Property Limit: ಮದುವೆಯಾಗದ ಯುವಕ ಯುವತಿಯರು ಇದಕ್ಕಿಂತ ಹೆಚ್ಚು ಆಸ್ತಿ ಖರೀದಿಸುವಂತಿಲ್ಲ, ಕೇಂದ್ರದ ಆದೇಶ.

ಇದೀಗ ಭಾರತೀಯ ಕಾನೂನಿನ ಪ್ರಕಾರ ವಿವಾಹಿತರು ಹಾಗೂ ಅವಿವಾಹಿತರ ಎಷ್ಟು ಆಸ್ತಿಯನ್ನು ಹೊಂದಬಹುದು.

Property Purchasing Limit In India: ದೇಶದಲ್ಲಿ ಉತ್ತಮ ಹೂಡಿಕೆಯ ವಿಧಾನ ಎಂದರೆ ಅದು ಆಸ್ತಿ ಖರೀದಿ ಎನ್ನಬಹದು. ಉಲಿತ್ಯ ಯೋಜನೆ, ಮ್ಯೂಚುವಲ್ ಫಂಡ್ ಯೋಜನೆ, ಚಿನ್ನದ ಮೇಲಿನ ಹೂಡಿಕೆಗಿಂತ ಆಸ್ತಿ ಖರೀದಿಸಿ (Property Purchase) ಹಣವನ್ನು ಉಳಿಸುವುದು ಹೆಚ್ಚಿನ ಲಾಭವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಜನರು ಹೆಚ್ಚಾಗಿ ತಮ್ಮ ಬಳಿ ಇರುವ ಹಣವನ್ನು ಆಸ್ತಿ ಖರೀದಿಗೆ ವ್ಯಯಿಸಲು ಬಯಸುತ್ತಾರೆ. ಇನ್ನು ಭಾರತೀಯ ಕಾನೂನಿನಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳಿವೆ.

ಆಸ್ತಿ ಖರೀದಿಯಲ್ಲಿ ಯಾವುದೇ ರೀತಿಯ ಸಣ್ಣ ತಪ್ಪಾದರೂ ಕೂಡ ಆಸ್ತಿ ಕೈತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಹೊಸ ಭೂಮಿಯನ್ನು ಖರೀದಿಸುವ ಸಮಯದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಅದು ಕಡಿಮೆಯೇ. ಏಕೆಂದರೆ ಇತ್ತೀಚಿಗೆ ಆಸ್ತಿ ನೋಂದಣಿ ವಿಚಾರವಾಗಿ ಸಾಕಷ್ಟು ವಂಚನೆಗಳು ನಡೆಯುತ್ತಿವೆ. ಇದೀಗ ಭಾರತೀಯ ಕಾನೂನಿನ ಪ್ರಕಾರ ವಿವಾಹಿತರು ಹಾಗೂ ಅವಿವಾಹಿತರ ಎಷ್ಟು ಆಸ್ತಿಯನ್ನು ಹೊಂದಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Property Purchasing Limit latest update
Image Credit: Magicbricks

ಆಸ್ತಿ ಖರೀದಿಯ ಮಿತಿ ಎಷ್ಟಿದೆ ಗೊತ್ತಾ..?
ಭಾರತೀಯ ಕಾನೂನಿನಲ್ಲಿ ಆಸ್ತಿ ಖರೀದಿಗೆ ಕೂಡ ನಿಯಮಗಳನ್ನು ವಿಧಿಸಲಾಗಿದೆ. ಒಬ್ಬ ವ್ಯಕ್ತಿ ಎಷ್ಟು ಭೂಮಿಯ ಮಾಲೀಕತ್ವವನ್ನು ಪಡೆಯಲು ಸಾಧ್ಯ ಎನ್ನುವುದಕ್ಕೆ ಪ್ರತ್ಯೇಕ ನಿಯಮವಿದೆ. ಮದುವೆಯಾಗದ ಯುವಕ ಯುವತಿಯರು ಎಷ್ಟು ಆಸ್ತಿಯನ್ನು ಖರೀದಿಸಬೇಕು ಎನ್ನುವ ಬಗ್ಗೆ ಕಾನೂನಿನಲ್ಲಿ ಪ್ರತ್ಯೇಕ ನಿಯಮವಿದೆ. ಆಸ್ತಿ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.

ಒಂದೊಂದು ರಾಜ್ಯದಲ್ಲಿ ಒಂದು ರೀತಿಯ ಆಸ್ತಿ ಖರೀದಿಯ ನಿಯಮಗಳಿರುತ್ತದೆ. ಹಲವು ರಾಜ್ಯದಲ್ಲಿ ಕೃಷಿ ಭೂಮಿಯನ್ನು ರೈತರು ಮಾತ್ರ ಖರೀದಿಸಬಹುದು ಎನ್ನುವ ನಿಯಮವಿದೆ. ಪ್ರತಿ ರಾಜ್ಯವು ಕೂಡ ಕೃಷಿಯೇತರ ಭೂಮಿಗೆ ವಿವಿಧ ನಿಯಮವನ್ನು ಅಳವಡಿಸಿದೆ.

Property Purchasing Limit In India
Image Credit: Agroharyana

ಅವಿವಾಹಿತರು ಖರೀದಿಸಬಹುದಾದ ಬೋನಿಯ ಮಿತಿ ಎಷ್ಟು..?
*ಕೇರಳದಲ್ಲಿ ಅವಿವಾಹಿತ ವ್ಯಕ್ತಿ 7 .5 ಎಕರೆ ಭೂಮಿಯನ್ನು ಮಾತ್ರ ಖರೀದಿಸಬಹುದಾಗಿದೆ. ಇನ್ನು ಒಂದು ಕುಟುಂಬದಲ್ಲಿ 5 ಸದಸ್ಯರಿದ್ದರೆ ಅವರು 15 ಎಕರೆ ಭೂಮಿಯನ್ನು ಮಾತ್ರ ಖರೀದಿಸಲು ಅವಕಾಶವಿದೆ.

Join Nadunudi News WhatsApp Group

*ಮಹಾರಾಷ್ಟ್ರದಲ್ಲಿ ರೈತರು ಮಾತ್ರ ಕೃಷಿ ಭೂಮಿಯನ್ನು ಖರೀದಿಸಲು ಅರ್ಹರಾಗಿರುತ್ತಾರೆ. ಇಲ್ಲಿ ಒಬ್ಬ ರೈತ ಗರಿಷ್ಟ 54 ಎಕರೆ ಭೂಮಿಯನ್ನು ಖರೀದಿಸಬಹುದು.

*ಕರ್ನಾಟಕ ಹಾಗು ಗುಜರಾತ್ ನಲ್ಲಿ ಕೂಡ ಭೂಮಿ ಖರೀದಿಯಲ್ಲಿ ಇದೆ ನಿಯಮ ಅನ್ವಯಿಸುತ್ತದೆ. ಈ ರಾಜ್ಯದ ರೈತರು ಗರಿಷ್ಟ 54 ಎಕರೆ ಭೂಮಿಯನ್ನು ಖರೀದಿಸಬಹುದು.

Property Purchasing Limit latest update
Image Credit: Other Source

*ಪಶ್ಮಿಮಬಂಗಾಳದ ಜನರು 24 .5 ಎಕರೆ ಭೂಮಿಯನ್ನು ಖರೀದಿಸಬಹುದು. ಇನ್ನು ಅನಿವಾಸಿ ಭಾರತೀಯರು ಭಾರತದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ.

*ಹಿಮಾಚಲ ಪ್ರದೇಶದಲ್ಲಿ 32 ಎಕರೆ, ಉತ್ತರ ಪ್ರದೇಶದಲ್ಲಿ 12 .5 ಎಕರೆ, ಬಿಹಾರದಲ್ಲಿ 15 ಎಕರೆ ಭೂಮಿಯನ್ನು ಮಾತ್ರ ಖರೀದಿಸಲು ನಿಯಮಗಳಿವೆ.

Join Nadunudi News WhatsApp Group