Pure For Sure Facility: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಹೊಸ ಸೇವೆ ಆರಂಭ

LPG ಬಳಕೆದಾರರಿಗೆ ಹೊಸ ಸೌಲಭ್ಯ ಆರಂಭ.

Pure For Sure Facility For LPG Cylinder: ಸದ್ಯ ದೇಶದಲ್ಲಿ ಹೊಸ ಹೊಸ ನಿಯಮಗಳ ಜೊತೆಗೆ ವಿವಿಧ ಸೌಲಭ್ಯವನ್ನು ಕೂಡ ಸರ್ಕಾರ ಜನರಿಗಾಗಿ ಪರಿಚಯಿಸುತ್ತಿದೆ. ಹಲವಾರು ಯೋಜನೆಗಳ ಮೂಲಕ ಆರ್ಥಿಕವಾಗಿ ಬೆಂಬಲ ನೀಡುತ್ತಿರುವ ಸರ್ಕಾರ ಜನರಿಗೆ ಸಹಾಯವಾಗಲು ಇನ್ನಷ್ಟು ಹೆಚ್ಚಿನ ಸೌಕರ್ಯವನ್ನು ಕೂಡ ಮಾಡಿಕೊಡುತ್ತಿದೆ.

ಸದ್ಯ ಜನರಿಗಾಗಿ LPG Cylinder ಬಳಕೆಯಲ್ಲಿ ಸಹಾಯವಾಗಲು ಹೊಸ ಸೌಲಭ್ಯವನ್ನು ಪರಿಚಯಿಸಲು ಸಾರ್ಕಾರ ಮುಂದಾಗಿದೆ. ಈ ಹೊಸ ಸೌಲಭ್ಯದ ಮೂಲಕ LPG ಬಳಕೆದಾರರಿಗೆ ಇನ್ನಷ್ಟು ಪ್ರಯೋಜನವನ್ನು ನೀಡಲು ಸರ್ಕಾರ ಮುಂದಾಗಿದೆ.

Pure For Sure Facility For LPG Cylinder
Image Credit: bnnbreaking

 

LPG ಸಿಲಿಂಡರ್ ಬಳಸುತ್ತಿರುವವರಿಗೆ ಗುಡ್ ನ್ಯೂಸ್
ಸದ್ಯ ಕೇಂದ್ರ ಸರ್ಕಾರ LPG Cylinder ಗಳ ಬೆಲೆ ಏರಿಕೆಗೆ ಬ್ರೇಕ್ ಹಾಕಲು ಈಗಾಗಲೇ ಸಬ್ಸಿಡಿಯನ್ನು ನೀಡುತ್ತಿದೆ. ಇದರಿಂದಾಗಿ ಜನರು ಕಡಿಮೆ ಬೆಲೆಗೆ LPG Cylinder ಅನ್ನು ಪಡೆಯುತ್ತಿದ್ದಾರೆ. ಸದ್ಯ ಸಬ್ಸಿಡಿ ಸೌಲಭ್ಯವನ್ನು ನೀಡುತ್ತಿರುವ ಸರ್ಕಾರ ಇದೀಗ LPG ಬಳಕೆದಾರರಿಗೆ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ. ಈ ಮೂಲಕ ಜನಸಾಮಾನ್ಯರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

LPG ಗ್ರಾಹಕರಿಗೆ ಹೊಸ ಸೌಲಭ್ಯ ಆರಂಭ
ಸದ್ಯ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಇದೀಗ LPG ಗ್ರಾಹಕರಿಗೆ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ. ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಪ್ಯೂರ್ ಫಾರ್ ಶ್ಯೂರ್ ಸೌಲಭ್ಯವನ್ನು ಗ್ರಹಕರಿಗೆ ನೀಡಲು ಮುಂದಾಗಿದ್ದು, ಇದರಿಂದ ಗ್ರಾಹಕರು ಇನ್ನಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. LPG Cylinder ಗಳ ಗುಣಮಟ್ಟ ಮತ್ತು ಪ್ರಮಾಣವನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಿದ್ಧವಾಗಿದೆ. ಈ ಹಿನ್ನಲೆ ಈ ಹೊಸ ಸೌಲಭ್ಯವನ್ನು ಪರಿಚಯಿಸಲಾಗಿದೆ.

Join Nadunudi News WhatsApp Group

Pure For Sure Facility
Image Credit: NDTV

ಪ್ಯೂರ್ ಫಾರ್ ಶ್ಯೂರ್ ಸೌಲಭ್ಯ ಹೇಗೆ ಕಾರ್ಯನಿರ್ವಹಿಸುತ್ತದೆ..?
ಗ್ರಾಹಕರ ಮನೆಗೆ ತಲುಪಿಸಲಾಗುವ ಸಿಲಿಂಡರ್ ಟಾಂಪಾರ್ ಫ್ರೂಫ್ ಸೀಲ್ ಅನ್ನು ಹೊಂದಿರುತ್ತದೆ. ಅದರ ಮೇಲೆ QR Code ಅನ್ನು ಕೂಡ ಅಳವಡಿಸಲಾಗುತ್ತದೆ. ಇದರ ಮೂಲಕ ಉತ್ಪಾದನಾ ಘಟಕದಿಂದ ಗ್ರಹಕ್ರಿಗೆ ಸಿಲಿಂಡರ್ ಅನ್ನು ಖಾತರಿಪಡಿಸಲಾಗುತ್ತದೆ. QR Code ಅನ್ನು Scan ಮಾಡಿದ ನಂತರ ಗ್ರಾಹಕರು ಸಿಗ್ನೇಚರ್ ಟ್ಯೂನ್ ನೊಂದಿಗೆ ಪ್ಯೂರ್ ಫಾರ್ ಶ್ಯೂರ್ ಪಾಪ್ ಅಪ್ ಅನ್ನು ನೋಡುತ್ತಾರೆ. ಈ ಪಾಪ್ ಅಪ್ ಸಿಲಿಂಡರ್ ಗೆ ಸಂಬಂಧಿಸಿದ ಎಲ್ಲ ವಿವರವನ್ನು ನೀಡುತ್ತದೆ.

Join Nadunudi News WhatsApp Group