Property Limit: ಒಬ್ಬ ವ್ಯಕ್ತಿಯು ಎಷ್ಟು ಭೂಮಿಯನ್ನು ಖರೀದಿಸಬಹುದು, ಇದಕ್ಕಿಂತ ಹೆಚ್ಚು ಖರೀದಿಸುವಂತಿಲ್ಲ.

ಭಾರತದಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಎಕರೆ ಭೂಮಿಯನ್ನು ಹೊಂದಬಹುದು, ಆಸ್ತಿಯ ಮಿತಿ ಬಗ್ಗೆ ತಿಳಿಯಿರಿ.

Property Purchasing Limit In India: ಸಣ್ಣ ಉಳಿತಾಯ ಯೋಜನೆಗಳು, ಮ್ಯೂಚುವಲ್ ಫಂಡ್ ಯೋಜನೆ, ಚಿನ್ನದ ಹೂಡಿಕೆ ಸೇರಿದಂತೆ ಆಸ್ತಿ ಖರೀದಿಯ ಮೇಲೆ ಜನರು ಹೆಚ್ಚಾಗಿ ಗಮನಹರಿಸುತ್ತಾರೆ. ಇವುಗಳ ಮೇಲಿನ ಹೂಡಿಕೆಯು ಹೆಚ್ಚಿನ ಲಾಭವನ್ನು ನೀಡುತ್ತದೆ. ಇನ್ನು ಸಾಮಾನ್ಯವಾಗಿ ಹೆಚ್ಚಿನ ಜನರು ತಮ್ಮ ಬಳಿ ಇರುವ ಹಣವನ್ನು ಆಸ್ತಿ ಖರೀದಿಸುವ ಮೂಲಕ ಉಳಿತಾಯ ಮಾಡಲು ಬಯಸುತ್ತಾರೆ.

ಇನ್ನು ಹೊಸ ಭೂಮಿಯನ್ನು ಖರೀದಿಸುವ ಸಮಯದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು. ಆಸ್ತಿ ಖರೀದಿಯಲ್ಲಿ ಯಾವುದೇ ರೀತಿಯ ಸಣ್ಣ ತಪ್ಪಾದರೂ ಕೂಡ ಆಸ್ತಿ ಕೈತಪ್ಪುವ ಸಾಧ್ಯತೆ ಇರುತ್ತದೆ. ಆಸ್ತಿ ಖರೀದಿಗೂ ಕೂಡ ಸಾಕಷ್ಟು ನಿಯಮಗಳಿವೆ. ಇದೀಗ ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಭೂಮಿಯನ್ನು ಹೊಂದಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Information about how much land a person can own in India
Image Credit: Sobhaenrich

ಆಸ್ತಿ ಖರೀದಿಯ ಮಿತಿಯ ಬಗ್ಗೆ ಮಾಹಿತಿ
ಆಸ್ತಿ ಖರೀದಿಗೆ ಕೂಡ ನಿಯಮಗಳನ್ನು ವಿಧಿಸಲಾಗಿದೆ. ಒಬ್ಬ ವ್ಯಕ್ತಿ ಎಷ್ಟು ಭೂಮಿಯ ಮಾಲೀಕತ್ವವನ್ನು ಪಡೆಯಲು ಸಾಧ್ಯ ಎನ್ನುವುದಕ್ಕೆ ಪ್ರತ್ಯೇಕ ನಿಯಮವಿದೆ. ಆಸ್ತಿ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಒಂದೊಂದು ರಾಜ್ಯದಲ್ಲಿ ಒಂದು ರೀತಿಯ ಆಸ್ತಿ ಖರೀದಿಯ ನಿಯಮಗಳಿರುತ್ತದೆ. ಹಲವು ರಾಜ್ಯದಲ್ಲಿ ಕೃಷಿ ಭೂಮಿಯನ್ನು ರೈತರು ಮಾತ್ರ ಖರೀದಿಸಬಹುದು ಎನ್ನುವ ನಿಯಮವಿದೆ.

ಆಸ್ತಿ ಖರೀದಿಯ ಮಿತಿಯ ಬಗ್ಗೆ ವಿವರ
ಪ್ರತಿ ರಾಜ್ಯವು ಕೂಡ ಕೃಷಿಯೇತರ ಭೂಮಿಗೆ ವಿವಿಧ ನಿಯಮವನ್ನು ಅಳವಡಿಸಿದೆ.

*ಕೇರಳದಲ್ಲಿ ಅವಿವಾಹಿತ ವ್ಯಕ್ತಿ 7 .5 ಎಕರೆ ಭೂಮಿಯನ್ನು ಮಾತ್ರ ಖರೀದಿಸಬಹುದಾಗಿದೆ. ಇನ್ನು ಒಂದು ಕುಟುಂಬದಲ್ಲಿ 5 ಸದಸ್ಯರಿದ್ದರೆ ಅವರು 15 ಎಕರೆ ಭೂಮಿಯನ್ನು ಮಾತ್ರ ಖರೀದಿಸಲು ಅವಕಾಶವಿದೆ.

Join Nadunudi News WhatsApp Group

*ಮಹಾರಾಷ್ಟ್ರದಲ್ಲಿ ರೈತರು ಮಾತ್ರ ಕೃಷಿ ಭೂಮಿಯನ್ನು ಖರೀದಿಸಲು ಅರ್ಹರಾಗಿರುತ್ತಾರೆ. ಇಲ್ಲಿ ಒಬ್ಬ ರೈತ ಗರಿಷ್ಟ 54 ಎಕರೆ ಭೂಮಿಯನ್ನು ಖರೀದಿಸಬಹುದು.

Information about how much land a person can own in India
Image Credit: Housing

*ಕರ್ನಾಟಕ ಹಾಗು ಗುಜರಾತ್ ನಲ್ಲಿ ಕೂಡ ಭೂಮಿ ಖರೀದಿಯಲ್ಲಿ ಇದೆ ನಿಯಮ ಅನ್ವಯಿಸುತ್ತದೆ. ಈ ರಾಜ್ಯದ ರೈತರು ಗರಿಷ್ಟ 54 ಎಕರೆ ಭೂಮಿಯನ್ನು ಖರೀದಿಸಬಹುದು.

*ಪಶ್ಮಿಮಬಂಗಾಳದ ಜನರು 24 .5 ಎಕರೆ ಭೂಮಿಯನ್ನು ಖರೀದಿಸಬಹುದು. ಇನ್ನು ಅನಿವಾಸಿ ಭಾರತೀಯರು ಭಾರತದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ.

*ಹಿಮಾಚಲ ಪ್ರದೇಶದಲ್ಲಿ 32 ಎಕರೆ, ಉತ್ತರ ಪ್ರದೇಶದಲ್ಲಿ 12 .5 ಎಕರೆ, ಬಿಹಾರದಲ್ಲಿ 15 ಎಕರೆ ಭೂಮಿಯನ್ನು ಮಾತ್ರ ಖರೀದಿಸಲು ನಿಯಮಗಳಿವೆ.

Join Nadunudi News WhatsApp Group