Rahul Gandhi: ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ…? ಈ ಸೌಲಭ್ಯ ಉಚಿತ

ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ...?

Rahul Gandhi Leader Of The Opposition In Lok Sabha: ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಕೂಡ ಹೊರಬಿದ್ದಿದೆ. ಇದೀಗ 10 ವರ್ಷಗಳ ಬಳಿಕ ಲೋಕಸಭೆಗೆ ವಿರೋಧ ಪಕ್ಷ ಸಿಕ್ಕಿದೆ. ಹೌದು ಕಳೆದ 10 ವರ್ಷಗಳಿಂದ ಖಾಲಿಯಿದ್ದ ವಿಪಕ್ಷ ಸ್ಥಾನವನ್ನು ಇದೀಗ ಕಾಂಗ್ರೆಸ್​ ಪಡೆದುಕೊಂಡಿದೆ. ಲೋಕಸಭೆಯಲ್ಲಿ ಕನಿಷ್ಠ ಶೇ.10 ರಷ್ಟು ಸ್ಥಾನಗಳನ್ನು ಹೊಂದಿದ್ದರೆ ಮಾತ್ರ ವಿಪಕ್ಷ ಸ್ಥಾನ ಸಿಗುತ್ತದೆ.

ಕಳೆದ 2 ಬಾರಿಯೂ ವಿಪಕ್ಷ ಸ್ಥಾನ ಪಡೆಯಲು ವಿಫಲವಾಗಿದ್ದ ಕಾಂಗ್ರೆಸ್​ ಈ ಬಾರಿ ವಿಪಕ್ಷ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಸದ್ಯ 99 ಸಂಸದರೊಂದಿಗೆ ಕಾಂಗ್ರೆಸ್​ ವಿಪಕ್ಷದ ಕುರ್ಚಿಯಲ್ಲಿ ಕೂತಿದೆ. ಈ ಬಾರಿಯ ಲೋಕಸಭೆ ವಿರೋಧ ಪಕ್ಷದ ನಾಯಕನನ್ನಾಗಿ ಸಂಸದ ರಾಹುಲ್​ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ.

Rahul Gandhi Leader Of The Opposition In Lok Sabha
Image Credit: Business Today

ವಿರೋಧ ಪಕ್ಷದ ನಾಯಕನ ಜವಾಬ್ದಾರಿ
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವು ಅನೇಕ ಜವಾಬ್ದಾರಿಗಳನ್ನು ಹೊಂದಿದೆ. ವಿಪಕ್ಷ ನಾಯಕ ಸಾರ್ವಜನಿಕ ಖಾತೆಗಳು, ಸಾರ್ವಜನಿಕ ಉದ್ಯಮಗಳು ಮತ್ತು ಅಂದಾಜುಗಳಂತಹ ನಿರ್ಣಾಯಕ ಸಮಿತಿಗಳ ಸದಸ್ಯರಾಗಿರುತ್ತಾರೆ. ಜಾರಿ ನಿರ್ದೇಶನಾಲಯ (ED) ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ನಂತಹ ಕೇಂದ್ರೀಯ ಸಂಸ್ಥೆಗಳ ಮುಖ್ಯಸ್ಥರ ನೇಮಕ, ಕೇಂದ್ರೀಯ ಜಾಗೃತ ಆಯೋಗದಂತಹ ಶಾಸನಬದ್ಧ ಸಂಸ್ಥೆಗಳ ಮುಖ್ಯಸ್ಥರು ( CVC) ಮತ್ತು ಕೇಂದ್ರ ಮಾಹಿತಿ ಆಯೋಗ (CIC) ಅಂತಹ ಜವಾಬ್ದಾರಿಯುತ ಆಯ್ಕೆ ಸಮಿತಿಗಳಲ್ಲಿ ಭಾಗವಹಿಸುತ್ತಾರೆ.

ಸಂಬಳ ಹಾಗೂ ಭತ್ಯೆ
ಪ್ರತಿಪಕ್ಷದ ನಾಯಕರೂ ಪ್ರತಿ ತಿಂಗಳಿಗೆ ವೇತನವನ್ನು ಮತ್ತು ಪ್ರತಿ ದಿನದ ಭತ್ಯೆಗಳನ್ನು ಸಂಸತ್ತಿನ ಸದಸ್ಯರ ಕಾಯಿದೆ, 1954 ರ ಸಂಬಳ, ಭತ್ಯೆಗಳು ಮತ್ತು ಪಿಂಚಣಿಗಳ ಸೆಕ್ಷನ್ 3 ರಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ಪಡೆಯಲು ಅರ್ಹರಾಗಿರುತ್ತಾರೆ. ಸದರಿ ಕಾಯಿದೆಯ ಸೆಕ್ಷನ್ 8 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅದೇ ದರದಲ್ಲಿ ಕ್ಷೇತ್ರ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಪ್ರತಿಪಕ್ಷದ ನಾಯಕನಿಗೆ ಮಾಸಿಕ 2,000 ರೂ. ಭತ್ಯೆ ನೀಡಲಾಗುತ್ತದೆ.

Rahul Gandhi Salary
Image Credit: Firstpost

ಕಳೆದ 10 ವರ್ಷಗಳಿಂದ ಖಾಲಿಯಿದ್ದ ವಿಪಕ್ಷ
2014 ರಿಂದ ಪ್ರತಿಪಕ್ಷದ ನಾಯಕನ ಸ್ಥಾನ ಖಾಲಿ ಉಳಿದಿತ್ತು. ಯಾವುದೇ ವಿರೋಧ ಪಕ್ಷಗಳು ಶೇ.10 ರಷ್ಟು ಸ್ಥಾನ ಗಳಿಸಲು ಸಾಧ್ಯವಾಗಿರಲಿಲ್ಲ. 2014 ರಲ್ಲಿ ಕಾಂಗ್ರೆಸ್ ನೇತೃತ್ವದ UPA ಸೋಲಿನ ನಂತರ ಕಾಂಗ್ರೆಸ್​ ಲೋಕಸಭೆಯಲ್ಲಿ 44 ಸ್ಥಾನಗಳಿಗೆ ಇಳಿಯಿತು. ಈ ಬಾರಿ 99 ಸ್ಥಾನಗಳಲ್ಲಿ ಕಾಂಗ್ರೆಸ್​ ಗೆದ್ದಿದೆ. ಆ ಮೂಲಕ ಲೋಕಸಭೆಯಲ್ಲಿ ಕಾಂಗ್ರೆಸ್​ ಸಂಖ್ಯಾಬಲ 100 ಮುಟ್ಟಲಿದೆ.

Join Nadunudi News WhatsApp Group

Rahul Gandhi Leader Of The Opposition In Lok Sabha
Image Credit: ABP Live

Join Nadunudi News WhatsApp Group