PUC Annual Exam: ನಾಳೆ PUC ಪರೀಕ್ಷೆ ಬರೆಯುವ ಮಕ್ಕಳಿಗೆ ಕಠಿಣ ನಿಯಮ, ಈ ವಸ್ತುಗಳನ್ನ ತಗೆದುಕೊಂಡು ಹೋಗುವಂತಿಲ್ಲ

ನಾಳೆಯಿಂದ ದ್ವಿತೀಯ PUC ಪರೀಕ್ಷೆ ಆರಂಭ, ಈ ನಿಯಮಗಳು ಅನ್ವಯ.

PUC Annual Exam New Rules: ಪ್ರಸ್ತುತ 2023 -24 ಸಾಲಿನ ಶೈಕ್ಷಣಿಕ ವರ್ಷದಲ್ಲಿ PUC ವಿದ್ಯರ್ಥಿಗಳು ಇದೀಗ ಅಂತಿಮ ಪರೀಕ್ಷೆಯನ್ನು ಎದುರಿಸುವ ಸಮಯ ಬಂದೊದಗಿದೆ. ವಿದ್ಯಾರ್ಥಿ ಜೀವನದಲ್ಲಿ PUC ಹಂತವು ಬಹಳ ಮುಖ್ಯವಾಗಿದೆ. PUC ಯ್ಲಲಿ ಉತ್ತಮ ಅಂಕವನ್ನು ಗಳಿಸಿದರೆ ಮುಂದಿನ ಶಿಕ್ಷಣಕ್ಕೆ ಹೆಚ್ಚು ಸಹಕಾರಿಯಾಗುವುದರ ಜೊತೆಗೆ ಹೆಚ್ಚು ಅಂಕ ಗಳಿಸಿದರೆ ಉದ್ಯೋಗವನ್ನು ಕೂಡ ಪಡೆಯುವ ಅವಕಾಶ ಇರುತ್ತದೆ.

ಹೀಗಾಗಿ ವಿದ್ಯಾರ್ಥಿಗಳು ದ್ವಿತೀಯ PUC ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆಯುವ ಗುರಿಯನ್ನು ಹೊಂದುವುದು ಅಗತ್ಯ. ಸದ್ಯ March 1 ರಿಂದ ಪರೀಕ್ಷೆ -1 ರ ವಾರ್ಷಿಕ ಪರೀಕ್ಷೆ ನಡೆಯಲಿದೆ. ಈ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ವಿದ್ಯಾರ್ಥಿಗಳು ಈ ಲೇಖನವನ್ನು ಓದುವ ಮೂಲಕ ತಮ್ಮ ಪರೀಕ್ಷೆಯ ಬಗ್ಗೆಮಾಹಿತಿ ತಿಳಿದುಕೊಳ್ಳಬಹುದು.

PUC Annual Exam New Rules
Image Credit: Hindustan Times

ನಾಳೆಯಿಂದ ದ್ವಿತೀಯ PUC ಪರೀಕ್ಷೆ ಆರಂಭ, ಈ ನಿಯಮಗಳು ಅನ್ವಯ
ಮಾರ್ಚ್ 1 ರಿಂದ ಮಾರ್ಚ್ 22 ರ ವರೆಗೆ ದ್ವಿತೀಯ PUC ವಿದ್ಯಾರ್ಥಿಗಳಿಗೆ ಪರೀಕ್ಷೆ-1 ವಾರ್ಷಿಕ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರ ವರೆಗೆ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೊಠಡಿಯಲ್ಲಿ ಹೆಚ್ಚಿನ ನಿಯಮ ಜಾರಿಗೊಳಿಸಲಾಗಿದೆ. ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಕೆಲವು ಕೆಲಸಗಳಿಗೆ ನಿಷೇಧಾಜ್ಞೆಯನ್ನು ಹೊರಡಿಸಲಾದ್ದರೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮೊಬೈಲ್ ಪೇಜರ್, STD, ಜೆರಾಕ್ಸ್, ಟೈಪಿಂಗ್ ಮುಂದಾದವುಗಳನ್ನು ನಿಷೇದಿಸಲಾಗಿದೆ.

ಇನ್ನು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಹೊರತುಪಡಿಸಿ ಪರವಾನಗಿ ಇಲ್ಲದೆ ಒಳಗೆ ಯಾರನ್ನು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ನಕಲು ಮಾಡುವ ಸಾಮಗ್ರಿಗಳನ್ನು ಹಾಗೂ ಹೊರಗಿನಿಂದ ಕಾಪಿ ಬರೆದು ಪರೀಕ್ಷಾ ಕೇಂದ್ರಗಳಲ್ಲಿ ಪೂರೈಸುವುದನು ನಿರ್ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಜನರು ಮಾರಕವಸ್ತುಗಳನ್ನು ಹಿಡಿದು ತಿರುಗಾಡುದನ್ನು ನಿಷೇದಿಸಲಾಗಿದೆ. ಇನ್ನು KSRTC ನಿಗಮವು ದ್ವಿತೀಯ PUC ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣವನ್ನು ಘೋಷಿಸಿದೆ. ವಿದ್ಯಾರ್ಥಿಗಳು ಉಚಿತ ಪ್ರಯಾಣದ ಮೂಲಕ ಪರೀಕ್ಷೆಯನ್ನು ಬರೆಯಬಹುದಾಗಿದೆ.

PUC Annual Exam 2024
Image Credit: News 18

PUC ಅಂತಿಮ ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ
ಮಾರ್ಚ್ 1, 2024: ಕನ್ನಡ, ಅರೇಬಿಕ್

Join Nadunudi News WhatsApp Group

ಮಾರ್ಚ್ 4, 2024: ಗಣಿತ, ಶಿಕ್ಷಣ

ಮಾರ್ಚ್ 5, 2024: ರಾಜ್ಯಶಾಸ್ತ್ರ, ಅಂಕಿಅಂಶ

ಮಾರ್ಚ್ 6, 2024: ಮಾಹಿತಿ ಮತ್ತು ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಆರೋಗ್ಯ ರಕ್ಷಣೆ,

ಮಾರ್ಚ್ 7, 2024: ಇತಿಹಾಸ, ಭೌತಶಾಸ್ತ್ರ

ಮಾರ್ಚ್ 9, 2024: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂವಿಜ್ಞಾನ, ಗೃಹ ವಿಜ್ಞಾನ

ಮಾರ್ಚ್ 11, 2024: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನಗಳು

ಮಾರ್ಚ್ 13, 2024: ಇಂಗ್ಲಿಷ್

PUC Annual Exam Update
Image Credit: The Hans India

ಮಾರ್ಚ್ 15, 2024: ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ, ಮೂಲ ಗಣಿತ

ಮಾರ್ಚ್ 16, 2024: ಅರ್ಥಶಾಸ್ತ್ರ

ಮಾರ್ಚ್ 18, 2024: ಭೂಗೋಳ, ಜೀವಶಾಸ್ತ್ರ

ಮಾರ್ಚ್ 20, 2024: ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

ಮಾರ್ಚ್ 21, 2024: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ಮಾರ್ಚ್ 22, 2024: ಹಿಂದಿ.

Join Nadunudi News WhatsApp Group