Property: 2ನೇ ಹೆಂಡತಿಯ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿದೆ, ಹೊಸ ತೀರ್ಪು

ಎರಡು ಮದುವೆಯಾದ ವ್ಯಕ್ತಿಯ ಆಸ್ತಿಯಲ್ಲಿ ಮಕ್ಕಳಿಗೆ ಹೇಗೆ ಪಾಲು ಕೊಡಲಾಗುತ್ತದೆ.

Second Wife Children Property Rights: ಭಾರತೀಯ ಕಾನೂನಿನಲ್ಲಿ ಆಸ್ತಿ ಹಂಚಿಕೆಯ ಕುರಿತು ಸಾಕಷ್ಟು ತಿದ್ದುಪಡಿಯನ್ನು ತರಲಾಗಿದೆ. ಇನ್ನು ಹೆಣ್ಣು ಮಕ್ಕಳ ಆಸ್ತಿಗೆ ಸಮಾನ ಹಕ್ಕನ್ನು ಪಡೆದಿರುತ್ತಾರೆ ಎನ್ನುವುದು ಎಲ್ಲರಿಗು ತಿಳಿದೇ ಇದೆ.

ಇನ್ನು ಹಿಂದೂ ಧರ್ಮದಲ್ಲಿ ಕೂಡ ಪುರುಷರು ಒಂದಕ್ಕಿಂತಾ ಹೆಚ್ಚಿನ ಮದುವೆ ಆಗಿರುವ ಸಾಕಷ್ಟು ಪ್ರಕರಣಗಳಿವೆ. ಒಂದಕ್ಕಿಂತ ಹೆಚ್ಚಿನ ಮದುವೆಯು ಕಾನೂನು ಬಾಹಿರವಾಗಿದೆ. ಆದರೂ ಕೂಡ ಹಿಂದೂ ಧರ್ಮದಲ್ಲಿ ಎರಡನೇ ಮದುವೆ ಆಗುತ್ತಾರೆ.

Second Wife Children Property Rights
Image Source: Mint

ವಿಚ್ಛೆಯನ ಪಡೆದ ನಂತರ ತಂದೆಯ ಆಸ್ತಿಯ ಮೇಲೆ ಮಕ್ಕಳ ಹಕ್ಕು
ಮೊದಲ ಪತ್ನಿಯ ಒಪ್ಪಿಗೆಯನ್ನು ಪಡೆದು ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಮೇಲೆ ಎರಡನೇ ಮದುವೆ ಆಗಬಹುದು. ಇನ್ನು ವಿವಾಹ ವಿಚ್ಛೇದನದ ನಂತರ ಮಕ್ಕಳಿಗೆ ಆಸ್ತಿ ಹಂಚಿಕೆಯ ಹಕ್ಕಿನ ಕುರಿತು ಸಾಕಷ್ಟು ಗೊಂದಲಗಳು ಉಂಟಾಗುತ್ತದೆ. ಇನ್ನು ವಿಚ್ಛೇದನದ ಬಳಿಕ ಮೊದಲ ಪತ್ನಿಯ ಮಕ್ಕಳು ತಂದೆಯ ಸ್ಥಿರಾಸ್ತಿಯ ಮೇಲೆ ಸಂಪೂರ್ಣ ಹಕ್ಕನ್ನು ಹೊಂದಿರುತ್ತಾರೆ.

ಎರಡನೆಯ ಹೆಂಡತಿಯ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿದೆ
ಇನ್ನು ಒಬ್ಬ ವ್ಯಕ್ತಿಯು ಎರಡನೇ ಮದುವೆಯಾದ ಮೇಲೆ ಆತನ ಎರಡನೇ ಪತ್ನಿಯ ಮಕ್ಕಳಿಗೆ ಆಸ್ತಿಯ ಎಷ್ಟು ಪಾಲಿದೆ ಎನ್ನುವ ಬಗ್ಗೆ ಕಾನೂನಿನಲ್ಲಿ ಪ್ರತ್ಯೇಕ ನಿಯಮವಿದೆ. ಹಿಂದೂ ಕಾನೂನಿನ ಪ್ರಕಾರ, ವ್ಯಕ್ತಿಯ ಎರಡನೆಯ ಹೆಂಡತಿಯ ಮಕ್ಕಳು ಕಾನೂನುಬದ್ಧವಾಗಿ ತಂದೆ ಸತ್ತ ಮೇಲೆ ತಂದೆಯ ಸ್ಥಿರ ಆಸ್ತಿಗಳ ಮೇಲೆ ಸಮಾನ ಹಕ್ಕನ್ನು ಹೊಂದಿರುತ್ತಾರೆ. ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳು ಅನುವಂಶಿಕವಾಗಿ ಪಡೆಯಬಹುದಾಗಿದೆ.

Second Wife Children Property Rights
Image Source: Housing

ಎರಡನೇ ಹೆಂಡತಿಗೆ ಪತಿಯ ಆಸ್ತಿಯ ಮೇಲಿನ ಹಕ್ಕು
ಇನ್ನು ಹಿಂದೂ ಕಾನೂನಿನ ಪ್ರಕಾರ, ವ್ಯಕ್ತಿಯ ಮೊದಲ ಹೆಂಡತಿಯ ಮಕ್ಕಳಿಗೆ ತಂದೆಯ ಎರಡನೇ ಹೆಂಡತಿಯ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಇನ್ನು ಎರಡನೇ ಹೆಂಡತಿ ತನ್ನ ಪತಿಯ ಮೊದಲ ಹೆಂಡತಿಯ ವಿಚ್ಛೇದನ ಅಥವಾ ಮರಣದ ನಂತರ ಪತಿಯ ಮೊದಲ ಹೆಂಡತಿಯಷ್ಟೇ ಸಮಾನ ಹಕ್ಕನ್ನು ಪಡೆಯುತ್ತಾಳೆ.

Join Nadunudi News WhatsApp Group

Join Nadunudi News WhatsApp Group