ಸೀರೆಯುಟ್ಟು ಹೊಸ ಲುಕ್ ನಲ್ಲಿ ರಚಿತಾರಾಮ್, ನೋಡಿ ಹೇಗಿದೆ ವಿಡಿಯೋ

ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಚಂದನವನದ ಪ್ರಮುಖ ನಾಯಕ ನಟಿ. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತಾ 2013 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದ ರಚಿತಾರ ಬಾಲ್ಯದ ಹೆಸರು ಬಿಂದಿಯಾ ರಾಮ್. ಇವರ ಪೂರ್ವಜರು ಮಧ್ಯಪ್ರದೇಶದ ಭೂಪಾಲ್ ಮೂಲದವರು. ರಚಿತಾರ ತಂದೆ ರಾಮ್ ಪ್ರಮುಖ ಭರತನಾಟ್ಯ ಕಲಾವಿದ. ರಾಮ್ ರವರು ಸುಮಾರು 500 ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ರಚಿತಾರ ಹಿರಿಯ ಸಹೋದರಿ ನಿತ್ಯಾ ರಾಮ್ ಕನ್ನಡ ಮತ್ತು ತಮಿಳು ಕಿರುತೆರಯಲ್ಲಿ ಹಲವು ಸೀರಿಯಲ್‌ಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸಿದ್ದಾರೆ.ಕಥಕ್ ಮತ್ತು ಭರತನಾಟ್ಯದಲ್ಲಿ ತರಬೇತಿ ಪಡೆದ ರಚಿತಾ ರಾಮ್ ಸುಮಾರು 50 ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.ಸಹೋದರಿ ನಿತ್ಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ `ಬೆಂಕಿಯಲ್ಲಿ ಅರಳಿದ ಹೂವು’ ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದರು. ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಅರಸಿ’ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸಿ ಜನಮನ್ನಣೆ ಪಡೆದರು.Rachita Ram Age, Family, Husband, Movies, Biography - Breezemasti

2013 ರಲ್ಲಿ ತೆರೆಕಂಡ ಬುಲ್‌ಬುಲ್ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪ್ರವೇಶಿಸಿದರು. ಚಿತ್ರದ ಅಡಿಷನ್‌ಗಾಗಿ ಬಂದ 200 ಕ್ಕೂ ಹೆಚ್ಚು ಯುವತಿಯರಲ್ಲಿ ರಚಿತಾ ಆಯ್ಕೆಯಾದರು.ಈ ಚಿತ್ರದಲ್ಲಿ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮತ್ತು ಕ್ಯೂಟ್ ನಟನೆಯಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು.

ನಂತರ ದರ್ಶನರ `ಅಂಬರೀಶ್, ಗಣೇಶ್‌ರ `ದಿಲ್ ರಂಗೀಲಾ’,ಸುದೀಪ್‌ರ `ರನ್ನ’, ಶ್ರೀಮುರಳಿಯವರ `ರಥಾವರ’ ಪುನೀತ್‌ರ `ಚಕ್ರವ್ಯೂಹ’ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದ ಬಹುಬೇಡಿಕೆಯ ನಟಿಯಾದರು. ರನ್ನ ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌಥ್ ಪ್ರಶಸ್ತಿ ಪಡೆದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಚಿತರದ್ದೇ ಸದ್ದು ಯಾವ ವಿಡಿಯೋ ಹಾಕಿದರೂ ವೈರಲ್. ಹೀಗಿರುವ ರಚಿತಾರಾಮ್ ಸೀರೆಯಲ್ಲಿ ಮಾಡಿರುವ ಹೊಸ ಡ್ಯಾನ್ಸ್ ನೋಡಿ.

Join Nadunudi News WhatsApp Group

Join Nadunudi News WhatsApp Group