Railway Facility: ನೀವು ರೈಲಿನಲ್ಲಿ ಪ್ರಯಾಣ ಮಾಡುತ್ತೀರಾ…? ಹಾಗಾದರೆ ನಿಮಗಿರುವ ಈ 5 ಹಕ್ಕುಗಳನ್ನ ತಿಳಿದುಕೊಳ್ಳಿ.

ರೈಲಿನಲ್ಲಿ ನಿಮಗಿರುವ ಈ 5 ಹಕ್ಕುಗಳನ್ನ ತಿಳಿದುಕೊಳ್ಳಿ, ರೈಲು ಪ್ರಯಾಣಿಕರ ಗಮನಕ್ಕೆ

Railway Facility Details: ದೂರದ ಪ್ರಯಾಣಕ್ಕೆ ರೈಲು ಪ್ರಯಾಣವನ್ನು ಹೆಚ್ಚಿನ ಜನರು ಆರಿಸುತ್ತಾರೆ. ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ರೈಲು ಪ್ರಯಾಣವು ಹೆಚ್ಚು ಆರಾಮದಾಯಕ ಹಾಗೂ ಇನ್ನಿತರ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಇನ್ನು ರೈಲುಗಳಲ್ಲಿ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯು ನೀಡುವ ಸಾಕಷ್ಟು ಸೌಲಭ್ಯಗಳ ಬಗ್ಗೆ ಮಾಹಿತಿ ಇರುವುದಿಲ್ಲ. ರೈಲ್ವೆ ಪ್ರಯಾಣಿಕರಿಗೆ ಕೆಲವು ಹಕ್ಕುಗಳಿರುತ್ತದೆ. ನಾವೀಗ ಈ ಲೇಖನದಲ್ಲಿ ರೈಲು ಪ್ರಯಾಣಿಕರಿಗಿರುವ 5 ಹಕ್ಕುಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Railway Facility Details
Image Credit: News9live

ನೀವು ರೈಲಿನಲ್ಲಿ ಪ್ರಯಾಣ ಮಾಡುತ್ತೀರಾ…? ಹಾಗಾದರೆ ನಿಮಗಿರುವ ಈ 5 ಹಕ್ಕುಗಳನ್ನ ತಿಳಿದುಕೊಳ್ಳಿ
•ಎರಡು ನಿಲುಗಡೆಯ ನಿಯಮ
ನಿರ್ದಿಷ್ಟ ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ತಪ್ಪಿಸಿಕೊಳ್ಳುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ಪ್ರಯಾಣಿಕರಿಗೆ ಆಗುವ ಅನ್ಯಾಯ ತಪ್ಪಿಸಲು ರೈಲ್ವೆ ಇಲಾಖೆ ಎರಡು ನಿಲ್ದಾಣಗಳ ನಿಯಮವನ್ನು ಮಾಡಿದೆ. ಇದರರ್ಥ ರೈಲು ನಿರ್ದಿಷ್ಟ ನಿಲ್ದಾಣದಿಂದ ಹೊರಟಿದ್ದರೆ, ಮುಂದಿನ ಎರಡು ನಿಲ್ದಾಣಗಳಿಗೆ ಆ ಆಸನವನ್ನು ಇನ್ನೊಬ್ಬ ಪ್ರಯಾಣಿಕರಿಗೆ ವರ್ಗಾಯಿಸಲಾಗುವುದಿಲ್ಲ. ಕನಿಷ್ಠ ಒಂದು ಗಂಟೆ ಅಥವಾ ರೈಲಿನ ಸಂಪೂರ್ಣ ಪ್ರಯಾಣದ ಮುಂದಿನ 2 ನಿಲ್ದಾಣಗಳಲ್ಲಿ ಸೀಟು ಖಾಲಿಯಾಗಿರುತ್ತದೆ.

•ತತ್ಕಾಲ್ ರೀಫಂಡ್
ಈ ತತ್ಕಾಲ್ ಮರುಪಾವತಿಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ತತ್ಕಾಲ್ ಟಿಕೆಟ್‌ ಗಳನ್ನು ಸಹ ಮರುಪಾವತಿ ಮಾಡಬಹುದು. ರೈಲು 3 ಗಂಟೆ ತಡವಾದರೆ ಅಥವಾ ಮಾರ್ಗ ಬದಲಿಸಿದರೆ ತತ್ಕಾಲ್ ಟಿಕೆಟ್ ಹಣವನ್ನು ಮರುಪಾವತಿ ಪಡೆಯಬಹುದು.

Indian Railway Latest Update
Image Credit: Businessleague

•ಇತರ ಪ್ರಕರಣಗಳಲ್ಲಿ ಮರುಪಾವತಿ
ರೈಲು ನಿಗದಿತ ಪ್ರಯಾಣವನ್ನು ಪೂರ್ಣಗೊಳಿಸದಿದ್ದರೆ, ರೈಲ್ವೇ ಇಲಾಖೆಯು ಪರ್ಯಾಯ ವ್ಯವಸ್ಥೆಗಳನ್ನು ಮಾಡದ ಹೊರತು ನೀವು ಬುಕ್ ಮಾಡಿದ ಟಿಕೆಟ್‌ ನ ಸಂಪೂರ್ಣ ಮರುಪಾವತಿಗೆ ನೀವು ಅರ್ಹರಾಗಿರುತ್ತೀರಿ. ರೈಲ್ವೆ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿದ್ದರೆ ಮತ್ತು ಆ ಸೇವೆಯನ್ನು ಬಳಸಲು ನಿಮಗೆ ಆಸಕ್ತಿಯಿಲ್ಲದಿದ್ದರೆ, ನೀವು ಟಿಕೆಟ್ ಅನ್ನು ಹಿಂತಿರುಗಿಸಬಹುದು ಮತ್ತು ನೀವು ಪ್ರಯಾಣಿಸಿದ ಮೊತ್ತವನ್ನು ಹೊರತುಪಡಿಸಿ ಹಣವನ್ನು ಹಿಂಪಡೆಯಬಹುದು.

Join Nadunudi News WhatsApp Group

•ರಾತ್ರಿ ಮಲಗುವ ನಿಯಮ
ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ರಾತ್ರಿ ಪ್ರಯಾಣದಲ್ಲಿ ಬೇರೆಯವರಿಗೆ ನಿದ್ರಿಸಲು ತೊಂದರೆ ಕೊಡುವಂತಿಲ್ಲ. ಪ್ರಯಾಣಿಕರಿಗೆ ನಿಗದಿಪಸಿದ ಸೀಟ್ ನಲ್ಲಿಯೇ ಕೂರಬೇಕು. ಸೀಟ್ ಗಳನ್ನೂ ಬದಲಾಯಿಸುವಂತಿಲ್ಲ.ಜೋರಾಗಿ ಮಾತನಾಡುವುದು, ಮೊಬೈಲ್ ಫೋನ್ ನಲ್ಲಿ ಹಾಡು ಹಾಕುವುದು, 10 ಗಂಟೆಯ ನಂತರ ಲೈಟ್ ಗಳನ್ನೂ ಹಾಕುವಂತಿಲ್ಲ. ಲೈಟ್ ಗಳನ್ನೂ ಹಾಕಲು ಅನುಮತಿ ಪಡೆಯಬೇಕಾಗುತ್ತದೆ. ನಿದ್ರೆ ಮಾಡಲು ತೊಂದರೆ ನೀಡಿದವರ ಮೇಲೆ ದೂರನ್ನು ಕೂಡ ದಾಖಲಿಸಬಹುದು.

Indian Railway Facility
Image Credit: Facebook

•ವೈದ್ಯಕೀಯ ಸಹಾಯ
ರೈಲು ಪ್ರಯಾಣದ ಸಮಯದಲ್ಲಿ ನೀವು ಅನಾರೋಗ್ಯಕ್ಕೆ ಒಳಗಾಗಿದ್ದರೆ, ನೀವು ಟಿಕೆಟ್ ಕಲೆಕ್ಟರ್, ರೈಲು ಸೂಪರಿಂಟೆಂಡೆಂಟ್ ಮತ್ತು ಇತರ ಯಾವುದೇ ರೈಲ್ವೆ ಸಿಬ್ಬಂದಿಯಿಂದ ವೈದ್ಯಕೀಯ ಸಹಾಯವನ್ನು ಪಡೆಯಬಹುದು. ಅಗತ್ಯ ಬಿದ್ದರೆ ಪ್ರಥಮ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವು ನೀಡುವುದು ರೈಲ್ವೆ ಸಿಬ್ಬಂದಿಯ ಕರ್ತವ್ಯ.

Join Nadunudi News WhatsApp Group