Puttakkana Makkalu: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಊಹಿಸದ ಹೊಸ ಟ್ವಿಸ್ಟ್

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್, ಕುತೂಹಲ ಮೂಡಿಸಿದ ಪುಟ್ಟಕ್ಕನ ಮಕ್ಕಳು ಸೀರಿಯಲ್.

Puttakkana Makkalu Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅತಿ ಹೆಚ್ಚು ಪ್ರೇಕ್ಷರನ್ನು ಪಡೆದುಕೊಂಡಿದೆ. ಇನ್ನು ಈ ಧಾರಾವಾಹಿ ಆರಂಭವಾಗಿ ಕೆಲವೇ ದಿನಕ್ಕೆ ಜನಪ್ರಿಯತೆ ಪಡೆದಿದೆ. ಮೂರೂ ಹೆಣ್ಣು ಮಕ್ಕಳನ್ನು ತಾಯಿ ಒಬ್ಬಳೇ ಸಾಕಿ ಸಲಹಿ ಅವರನ್ನು ದೊಡ್ಡವರನ್ನಾಗಿ ಮಾಡಿ ಆ ಹೆಣ್ಣು ಮಕ್ಕಳ ಜೀವನದಲ್ಲಿ ಏನಾಗುತ್ತದೆ ಎಂಬ ಕಥೆಯನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೇಳುತ್ತದೆ.

Big twist in puttakkana makkalu serial
Image Credit: Futurestorysofar

ಪುಟ್ಟಕ್ಕನ ಮಕ್ಕಳು ಧಾರಾವಾಹಿ
ಪುಟ್ಟಕ್ಕನಿಗೆ ಮೂರೂ ಹೆಣ್ಣು ಮಕ್ಕಳು ಇದ್ದು ಈ ಧಾರಾವಾಹಿಯಲ್ಲಿ ಎರಡು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ನಟಿ ಉಮಾಶ್ರೀ ಈ ಧಾರಾವಾಹಿಯಲ್ಲಿ ಪುಟ್ಟಕನ  ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇನ್ನು ಇವರ ನಟನೆ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಈ ಧಾರಾವಾಹಿ ಭಾರಿ ಭಾರಿ ಟ್ವಿಸ್ಟ್ ಗಳು ನಡೆಯುತ್ತಿವೆ ಎನ್ನಬಹುದು. ಜನರು ಇತ್ತೀಚಿಗೆ ಈ ಧಾರಾವಾಹಿಯನ್ನು ಒಂದು ಎಪಿಸೋಡ್ ಸಹ ಬಿಡದೆ ನೋಡುತ್ತಿದ್ದಾರೆ ಎನ್ನಬಹುದು.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇದೀಗ ಪುಟ್ಟಕ್ಕನ ಎರಡನೇ ಮಗಳು ಸ್ನೇಹ ಮದುವೆ ಸಂಗತಿ ಪ್ರಸಾರವಾಗುತ್ತಿದೆ. ಪುಟ್ಟಕ್ಕ ಬಂಗಾರಮ್ಮನ ಬಳಿ ಸಾಲಾ ಪಡೆದು ಮೊದಲ ಮಗಳು ಸಹನಾ ಮದುವೆ ಮಾಡಿದ್ದಳು. ಆದರೆ ಸ್ನೇಹ ಮದುವೆ ಅನಿರೀಕ್ಷಿತವಾಗಿ ಬಂಗಾರಮ್ಮನ ಮಗ ಕಂಠಿ ಜೊತೆಗೆ ಆಯಿತು. ಈ ಮದುವೆಯನ್ನು ಸ್ನೇಹ ಒಪ್ಪದೇ ಇದ್ದರು, ಇದೀಗ ಬಂಗಾರಮ್ಮನ ಮನೆಗೆ ಸೊಸೆಯಾಗಿ ಸ್ನೇಹ ಕಾಲಿಟ್ಟಿದ್ದು, ಈ ಎಪಿಸೋಡ್ ಪ್ರಸಾರವಾಗುತ್ತಿದೆ.

Puttakkana Makkalu Serial updates
Image Credit: Timesofindia

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್
ಇನ್ನು ಸ್ನೇಹ ಬಂಗಾರಮ್ಮನ ಮನೆಗೆ ಹೋಗುವ ಸಂದರ್ಭ ಒಂದೆಡೆ ಆದರೆ ಇನ್ನೊಂದಿದೆ ರಾಜೇಶ್ವರಿ ಪುಟ್ಟಕ್ಕನ ಮೆಸ್ ಗೆ ಬಂಗಾರಮ್ಮನ ಕಡೆಯವರನ್ನು ಬಡ್ಡಿ ವಸೂಲಿಗೆ ಕರೆದು ತಂದಿರುತ್ತಾರೆ. 15 ಲಕ್ಷದ ಸಾಲಕ್ಕೆ ಪುಟ್ಟಕ್ಕ 45 ಸಾವಿರ ರೂಪಾಯಿ ಕೊಡಬೇಕಾಗಿದೆ. ಆದರೆ ಈ ಸಂದರ್ಭದಲ್ಲಿ ಪುಟ್ಟಕ್ಕ ತನ್ನ ಮಗಳು ಸಹನಾಳ ಒಡವೆಯನ್ನು ಇಟ್ಟು ಹಣವನ್ನು ತೆಗೆದುಕೊಳ್ಳಲು ಮುಂದಾಗುತ್ತಾಳೆ. ಆದರೆ ಈ ಒಡವೆ ನಕಲಿ ಎಂದು ಪುಟ್ಟಕನಿಗೆ ತಿಳಿಯುತ್ತದೆ. ನಂತರ ಪುಟ್ಟಕ್ಕನ ಗಂಡ ಗೋಪಾಲ ಬಂದು ಪುಟ್ಟಕ್ಕನಿಗೆ ಹಣವನ್ನು ನೀಡುತ್ತಾನೆ.

ನಿನ್ನೆಯ ಸಂಚಿಕೆಯಲ್ಲಿ ಸ್ನೇಹ ಕಂಠಿಯ ಮನೆಗೆ ಕಾಲಿಟ್ಟಿದ್ದು ಈ ವೇಳೆ ಬಿಗ್ ಟ್ವಿಸ್ಟ್ ಆಗಿದೆ. ಬಂಗಾರಮ್ಮನಿಗೆ ಸ್ನೇಹ ಇಷ್ಟವಿಲ್ಲದಿದ್ದರು ಬಂದು ಕಂಠಿಗೂ ಹಾಗು ಸ್ನೇಹನಿಗೂ ಆರತಿ ಮಾಡುತ್ತಾರೆ.

Join Nadunudi News WhatsApp Group

Big twist in puttakkana makkalu serial
Image Credit: Zeenews

ಈ ಎಪಿಸೋಡ್ ನಿನ್ನೆ ಪ್ರಸಾರವಾಗಿದ್ದು ಪ್ರೇಕ್ಷಕರು ಕುತೂಹಲರಾಗಿದ್ದಾರೆ. ಇದನ್ನು ನೋಡಿದ ಜನರು ಈ ಧಾರಾವಾಹಿಯಲ್ಲಿ ಮುಂದೇನಾಗಲಿದ್ದಾರೆ ಎಂಬ ಕುತೂಹಲರಾಗಿದ್ದಾರೆ. ಅಷ್ಟಕ್ಕೂ ಬಂಗಾರಮ್ಮ ಸ್ನೇಹಾಳನ್ನು ಒಪ್ಪಿಕೊಂಡಿದ್ದಾಳಾ, ಇಲ್ಲವಾ ಎನ್ನುವುದನ್ನು ಮುಂದಿನ ಎಪಿಸೋಡ್ ನಲ್ಲಿ ಕಾದು ನೋಡಬೇಕಿದೆ.

Join Nadunudi News WhatsApp Group