Property Purchase: ಮನೆ, ಆಸ್ತಿ ಮತ್ತು ಜಮೀನು ಖರೀದಿಸುವವರಿಗೆ ಕೇಂದ್ರದಿಂದ ಎಚ್ಚರಿಕೆ, ಈ ದಾಖಲೆ ಪರಿಶೀಲನೆ ಕಡ್ಡಾಯ

ಮನೆ, ಆಸ್ತಿ ಮತ್ತು ಜಮೀನು ಖರೀದಿಸುವವರಿಗೆ ಕೇಂದ್ರದಿಂದ ಎಚ್ಚರಿಕೆ

Property Purchase Rule: ಭಾರತದ ಕಾನೂನಿನಲ್ಲಿ ಆಸ್ತಿ ಖರೀದಿಗೆ ಅದರದ್ದೇ ಆದ ನಿಯಮಗಳಿವೆ ಎನ್ನಬಹುದು. ಆಸ್ತಿ ಖರೀದಿಯ ಸಮಯದಲ್ಲಿ ಕೇಂದ್ರದ ಎಲ್ಲ ನಿಯಮವನ್ನು ಪಾಲಿಸಬೇಕಾಗುತ್ತದೆ.  ಒಂದು ಸಣ್ಣ ಆಸ್ತಿಯನ್ನು ಕೂಡ ಬೇರೆಯವರಿಂದ ಖರೀದಿ ಮಾಡಬೇಕಿದ್ದರೆ ನೀವು ಆಸ್ತಿ ಖರೀದಿಯ ಎಲ್ಲಾ ನಿಯಮಗಳ ಬಗ್ಗೆ ತಿಳಿರಬೇಕು.

ಆಸ್ತಿ ಖರೀದಿಯ ಸಮಯದಲ್ಲಿ ದಾಖಲೆಗಳು ಮುಖ್ಯ ಪಾತ್ರ ವಹಿಸುತ್ತದೆ ಎನ್ನಬಹುದು. ಆಸ್ತಿ ಖರೀದಿಸುವ ಸಮಯದಲ್ಲಿ ಈ ಎಲ್ಲ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಿ. ದೇಶದಲ್ಲಿ ಹೆಚ್ಚುತ್ತಿರುವ ವಂಚನೆಯ ತಡೆಗಾಗಿ ಕೇಂದ್ರ ಸರ್ಕಾರ ವಿವಿಧ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಸ್ತಿ ಖರೀದಿಯ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ.

Property Purchase Rule
Image Credit: Adanirealty

ಮನೆ, ಆಸ್ತಿ ಮತ್ತು ಜಮೀನು ಖರೀದಿಸುವವರಿಗೆ ಕೇಂದ್ರದಿಂದ ಎಚ್ಚರಿಕೆ
•ಆಸ್ತಿಯನ್ನು ಯಾರು ಹೊಂದಿದ್ದಾರೆ, ಆಸ್ತಿಯ ಮೇಲೆ ಯಾವುದೇ ಮೂರನೇ ವ್ಯಕ್ತಿಯ ಹಕ್ಕು ಇದೆಯೇ, ಯಾವುದೇ ರೀತಿಯ ಮೊಕದ್ದಮೆ ಇದೆಯೇ, ಅಥವಾ ಆಸ್ತಿಯ ಮೇಲೆ ಯಾವುದೇ ಸಾಲವಿದೆಯೇ ಮತ್ತು ಅದು ಇದ್ದರೆ ಮರುಪಾವತಿಯಾಗಿದೆಯೋ, ಇಲ್ಲವೋ ಎನ್ನುವುದನ್ನು ತಿಳಿದಿರಬೇಕು.

•ನೀವು ಖರೀದಿಸುವ ಆಸ್ತಿಯಲ್ಲಿ ಎಷ್ಟು ವರ್ಷಗಳಿಂದ ವಹಿವಾಟು ನಡೆಯುತ್ತಿದೆ, ಆಸ್ತಿಯನ್ನು ನಿರ್ಮಿಸಿದ ಸಮಯದಿಂದ ಎಷ್ಟು ಜನರು ಅದನ್ನು ಹೊಂದಿದ್ದಾರೆ, ಮತ್ತು ಅದರ ಪ್ರಸ್ತುತ ಮಾಲೀಕರು ಯಾರು..? ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಅಗತ್ಯ.

•ಡೆವಲಪರ್ ಯಾವ ಜಗದಲ್ಲಿ ಸೈಟ್ ನಿರ್ಮಾಣ ಮಾಡುತ್ತಿದ್ದಾರೆ, ಯಾವಾಗ ನಿರ್ಮಾಣ ಆರಂಭಿಸಿದ್ದಾರೆ. ಯಾವಾಗ ಹಕ್ಕು ಬದಲಾವಣೆ ಆಗಿದೆ, ಪ್ರಸ್ತುತ ಯಾರು ಹಕ್ಕನ್ನು ಹೊಂದಿದ್ದಾರೆ ಎನ್ನುವುದನ್ನು ತಿಳಿದಿರಬೇಕು.

Join Nadunudi News WhatsApp Group

Property Purchase Latest
Image Credit: Magicbricks

•ಆಸ್ತಿ ಖರೀದಿಯ ಸಮಯದಲ್ಲಿ RTC ಕೂಡ ಪರಿಶೀಲಿಸಿಕೊಳ್ಳಬೇಕು. ಜಾಗ ಯಾರ ಹೆಸರಿನಲ್ಲಿದೆ, ಪ್ರಸ್ತುತ ಯಾರು ಆ ಜಗದ ಹಕ್ಕನ್ನು ಹೊಂದಿದ್ದಾರೆ ಎನ್ನುವುದನ್ನು ತಿಳಿದಿರಬೇಕು.

•ಈ ಹಿಂದೆ ವ್ಯವಸಾಯದ ಭೂಮಿ ಆಗಿದುವು, ಪ್ರಸ್ತುತ ಲೇಔಟ್ ಆಗಿರುವ ಜಾಗ ಬದಲಾವಣೆ ಮಾಡಲು ಆಟವಾಬ್ ಕನ್ವರ್ಷನ್ ಮಾಡಲು DC ಪರ್ಮಿಷನ್ ಸಿಕ್ಕಿದೆಯೇ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು.

•ಆಸ್ತಿಯನ್ನು ಖರೀದಿಸುವ ಮೊದಲು ಮುಖ್ಯವಾಗಿ ಸರ್ಕಾರಕ್ಕೆ ಸಂಬಂಧಪಟ್ಟ ಇಲಾಖೆಯಿಂದ NOC ಇದೆಯಾ ಎನುವುಡಾಕ್ ಪರಿಶೀಲಿಸಿಕೊಳ್ಳಬೇಕು.

•ನೀವು ಯಾರಿಂದ ಆಸ್ತಿಯನ್ನು ಖರೀದಿಸುತ್ತಿದ್ದೀರೋ ಅವರ ಹೆಸರಿನಲ್ಲಿ ಪ್ರತ್ಯೇಕವಾಗಿ ಖಾತಾ ಬದಲಾವಣೆ ಆಗಿದೆಯೇ..? ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು.

Join Nadunudi News WhatsApp Group