Property Reclaim: ಈ ಸಮಯದಲ್ಲಿ ಮಕ್ಕಳಿಂದ ಪೋಷಕರು ಆಸ್ತಿಯನ್ನ ವಾಪಾಸ್ ಪಡೆಯಬಹುದು, ಹೈಕೋರ್ಟ್ ಮಹತ್ವದ ತೀರ್ಪು.

ಮಕ್ಕಳಿಗೆ ಕೊಟ್ಟ ಆಸ್ತಿಯನ್ನ ಮರಳಿ ವಾಪಾಸ್ ಪಡೆಯಬಹುದು.

Property Reclaim New Rules: ಭಾರತೀಯ ಕಾನೂನಿನ ಪ್ರಕಾರ ಮಕ್ಕಳು ಹುಟ್ಟಿನಿಂದಲೇ ತಂದೆ ತಾಯಿಯ ಆಸ್ತಿಯ ಮೇಲೆ ಅಧಿಕಾರವನ್ನು ಪಡೆಯುತ್ತಾರೆ. ಭಾರತೀಯ ಕಾನೂನಿನಲ್ಲಿ Property ಸಂಬಂಧಿತ ಸಾಕಷ್ಟು ನಿಯಮಗಳಿವೆ.

ಯಾವುದೇ ವ್ಯಕ್ತಿಯು ಆಸ್ತಿ ಹಂಚಿಕೊಳ್ಳುವ ಸಮಯದಲ್ಲಿ ಕಾನೂನಿನ ನಿಯಮವನ್ನು ಅನುಸರಿಸಬೇಕಾಗುತ್ತದೆ. ಇತ್ತೀಚೆಗಂತೂ Indian Law ಆಸ್ತಿ ವಿಚಾರವಾಗಿ ಸಾಕಷ್ಟು ತಿದ್ದುಪಡಿಯನ್ನು ಜಾರಿಗೊಳಿಸಿದೆ. ಅದರಲ್ಲೂ ಹೆಣ್ಣು ಮಕ್ಕಳ ಆಸ್ತಿ ಹಂಚಿಕೆಯ ವಿಚಾರವಾಗಿ ಭಾರತೀಯ ಕಾನೂನಿನಲ್ಲಿ ಅನೇಕ ತಿದ್ದುಪಡಿಗಳಿವೆ.

Property Reclaim New Rules
Image Source: Homecapital

ಪೋಷಕರ ಆಸ್ತಿಯ ಹಂಚಿಕೆಯ ಕುರಿತು ಮಹತ್ವದ ಬದಲಾವಣೆ
ಇನ್ನು ಭಾರತೀಯ ನ್ಯಾಯಾಲಯದಲ್ಲಿ ದಿನ ನಿತ್ಯ ಸಾಕಷ್ಟ್ಯ ಆಸ್ತಿ ಸಂಬಂದಿತ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ. ವಿವಿಧ ಪ್ರಕರಣಗಳಿಗೆ ತೀರ್ಪನ್ನು ನೀಡಿರುವ ನ್ಯಾಯಾಲಯ ಆಸ್ತಿ ಹಂಚಿಕೆಗೆ ವಿವಿಧ ನಿಯಮವನ್ನು ಅಳವಡಿಸುತ್ತದೆ. ಪೋಷಕರ ಆಸ್ತಿಗೆ ಮಕ್ಕಳು ಸಂಪೂರ್ಣ ಅಧಿಕಾರವನ್ನು ಪಡೆಯುತ್ತಾರೆ. ಮಕ್ಕಳು ಹೆಣ್ಣಾಗಲಿ ಅಥವಾ ಗಂಡಾಗಲಿ ತಂದೆ ತಾಯಿಯ ಆಸ್ತಿಯ ಮೇಲೆ ಇಬ್ಬರು ಕೂಡ ಸಮಾನ ಅಧಿಕಾರವನ್ನು ಹೊಂದಿರುತ್ತಾರೆ.

ಮಕ್ಕಳಿಂದ ಪೋಷಕರು ಆಸ್ತಿಯನ್ನು ಹಿಂಪಡೆಯಲು ಸಾಧ್ಯವೇ..?
ಇನ್ನು ಪಿತ್ರಾರ್ಜಿತ ಆಸ್ತಿಯ ಮೇಲು ಹೆಣ್ಣು ಮಕ್ಕಳು ಗಂಡಿನಷ್ಟೇ ಅಧಿಕಾರವನ್ನು ಹೊಂದಿರುತ್ತಾರೆ. ಮಕ್ಕಳ ಅನುಮತಿ ಇಲ್ಲದೆ ತಂದೆ ತಾಯಿಯ ಆಸ್ತಿಯನ್ನು ಯಾರು ಕೂಡ ಮಾರಾಟ ಮಾಡುವಂತಿಲ್ಲ. ಪೋಷಕರು ತಮ್ಮ ಸ್ವ ಇಚ್ಛೆಯ ಮೇರೆಗೆ ಮಕ್ಕಳ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡಬಹುದು. ಇನ್ನು ಪೋಷಕರು ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡಿದ ನಂತರ ಆ ಆಸ್ತಿಯನ್ನು ಹಿಂಪಡೆಯಲು ಬಯಸಿದರೆ ಕಾನೂನು ಇದಕ್ಕೆ ಅವಕಾಶ ನೀಡಿದೆ. ಯಾವ ಸಮಯದಲ್ಲಿ ಪೋಷಕರು ಆಸ್ತಿಯನ್ನು ಹಿಂಪಡೆಯಬಹುದು ಎನ್ನುವ ಬಗ್ಗೆ ಕಾನೂನು ನಿಯಮವನ್ನು ರೂಪಿಸಿದೆ.

Property Reclaim New Rules
Image Source: Mint

ಈ ಸಮಯದಲ್ಲಿ ಮಕ್ಕಳಿಂದ ಪೋಷಕರು ಆಸ್ತಿಯನ್ನ ವಾಪಾಸ್ ಪಡೆಯಬಹುದು
ಮಕ್ಕಳಿಂದ ಪೋಷಕರು ಆಸ್ತಿಯನ್ನು ಹಿಂಪಡೆಯಲು ಕಾನೂನು ಅವಕಾಶ ನೀಡಿದೆ. ಒಪ್ಪಂದ ಪತ್ರದಲ್ಲಿ ಕೇವಲ ಪ್ರೀತಿ ಮತ್ತು ವಾತ್ಸಲ್ಯದಿಂದ ನೀಡಲಾಗುತ್ತಿದೆ ಎಂದು ನಮೂದಿಸಿದರೆ ಪೋಷಕರು ಏಕಪಕ್ಷೀಯವಾಗಿ ಅದನ್ನು ರದ್ದುಗೊಳಿಸಬಹುದು ಎಂದು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌ಎಂ ಸುಬ್ರಮಣ್ಯಂ ಹೇಳಿದ್ದಾರೆ. ಮಕ್ಕಳ ಮೇಲಿನ ಪ್ರೀತಿ ಮತ್ತು ವಾತ್ಸಲ್ಯದಿಂದ ಆಸ್ತಿಯನ್ನು ವರ್ಗಾಯಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಹೇಳಿದರೆ ಮಕ್ಕಳಿಂದ ಪೋಷಕರು ಆಸ್ತಿಯನ್ನ ಹಿಂಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group