IRCTC Scan: ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಗುಡ್ ನ್ಯೂಸ್, ಈಗ ಸ್ಕ್ಯಾನ್ ಮಾಡಿ ಟಿಕೆಟ್ ಪಡೆದುಕೊಳ್ಳಿ

ಇನ್ನುಮುಂದೆ ರೈಲ್ವೆ ಟಿಕೆಟ್ ಪಡೆಯುವುದು ಮತ್ತಷ್ಟು ಈಸಿ, QR Code ನ ಮೂಲಕ ಟಿಕೆಟ್ ಪಡೆದುಕೊಳ್ಳಿ.

QR Code Scanner Facility For Train Ticket Booking: ಪ್ರತಿನಿತ್ಯ ರೈಲುಗಳಲ್ಲಿ ಲಕ್ಷಾಂತರ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣಿಸಲು ಮೊದಲು Ticket ಪಡೆಯುವುದು ಅಗತ್ಯ. ಹೆಚ್ಚಿನ ಜನರು ರೈಲು ಸಂಚಾರವನ್ನು ಮಾಡಬೇಕಿರುವುದರಿಂದ ಸಾಮಾನ್ಯವಾಗಿ Ticket Counter ಗಳಲ್ಲಿ ಜನ ಸಂದಣಿ ಹೆಚ್ಚಿರುತ್ತದೆ.

Ticket ಪಡೆಯಲು ಸಾಕಷ್ಟು ಸಮಯ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ರೈಲಿನಲ್ಲಿ ಕೋಟ್ಯಂತರ ಜನರು ಪ್ರಯಾಣ ಮಾಡುವ ಕಾರಣ ಇತ್ತೀಚಿನ ದಿನಗಳಲ್ಲಿ ರೈಲ್ವೆ ಟಿಕೆಟ್ ಸಿಗುವುದು ಬಹಳ ಕಷ್ಟವಾಗಿದೆ ಎಂದು ಹೇಳಬಹುದು. ಇದೀಗ Railway Department ಪ್ರಯಾಣಿಕರ ಈ ತೊಂದರೆಯನ್ನು ತಪ್ಪಿಸಲು ಹೊಸ ಸೌಲಭ್ಯವನ್ನು ಪರಿಚಯಿಸಲು ನಿರ್ಧರಿಸಿದೆ. ಇನ್ನುಮುಂದೆ ನೀವು ಸುಲಭವಾಗಿ ಟಿಕೆಟ್ ಗಳನ್ನೂ ಪಡೆದುಕೊಳ್ಳಬಹುದು.

QR Code Scanner Facility For Train Ticket Booking
Image Credit: Zeenews

ಇನ್ನುಮುಂದೆ ರೈಲ್ವೆ ಟಿಕೆಟ್ ಪಡೆಯುವುದು ಮತ್ತಷ್ಟು ಈಸಿ
ಪ್ರಸ್ತುತ Indian Railway ಪ್ರಯಾಣಿಕ್ರಿಗೆ ಟಿಕೆಟ್ ಖರೀದಿಸಲು ಸಹಾಯವಾಗಲು ಸರಳರ ವಿಧಾನವನ್ನು ಕಂಡು ಹಿಡಿದಿದೆ. ಭಾರತೀಯ ರೈಲ್ವೆಯು QR ಕೋಡ್‌ ಗಳನ್ನು ಬಳಸಿಕೊಂಡು ಹೊಸ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ಪ್ರಯಾಣಿಕರು ಈಗ ತಮ್ಮ ಫೋನ್‌ ಗಳೊಂದಿಗೆ ಆನ್‌ ಲೈನ್ ಪಾವತಿಗಳನ್ನು ಮಾಡಬಹುದು. ಪಾವತಿ ವಿಧಾನಗಳಲ್ಲಿ ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸಲು ಇಂದಿನಿಂದ ಅಂದರೆ ಏಪ್ರಿಲ್ 1 ರಿಂದ ಈ ಹೊಸ ಆರಂಭವಾಗಲಿದೆ.

QR Code ನ ಮೂಲಕ ಟಿಕೆಟ್ ಪಡೆದುಕೊಳ್ಳಿ
ದೇಶದಾದ್ಯಂತ ಹಲವಾರು ರೈಲು ನಿಲ್ದಾಣಗಳಲ್ಲಿ ಟಿಕೆಟ್‌ ಗಳನ್ನು ಖರೀದಿಸುವಾಗ ಪಾವತಿಗಳಿಗಾಗಿ QR ಕೋಡ್‌ ಗಳನ್ನು ಸ್ಕ್ಯಾನ್ ಮಾಡುವ ಆಯ್ಕೆಯನ್ನು ಪ್ರಯಾಣಿಕರು ಈಗ ಹೊಂದಿದ್ದಾರೆ. ಈ ವೈಶಿಷ್ಟ್ಯವು ಟಿಕೆಟ್ ಕೌಂಟರ್‌ಗಳಲ್ಲಿ ಲಭ್ಯವಿರುತ್ತದೆ. ಅಲ್ಲಿ Google Pay, Phone Pay ಮತ್ತು ಇತರ ಜನಪ್ರಿಯ UPI ಅಪ್ಲಿಕೇಶನ್‌ ಗಳನ್ನು ಬಳಸಿಕೊಂಡು ಅನುಕೂಲಕರವಾಗಿ ಪಾವತಿ ಮಾಡಬಹುದು. ಟಿಕೆಟ್ ಕೌಂಟರ್‌ ಗಳ ಹೊರತಾಗಿ, ಪಾರ್ಕಿಂಗ್ ಮತ್ತು ಆಹಾರ ಕೌಂಟರ್‌ ಗಳಲ್ಲಿ ಕ್ಯೂಆರ್ ಕೋಡ್ ನಿಬಂಧನೆಗಳು ಲಭ್ಯವಿದೆ.

New Facility For Train Ticket Booking
Image Credit: India Today

ಈ ಸ್ಥಳಗಳಲ್ಲಿ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರಯಾಣಿಕರು ಮನಬಂದಂತೆ ವಹಿವಾಟುಗಳನ್ನು ಪೂರ್ಣಗೊಳಿಸಬಹುದು. ಮಾನ್ಯ ಟಿಕೆಟ್‌ ಗಳಿಲ್ಲದ ಪ್ರಯಾಣಿಕರು ತಕ್ಷಣ ಆನ್‌ ಲೈನ್‌ ನಲ್ಲಿ ದಂಡದ ಮೊತ್ತವನ್ನು ಪಾವತಿಸಲು ಸಾಧ್ಯವಾಗುತ್ತದೆ. ರೈಲ್ವೇ ಸಿಬ್ಬಂದಿ QR ಕೋಡ್ ಸ್ಕ್ಯಾನರ್‌ ಗಳನ್ನು ಹೊಂದಿರುವ ಹ್ಯಾಂಡ್‌ ಹೆಲ್ಡ್ ಟರ್ಮಿನಲ್ ಯಂತ್ರಗಳನ್ನು ಬಳಸುತ್ತಾರೆ. ಇದನ್ನು ಬಳಸಿಕೊಂಡು ದಂಡವನ್ನು ಪ್ರಯಾಣಿಕರು ತ್ವರಿತವಾಗಿ ಪಾವತಿಸಲು ಸಾಧ್ಯವಾಗುತ್ತದೆ.

Join Nadunudi News WhatsApp Group

Train Ticket Booking latest Update
Image Credit: Times Of India

Join Nadunudi News WhatsApp Group