತ್ತದೆ. ಇನ್ನು ಭಾರತೀಯ ಕಾನೂನಿನ ನಿಯಮದ ಪ್ರಕಾರ ಭೂಮಿಯನ್ನು ಹೊಂದುವುದು ಸೂಕ್ತ.

ಇನ್ನು ಒಬ್ಬ ಅವಿವಾಹಿತ ಪುರುಷ ಎಷ್ಟು ಭೂಮಿ ಖರೀದಿಸಬಹುದು ಎನ್ನುವುದಕ್ಕೆ ಕಾನೂನಿನಲ್ಲಿ ಪ್ರತ್ಯೇಕ ನಿಯಮವಿದೆ. ಭೂ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಅವಿವಾಹಿತ ವ್ಯಕ್ತಿ 7.5 ಎಕರೆ ಭೂಮಿಯನ್ನು ಮಾತ್ರ ಖರೀದಿಸಬಹುದು. ಇನ್ನು 5 ಸದಸ್ಯರ ಅವಿಭಕ್ತ ಕುಟುಂಬವು 15 ಎಕರೆಗಳಷ್ಟು ಭೂಮಿಯನ್ನು ಖರೀದಿಸಲು ಮಾತ್ರ ಅವಕಾಶವಿದೆ. 15 ಎಕರೆಗಿಂತ ಹೆಚ್ಚಿನ ಭೂಮಿಯನ್ನು ಖರೀದಿಸುವಂತಿಲ್ಲ.

How much property can an unmarried person buy in the country
Image Credit: Cliveemson

ಕರ್ನಾಟಕದಲ್ಲಿ ಭೂಮಿ ಖರೀದಿಯ ಗರಿಷ್ಟ ಮಿತಿ ಎಷ್ಟು
ಇನ್ನು ಭಾರತೀಯ ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿಯು ಗರಿಷ್ಟ 59 .95 ಎಕರೆ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶವಿದೆ. ಕರ್ನಾಟಕ ರಾಜ್ಯದಲ್ಲಿ ಕೂಡ ಭೂಮಿ ಖರೀದಿಯಲ್ಲಿ ಪ್ರತ್ಯೇಕ ನಿಯಮವಿದೆ. ಕರ್ನಾಟಕ ರಾಜ್ಯದ ರೈತರು ಗರಿಷ್ಟ 54 ಎಕರೆ ಭೂಮಿಯನ್ನು ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group