Kaveri 2.0: ಆಸ್ತಿ ಖರೀದಿ ಮತ್ತು ಮಾರಾಟ ಮಾಡುವವರಿಗೆ ಸಿಹಿಸುದ್ದಿ, ಹೊಸ ತಂತ್ರಜ್ಞಾನ ಬಿಡುಗಡೆ.
ಆಸ್ತಿ ಖರೀದಿ ಮಾಡುವ ಮತ್ತು ಮಾರಾಟ ಮಾಡುವ ಜನರಿಗೆ ಹೊಸ ತಂತ್ರಜ್ಞಾನವನ್ನ ಜಾರಿಗೆ ತರಲಾಗಿದ್ದು ಇನ್ನುಮುಂದೆ ಎಲ್ಲಾ ಕೆಲಸಗಳು ಬಹಳ ವೇಗವಾಗಿ ಆಗಲಿದೆ.
Property Sale And Registration: ದೇಶದಲ್ಲಿ ಆಸ್ತಿ (Property) ವಿಚಾರವಾಗಿ ಸಾಕಷ್ಟು ಪ್ರಕರಣಗಳು ನಡೆಯುತ್ತವೆ. ಆಸ್ತಿ ನೊಂದಣಿಯ ವಿಚಾರವಾಗಿ ಸಂಬಂಧಿಕರು ಹಲ್ಲೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಸಾಮನ್ಯವಾಗಿ ಎಲ್ಲರು ತಮ್ಮ ಜಮೀನುಗಳನ್ನು ತಮ್ಮ ಹೆಸರಿನಲ್ಲಿ ನೋಂದಣಿ ಮಾಡಿಕೊಳ್ಳಲು ಬಯಸುತ್ತಾರೆ.
ಇದೀಗ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಆಸ್ತಿ ನೋಂದಣಿ (Property Registration) ಪ್ರಕ್ರಿಯೆಯಲ್ಲಿ ಹೊಸ ನಿಯಮ ಜಾರಿಗೊಳ್ಳಲಿದೆ.
![Property Sale And Registration](https://nadunudi.in/wp-content/uploads/2023/04/Property-Sale-And-Registration.png)
ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಕಾವೇರಿ 2.0 ತಂತ್ರಾಂಶ ಬಳಕೆ
ಸ್ಥಿರಾಸ್ತಿ, ಚರಾಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಹೊಸ ತಂತ್ರಜ್ಞಾನ ಬರಲಿದೆ. ನೋಂದಣಿ ಧಾಖಲೆಯನ್ನು ಪಡೆಯಲು ಕಾವೇರಿ 2 .0 ತಂತ್ರಾಂಶ ಬಳಕೆ ಮಾಡಲಾಗಿದೆ. ಜೂನ್ 25 ರ ವೇಳೆಗೆ ರಾಜ್ಯದಲ್ಲಿನ ಎಲ್ಲ 260 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2 .0 ತಂತ್ರಾಂಶ ಬಳಕೆಗೆ ಬರಲಿದೆ. ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ನಿಮ್ಮ ಆಸ್ತಿಯನ್ನು ನೋಂದಾಯಿಸಿಕೊಳ್ಳಬಹುದು.
![Property Sale And Registration](https://nadunudi.in/wp-content/uploads/2023/04/Property-Sale-And-Registration-2.png)
ಪಾಸ್ ಪೋರ್ಟ್ ಕಚೇರಿ ಮಾದರಿಯಲ್ಲಿ ನೋಂದಣಿ ಪ್ರಕ್ರಿಯೆ
ಹಾಗೇಯೇ ಪಾಸ್ ಪೋರ್ಟ್ ಕಚೇರಿ ಮಾದರಿಯಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಈ ಸೇವೆ ಲಭ್ಯವಾಗಲು ಕಚೇರಿ ನವೀಕರಣ, ಪುನರ್ ವಿನ್ಯಾಸ ಕಾರ್ಯ ನಡೆಯುತ್ತಿದೆ. ನೋಂದಣಿಗೆ ಬರುವ ಮೊದಲೇ ಹಲವು ಪ್ರಕ್ರಿಯೆಗಳು ಪೂರ್ಣಗೊಂಡಿರುವ ಕಾರಣ 10 ರಿಂದ 15 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತದೆ.
ಆಸ್ತಿಯ ಸರ್ವೇ ನಂಬರ್ ಗಳನ್ನೂ ಕಾವೇರಿ 2 .0 ತಂತ್ರಾಂಶದಲ್ಲಿ ದಾಖಲಿಸಬೇಕಾಗುತ್ತದೆ. ಇದರಲ್ಲಿ ಭೂ ದಾಖಲೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಜೋಡಣೆಯಾಗಿರುತ್ತದೆ. ಆಸ್ತಿ ನೊಂದಣಿ ಮಾಡಲು ಬಯಸುವವರು ಅಗತ್ಯ ವಿವರ ಹಾಗು ದಾಖಲೆಗಳ ಜೊತೆಗೆ ಶುಲ್ಕವನ್ನು ಪಾವತಿಸಿ ನೋಂದಣಿಗೆ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು.
![Property Sale And Registration](https://nadunudi.in/wp-content/uploads/2023/04/Property-Sale-And-Registration-3.png)