Puneeth Rajkumar: ಅಪ್ಪು ಸಾವಿಗೆ ಕರೋನ ಲಸಿಕೆ ಕಾರಣ, ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂತು ಗಂಭೀರ ಆರೋಪ.

ಪುನೀತ್ ರಾಜಕುಮಾರ್ ಅವರ ಸಾವಿನ ಬಗ್ಗೆ ಸ್ಪೋಟಕ ಮಾಹಿತಿ

Puneeth Rajkumar Death And Covid Shiled Vaccination: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನೋವು ಅಭಿಮಾನಿಗಳನ್ನು ಇಂದಿಗೂ ಕಾಡುತ್ತಲೇ ಇದೆ. ಅಪ್ಪು ಅಗಲಿ ಎರಡು ವರ್ಷ ಕಳೆಯುತ್ತಾ ಬಂದರು ಕೂಡ ಅವರ ನಿಧನವನ್ನು ನೆನಪಿಸಿಕೊಂಡು ಇಂದಿಗೂ ಸಾಕಷ್ಟು ಜನರು ಕಣ್ಣೀರು ಹಾಕುತ್ತಿದ್ದಾರೆ.

ಅಪ್ಪು ಅವರು ಮರಣ ನಂತರ ಅಭಿಮಾನಿಗಳಿಗೆ ದೇವರಾಗಿ ಹೋಗಿದ್ದಾರೆ. ಇದೀಗ ಪುನೀತ್ ರಾಜಕುಮಾರ್ ಅವರ ಸಾವಿನ ಬಗ್ಗೆ ಸ್ಪೋಟಕ ಮಾಹಿತಿಯೊಂದು ಕೇಳಿಬರುತ್ತಿದೆ. ಈ ವೈರಲ್ ಸುದ್ದಿ ಅಪ್ಪು ಅಭಿಮಾನಿಗಳಿಗೆ ಬಾರಿ ನೋವನ್ನು ಉಂಟುಮಾಡುತ್ತಿದೆ ಎನ್ನಬಹುದು.

Puneeth Rajkumar Death
Image Credit: Businesstoday

ಅಪ್ಪು ಸಾವಿಗೆ ಕರೋನ ಲಸಿಕೆ ಕಾರಣ
ಸದ್ಯ ಕರೋನ ವ್ಯಾಕ್ಸಿನೇಷನ್ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹೌದು, ದೇಶದಲ್ಲಿ ‘ಕರೋನಾ’ ಲಸಿಕೆ ವಿಚಾರವು ಕೆಲವು ದಿನಗಳಿಂದ ದೊಡ್ಡ ಮಟ್ಟದ ಚರ್ಚೆಗೆ ವೇದಿಕೆಯನ್ನು ಒದಗಿಸಿದೆ. ಅದರಲ್ಲೂ ವಿಶೇಷವಾಗಿ ‘ಕರೋನಾ’ ಲಸಿಕೆಯಲ್ಲಿ, ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕೋವಿಶಿಲ್ಡ್ ಬ್ರಾಂಡ್ ಲಸಿಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಅಂದು ಪುನೀತ್ ರಾಜ್‌ ಕುಮಾರ್‌ ಗೆ ಅದೇ ಲಸಿಕೆ ಹಾಕಲಾಗಿತ್ತು, ಹಾಗಾದರೆ ಅಪ್ಪು ಸಾವಿಗೂ ‘ಕೊರೊನಾ’ ಲಸಿಕೆ ಕಾರಣವೇ…? ಎಂಬ ಚರ್ಚೆ ಈಗ ಜೋರಾಗಿದೆ ಎಂದೇ ಹೇಳಬಹುದು.

ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂತು ಗಂಭೀರ ಆರೋಪ
ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ‘ಕೊರೊನಾ’ ಲಸಿಕೆ ತೆಗೆದುಕೊಂಡರೆ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ಇದೆ ಎಂದು ಹೇಳಿತ್ತು. ಇಂತಹ ಹೊತ್ತಿನಲ್ಲಿ ಭಾರತದಲ್ಲಿ ಯುವಕರು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾಯುತ್ತಿದ್ದು, ಇದಕ್ಕೆಲ್ಲ ‘ಕೊರೊನಾ’ ಲಸಿಕೆ ಕಾರಣ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಈ ಆರೋಪಗಳ ಬೆನ್ನಲ್ಲೇ ಕನ್ನಡಿಗರ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿಗೆ ‘ಕೊರೊನಾ’ ಲಸಿಕೆ ಹಾಕಿದ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅಪ್ಪು ಅಭಿಮಾನಿಗಳಿಗೆ ಶಾಕ್ ಎದುರಾಗಿದೆ. ಅದಾಗ್ಯೂ, ಅಪ್ಪು ಸಾವಿಗೂ ಕರೋನ ವ್ಯಾಕ್ಸಿನ್ ಗೂ ಸಂಬಂಧ ಇದೆಯಾ…? ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

Join Nadunudi News WhatsApp Group

Puneeth Rajkumar Death Reason
Image Credit: Aaps.space

Join Nadunudi News WhatsApp Group