Registration Rules: ಆಸ್ತಿ ಮತ್ತು ಮನೆ ಖರೀದಿ ಮಾಡುವವರಿಗೆ ರಾತ್ರೋರಾತ್ರಿ ಹೊಸ ರೂಲ್ಸ್, ನಿಯಮ ಬದಲಾವಣೆ

ಆಸ್ತಿ ನೋಂದಾವಣೆ ಕುರಿತು ಹೊಸ ನಿಯಮ ಜಾರಿಗೆ ತಂದ ಹೈಕೋರ್ಟ್

Property Registration Rules: ದೇಶದಲ್ಲಿ ಆಸ್ತಿ ನೋಂದಾವಣೆಯ ಪ್ರಕ್ರಿಯೆ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಯಾಕೆಂದರೆ ಹೆಚ್ಚಿನವರು ಆಸ್ತಿಯನ್ನು ಮಾರಾಟ ಅಥವಾ ಖರೀದಿ ಮಾಡಿದವರಾಗಿರುತ್ತಾರೆ. ಹಾಗೆಯೆ ಈಗ ಆಸ್ತಿಯನ್ನು ಖರೀದಿ ಮಾಡುವವರು ಹಾಗು ಮಾರಾಟ ಮಾಡುವವರು ಈ ಕೆಲವು ನಿಯಮವನ್ನು ತಿಳಿದಿರುವುದು ಬಹಳ ಮುಖ್ಯ ಆಗಿರುತ್ತದೆ.

ಆಸ್ತಿ ನೋಂದಾವಣೆಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ಅದೇನೆಂದರೆ ಆಸ್ತಿ ಮಾರಾಟ ಹಾಗು ಖರೀದಿ ಮಾಡುವವರು ತಮ್ಮ ಆಧಾರ್ ಕಾರ್ಡ್ ಅನ್ನು ಸಾಬೀತು ಪಡಿಸಬೇಕಾಗಿರುತ್ತದೆ.

Property Registration Rules
Image Credit: Housing

ನೋಂದಾವಣೆ ಹಾಗು ಮುದ್ರಂಕ ಇಲಾಖೆಗೆ ಹೊಸ ನಿಯಮ ಜಾರಿ

ಹೈಕೋರ್ಟ್ ನೋಂದಾವಣೆ ಹಾಗು ಮುದ್ರಂಕ ಇಲಾಖೆಗೆ ಹೊಸ ಆದೇಶವನ್ನು ಜಾರಿಗೆ ತಂದಿದೆ. ಆಸ್ತಿ ಮಾರಾಟ ಹಾಗು ಖರೀದಿ ಸಮಯದಲ್ಲಿ ನೋಂದಾವಣೆಗೆ ಮುಂಚಿತವಾಗಿ ಆ ವ್ಯಕ್ತಿಗಳ ಆಧಾರ್ ಕಾರ್ಡ್ ಪರಿಶೀಲನೆ ಆಗಬೇಕು. ಆಧಾರ್ ಕಾರ್ಡ್ ಪರಿಶೀಲನೆ ಆಗದೇ ನೊಂದಾವಣೆ ಪ್ರಕ್ರಿಯೆ ನಡೆಸುವಂತಿಲ್ಲ ಎಂದು ಹೈಕೋರ್ಟ್ ಕಡ್ಡಾಯವಾಗಿ ಕಾನೂನನ್ನು ಜಾರಿಗೆ ತಂದಿದೆ.

ವಂಚನೆಯನ್ನು ತಪ್ಪಿಸಲು ಈ ನಿಯಮವನ್ನು ಜಾರಿಗೆ ತರಲಾಗಿದೆ

Join Nadunudi News WhatsApp Group

ದೇಶದಲ್ಲಿ ಈಗ ನೊಂದಾವಣೆ ಪ್ರಕ್ರಿಯೆ ಎಂದರೆ ಬಹಳ ಸುಲಭ ಹಾಗು ಸಹಜ ಆಗಿದೆ. ಯಾವುದೇ ದಾಖಲೆಗಳು ಸರಿಯಾಗದಿದ್ದರು ಅದನ್ನು ಬೇರೆಯವರಿಗೆ ಮಾರಾಟ ಮಾಡುವುದರ ಮೂಲಕ ಸಾಮಾನ್ಯ ಜನರನ್ನು ವಂಚನೆಗೆ ನೂಕಲಾಗುತ್ತದೆ.

ವಂಚನೆ ಹಾಗು ಬ್ರಷ್ಟಚಾರಗಳು ಆಸ್ತಿ ಮಾರಾಟ ದಲ್ಲಿ ದಿನದಿಂದ ದಿನ ಹೆಚ್ಚಾಗುವುದನ್ನು ಪರಿಶೀಲಿಸಿದ ಹೈ ಕೋರ್ಟ್ ಈ ಯೋಜನೆಯನ್ನು ಜಾರಿಗೆ ತಂದಿದೆ. ಜನ ಮುಗಿಬಿದ್ದು ಸೈಟ್ ಅನ್ನು ಖರೀದಿ ಮಾಡಲು ಮುಂದಾಗುತ್ತಾರೆ ಆದರೆ ಅವುಗಳ ದಾಖಲೆಗಳನ್ನು ಚೆಕ್ ಮಾಡದೇ ಮೋಸ ಹೋಗುತ್ತಾರೆ. ತಮ್ಮದಲ್ಲದ ಆಸ್ತಿಯನ್ನು ಕೂಡ ಮಾರಾಟ ಮಾಡಿ ಹಣ ಗಳಿಸುವ ಉದಾಹರಣೆಗಳು ಕೂಡ ಇದ್ದು, ಇವುಗಳನ್ನು ತಡೆಗಟ್ಟಲು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

New Rules for Property Registration
Image Credit: Squareyards

ಆಧಾರ್ ಕಾರ್ಡ್ ಪರಿಶೀಲಿಸುವ ಬಗ್ಗೆ ವಿವರ

2016 ರ UIDAI ನಿಂದ ಆಧಾರ್ ಕಾರ್ಡ್ ಪಡೆದುಕೊಂಡವರ ಪರಿಶೀಲನೆ ಮಾಡಲು ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುವುದರ ಮೂಲಕ ಆಧಾರ್ ಚೆಕ್ ಮಾಡಿಕೊಳ್ಳಲಾಗುವುದು. ಇತೀಚಿನ ಹೈಕೋರ್ಟ್ ನ ಕೇಸ್ ಒಂದರ ಪ್ರಕಾರ ಆಸ್ತಿ ಮಾರಾಟದ ವಂಚನೆಯ ವಾದ ವಿವಾದಗಳ ಪರಿಶೀಲನೆಯ ನಂತರ ಆಸ್ತಿ ವಿಚಾರವಾಗಿ ಯಾರಿಗೂ ವಂಚನೆ ಆಗಬಾರದೆಂದು ಈ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತರಲಾಗಿದೆ ಎಂದು ನ್ಯಾಯ ಮೂರ್ತಿಗಳು ತಿಳಿಸಿದ್ದಾರೆ.

Join Nadunudi News WhatsApp Group