Property Right: ಸುಪ್ರೀಂ ಕೋರ್ಟ್ ನಿಂದ ಇನ್ನೊಂದು ಮಹತ್ವದ ತೀರ್ಪು, ಇಂತಹ ಮಕ್ಕಳಿಗೂ ಸಿಗಲಿದೆ ತಂದೆ ಆಸ್ತಿಯ ಹಕ್ಕು.

ಮಕ್ಕಳ ಆಸ್ತಿಯ ಬಗ್ಗೆ ಇನ್ನೊಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್

Property Rights Of Children Of Invalid Marriages: ಹಿಂದೂ ಧರ್ಮದ ಪ್ರಕಾರ ಮದುವೆಗೆ ಅದರದ್ದೇ ಆದ ಮಹತ್ವವಿದೆ. ಇನ್ನು ಭಾರತೀಯ ಕಾನೂನು ಕೂಡ ಮದುವೆಯ ಬಗೆ ಅನೇಕ ತಿದ್ದುಪಡಿಯನ್ನು ಮಾಡಿದೆ. ಕಾನೂನಿನ ನಿಯಮಾನುಸಾರ ಮದುವೆಯಾಗುವುದು ಅಗತ್ಯವಾಗಿದೆ. ಇನ್ನು ಹಿಂದೂ ಧರ್ಮದಲ್ಲಿ ಒಂದು ಮದುವೆಯನ್ನು ಮಾನ್ಯವಾದ ಮದುವೆಯೆಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯತಿಯೂ ಒಂದಕ್ಕಿಂತ ಹೆಚ್ಚು ಮದುವೆಯಾಗಿದ್ದಾರೆ ಅದು ಒಂದು ರೀತಿಯಲ್ಲಿ ಕಾನೂನು ಬಾಹಿರವಾಗಿರುತ್ತದೆ.

Father Property Rights Latest Update
Image Credit: India Today

ಅಮಾನ್ಯ ಮದುವೆಯಿಂದ ಜನಿಸಿದ ಮಕ್ಕಳಿಗೆ ಆಸ್ತಿ ಹಕ್ಕು ಸಿಗುತ್ತದೆಯೇ..?
ಒಂದಕ್ಕಿಂತ ಹೆಚ್ಚು ಮದುವೆಯಾದರೆ ಅದನ್ನು ಅನೂರ್ಜಿತ ಮತ್ತು ಅಮಾನ್ಯ ಮದುವೆ ಎಂದು ಪರಿಗಣಿಸಲಾಗುತ್ತದೆ. ಸದ್ಯ ಅಮಾನ್ಯ ಮದುವೆಯಿಂದ ಜನಿಸಿದ ಮಕ್ಕಳಿಗೆ ಇರುವ ಆಸ್ತಿ ಹಕ್ಕಿನ ಬಗ್ಗೆ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯವು ಈ ಪ್ರಕರಣದ ತನಿಖೆ ನಡೆಸಿ ಆದೇಶವನ್ನು ಹೊರಡಿಸಿದೆ. ಇದೀಗ ನಾವು ಭಾರತೀಯ ಕಾನೂನಿನ ಪ್ರಕಾರ ಅಮಾನ್ಯ ಮದುವೆಯಿಂದ ಜನಿಸಿದ ಮಕ್ಕಳಿಗೆ ಆಸ್ತಿ ಹಕ್ಕು ಸಿಗುತ್ತದೆಯೇ..? ಎನ್ನುವ ಬಗ್ಗೆ ತಿಳಿಯೋಣ.

ಅಮಾನ್ಯ ಮದುವೆಯಿಂದ ಜನಿಸಿದ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕಿದೆ
ವ್ಯಕ್ತಿಯೋರ್ವರು ಮೂರು ಮದುವೆಯಾಗಿದ್ದು, ಅದರಲ್ಲಿ ಎರಡು ಮದುವೆಯನ್ನು ಅನೂರ್ಜಿತ ಮದುವೆಯೆಂದು ಘೋಷಿಸಲಾಗಿತ್ತು. ಇದರಲ್ಲಿ ಮಾನ್ಯ ಮದುವೆಯಿಂದ ಜನಿಸಿದ ಮಗನೊಬ್ಬ ಅಮಾನ್ಯ ಮದುವೆಯಿಂದ ಜನಿಸಿದ ಮಕ್ಕಳಿಗೆ ಸಿಗುವ ಆಸ್ತಿ ಹಕ್ಕಿನ ಬಗ್ಗೆ ಪ್ರಶ್ನಿಸಿ ಕಾನೂನಿನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಬಗ್ಗೆ ನ್ಯಾಯಾಲಯ ತನಿಖೆ ನಡೆಸಿ ಆದೇಶ ಹೊರಡಿಸಿದೆ.

Property Rights Of Children Of Invalid Marriages
Image Credit: Indiafilings

ಸಾಮಾನ್ಯ ಪೂರ್ವಜರಿಂದ ಅನೂರ್ಜಿತ ಮತ್ತು ಅಮಾನ್ಯ ವಿವಾಹಗಳಿಂದ ಜನಿಸಿದ ಮಕ್ಕಳನ್ನು ಕಾನೂನುಬದ್ಧ ಮಕ್ಕಳೆಂದು ಪರಿಗಣಿಸಿದ ನಂತರ, ಅಂತಹ ಮಕ್ಕಳು ಮಾನ್ಯ ವಿವಾಹದಿಂದ ಜನಿಸಿದ ಮಕ್ಕಳು ಉತ್ತರಾಧಿಕಾರಿಗಳಾಗಿರುವಂತೆಯೇ ಆಸ್ತಿಗೆ ಅರ್ಹರಾಗಿರುತ್ತಾರೆ ಎಂದು ಪೀಠವು ಹೇಳಿದೆ. ಅಮಾನ್ಯ ಮದುವೆಯಿಂದ ಜನಿಸಿದ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟ ಆದೇಶ ಹೊರಡಿಸಿದೆ.

Join Nadunudi News WhatsApp Group

Join Nadunudi News WhatsApp Group