ಸಮಾಜ ಸೇವೆ ಮಾಡಲೆಂದೇ ಅಪ್ಪು ಬ್ಯಾಂಕಿನಲ್ಲಿ ಇಟ್ಟಿದ್ದ ಒಟ್ಟು ಹಣ ಎಷ್ಟು ಗೊತ್ತಾ, ನೋಡಿ ಓಮ್ಮೆ

ನಟ ಪುನೀತ್ ರಾಜ್ ಕುಮಾರ್ ಅವರು ಒಬ್ಬ ಅದ್ಭುತ ನಟ ಮಾತ್ರವಲ್ಲದೇ, ಒಬ್ಬ ಒಳ್ಳೆಯ ವ್ಯಕ್ತಿ ಹಾಗೂ ವ್ಯಕ್ತಿತ್ವ ಹಾಗೂ ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದ ವ್ಯಕ್ತಿ. ಚಿತ್ರರಂಗದವರು ಇರಲಿ,ಅಭಿಮಾನಿಗಳ ಜೊತೆಗೆ ಸಾಮಾನ್ಯರಂತೆ ಬೆರೆಯುತ್ತಿದ್ದ ವ್ಯಕ್ತಿ. ಹೌದು ದೊಡ್ಮನೆಯಲ್ಲಿ ಚಿನ್ನದ ಚಮಚ ಬಾಯಿಗೆ ಇಟ್ಟು ಬೆಳೆದರೂ ಕೂಡ, ಇವರಿಗೆ ಸ್ವಲ್ಪದ ಹಮ್ಮು ಬಿಮ್ಮು ಇರಲಿಲ್ಲ.ಇವರ ಸರಳವಾದ ವ್ಯಕ್ತಿತ್ವ ಹಾಗೂ ಇವರು ಮಾಡಿರುವ ಸಾಮಾಜಿಕ ಸೇವೆಗಳು, ಇವರ ಆದರ್ಶಗಳು ಎಂದಿಗೂ ಶಾಶ್ವತ ವಾಗಿದೆ.

ಅಂದಹಾಗೆ, ಸಾವಿನ ನಂತರವೂ ಅಪ್ಪನ ಹಾದಿಯಲ್ಲೇ ನಡೆದ ಪುನೀತ್ ರಾಜ್ ಕುಮಾರ್ ಅವರು ತನ್ನ ಎರಡು ಕಣ್ಣುಗಳನ್ನು ದಾನ ಮಾಡಿ, ನಾಲ್ವರ ಬದುಕಿಗೆ ಬೆಳಕಾಗಿದ್ದಾರೆ. ಹೌದು, ಇನ್ನು ಇವರು ಮಾಡಿರುವ ಕೆಲಸಗಳು ತುಂಬಾನೇ ಸುದ್ದಿಯಾಗಿದೆ.ಪುನೀತ್ ರಾಜ್ ಕುಮಾರ್ ಸುಮಾರು 26 ಕ್ಕಿಂತಲೂ ಹೆಚ್ಚು ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮಗಳನ್ನು ಪೋಷಣೆ ಮಾಡುತ್ತಿದ್ದರು. ಮಾತ್ರವಲ್ಲದೇ ಸುಮಾರು 45 ಕ್ಕೂ ಹೆಚ್ಚು ಹೆಚ್ಚು ಶಾಲಾ ಮಕ್ಕಳನ್ನು ಓದಿಸುತ್ತಿದ್ದರು.Puneeth Rajkumar Death | The actor who set aside a certain portion of his  income for charitable activities - newsdirectory3.com - News Directory 3

ಮಿಗಿಲಾಗಿ ಶಕ್ತಿಧಾಮ ಮೂಲಕ ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು.ಆದರೆ ಈ ಎಲ್ಲಾ ವಿಚಾರಗಳು ಅಭಿಮಾನಿಗಳಿಗೆ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹೆಚ್ಚು ದುಃಖಿಸುತ್ತಿದ್ದಾರೆ.
ಹೌದು, ಅವರು ಮಾಡಿರುವ ಸಾಮಾಜಿಕ ಕೆಲಸಗಳು ಒಂದೇ ಎರಡೇ ಲೆಕ್ಕವಿಲ್ಲದಷ್ಟು. ಸಹಾಯ ಮಾಡಿದವರಿಗೆ ಹೇಳುತ್ತಿದ್ದ ಒಂದೇ ಮಾತು ಅಪ್ಪು, ಯಾರಿಗೂ ಗೊತ್ತಾಗಬಾರದು. ಎಂತಹ ಅದ್ಭುತ ವ್ಯಕ್ತಿತ್ವ ಎನ್ನುವುದಕ್ಕೆ ಇದೆ ಉದಾಹರಣೆ.ಇಲ್ಲಿಯವರೆಗೂ ತಾವು ಮಾಡುತ್ತಿರುವ ಸಾಮಾಜಿಕ ಕೆಲಸಗಳ ಬಗ್ಗೆ ಎಲ್ಲಿಯೂ ಹೇಳುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದವರಲ್ಲ ಅಪ್ಪು.

ಹೌದು ಬಲ ಗೈಲಿ ಕೊಟ್ಟಿದ್ದು ಎಡ ಗೈಗೆ ಗೊತ್ತಾಗಬಾರದು ಎನ್ನುವ ಮಾತಿನಂತೆ ಬದುಕಿದವರು ಅಪ್ಪು. ಆದರೆ ಯಾವತ್ತೂ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿದರೋ ಆವಾಗಲೇ ಇವರು ಮಾಡುತ್ತಿದ್ದ ಕೆಲಸಗಳು ಬೆಳಕಿಗೆ ಬಂದದ್ದು. ಇನ್ನು ಅನೇಕ ಸರಕಾರಿ ಜಾಹಿರಾತುಗಳಲ್ಲಿ ರಾಯಭಾರಿಯಾಗಿ ಕಾಣಿಸಿಕೊಂಡಿದ್ದರು. ಆದರೆ ನೀವು ಅಪ್ಪು ಈ ಜಾಗೃತಿ ಮೂಡಿಸುವ ಕೆಲಸದ ಜೊತೆಗೆ, ಜಾಹಿರಾತುಗಳಿಗೆ ಒಂದು ಸ್ವಲ್ಪ ಹಣವನ್ನು ಸ್ವೀಕರಿಸಿದವರಲ್ಲ.Watch] How Puneeth Rajkumar used to celebrate birthday with fans

ಆದರೆ ಈ ಬಗ್ಗೆ ಎಲ್ಲಿಯೂ ಕೂಡ ಹೇಳಿಕೊಳ್ಳುವುದಾಗಲಿ ಪ್ರಚಾರ ಗಿಟ್ಟಿಸುವ ಕೆಲಸವಾಗಲಿ ಮಾಡಿಲ್ಲ.ಸದ್ದಿಲ್ಲದೇ ತನ್ನ ಕೆಲಸವನ್ನು ಮಾಡಿ ಹೊರಟೆ ಬಿಟ್ಟರು. ಇದೀಗ ಅಪ್ಪುವಿನ ಮತ್ತೊಂದು ವಿಚಾರಗಳು ಹೊರ ಬಿದ್ದಿದೆ. ಹೌದು ಕಷ್ಟದ ಸಮಯದ ಎದುರಾದರೆ, ಅಥವಾ ತನಗೇನಾದರೂ ಆದರೆ ಸಮಾಜ ಸೇವೆಗೆ ಯಾವುದೇ ತೊಡಕಾಗಬಾರದೆನ್ನುವ ಕಾರಣಕ್ಕೆ ಸುಮಾರು 8 ಕೋಟಿ ರೂಪಾಯಿಯನ್ನು ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದರು ಅಪ್ಪು.ಒಟ್ಟಿನಲ್ಲಿ ಇದನ್ನೆಲ್ಲಾ ನೋಡುವಾಗ ಇಂತಹ ಹೃದಯವಂತ ಸಾಮಾಜಿಕ ಕಳಕಳಿಯಿರುವ ವ್ಯಕ್ತಿಯನ್ನು ಕಳೆದುಕೊಂಡೆವು ಎಂದುಅಭಿಮಾನಿಗಳು ಇನ್ನಷ್ಟು ದುಃಖಿತರಾಗಿದ್ದಾರೆ.

Join Nadunudi News WhatsApp Group

Join Nadunudi News WhatsApp Group