Railway Rule: ರೈಲು ಪ್ರಯಾಣಿಕರಿಗೆ ಹೊಸ ನಿಯಮ, ಇನ್ಮುಂದೆ ರೈಲು ನಿಲ್ದಾಣದಲ್ಲಿ ಈ ತಪ್ಪು ಮಾಡಿದ್ರೆ ದಂಡ ಖಚಿತ.

ಇನ್ಮುಂದೆ ರೈಲು ನಿಲ್ದಾಣದಲ್ಲಿ ಈ ತಪ್ಪು ಮಾಡಿದ್ರೆ ದಂಡ ಖಚಿತ.

Railway New Penalty Rule: ರೈಲ್ವೆ ಪ್ರಯಾಣವು ಜನಸ್ನೇಹಿಯಾಗಿದೆ ಎನ್ನಬಹುದು. ಜನರು ಹೆಚ್ಚಾಗಿ ರೈಲು ಪ್ರಯಾಣವನ್ನು ಮಾಡಲು ಬಯಸುತ್ತಾರೆ. ಭಾರತೀಯ ರೈಲ್ವೆ ಪ್ರಯಾಣಿಕರಿಗಾಗಿ ಎಷ್ಟು ಸೌಲಭ್ಯವನ್ನು ನೀಡುತ್ತದೆಯೋ ಅದೇ ರೀತಿ ಕೆಲವು ನಿಯಮಗಳನ್ನು ಕೂಡ ರೂಪಿಸಿದೆ. ಪ್ರಯಾಣಿಕರು ರೈಲ್ವೆ ಸೌಲಭ್ಯಗಳನ್ನು ಬಳಸಿದರೆ ಮಾತ್ರ ಸಾಲದು, ಇಲಾಖೆಯು ಗೊತ್ತುಪಡಿಸಿರುವ ಎಲ್ಲ ನಿಯಮಗಳನ್ನು ಕೂಡ ಪಾಲಿಸುವುದು ಅಗತ್ಯವಾಗಿದೆ.

ಇನ್ನು ರೈಲ್ವೆ ಇಲಾಖೆಯು ಯಾವುದೇ ನಿಯಮಗ ಉಲ್ಲಂಘನೆಗೆ ದಂಡವನ್ನು ವಿಧಿಸುತ್ತದೆ. ಈ ಬಗ್ಗೆ ನಿಮಗೆ ಮಾಹಿತಿ ತಿಳಿದಿರಲಿ. ಇದೀಗ ನಾವು ಈ ಲೇಖನದಲ್ಲಿ ರೈಲು ಪ್ರಯಾಣದ ವೇಳೆ ಯಾವ ಯಾವ ತಪ್ಪುಗಳನ್ನು ಮಾಡಿದರೆ ದಂಡವನ್ನು ವಿಧಿಸುತ್ತದೆ ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿಯೋಣ.

Railway New Penalty Rule
Image Credit: Rightsofemployees

ರೈಲು ಪ್ರಯಾಣಿಕರಿಗೆ ಹೊಸ ನಿಯಮ
ರೈಲು ಪ್ರಯಾಣವನ್ನು ಮಾಡುವ ಮುನ್ನ ರೈಲ್ವೆ ಪ್ರತಿ ನಿಯಮವನ್ನು ತಿಳಿಯುವುದು ಅಗತ್ಯವಾಗಿದೆ. ಯಾವುದೇ ನಿಯಮ ಉಲ್ಲಂಘನೆಗೆ ಮುಂದಾದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಚ್ಚರ. ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚಿನ ದಿನ ಪ್ರಯಾಣ ಮಾಡುವ ಪ್ರಯಾಣಿಕರು ತಮ್ಮ ದಿನ ನಿತ್ಯದ ಕೆಲಸಗಳನ್ನು ರೈಲ್ವೆ ನಿಲ್ದಾಣದಲ್ಲಿ ಪೂರ್ಣಗೊಳಿಸಿಕೊಳ್ಳಲು ಮುಂದಾಗುತ್ತಾರೆ. ಇಂತವರಿಗಾಗಿ ರೈಲ್ವೆ ಇಲಾಖೆಯು ಕಠಿಣ ನಿಯಮವನ್ನು ರೂಪಿಸಿದೆ.

ಇನ್ಮುಂದೆ ರೈಲು ನಿಲ್ದಾಣದಲ್ಲಿ ಈ ತಪ್ಪು ಮಾಡಿದ್ರೆ ದಂಡ ಖಚಿತ
ರೈಲ್ವೇ ಕಾಯಿದೆ 1989 ರ ಪ್ರಕಾರ, ರೈಲ್ವೇ ಆವರಣದಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಹಲ್ಲುಜ್ಜುವುದು, ಉಗುಳುವುದು, ಶೌಚಾಲಯ, ಪಾತ್ರೆಗಳು, ಬಟ್ಟೆ ಅಥವಾ ಇತರ ಯಾವುದೇ ವಸ್ತುಗಳನ್ನು ತೊಳೆಯುವುದು ಅಪರಾಧದ ಅಡಿಯಲ್ಲಿ ಬರುತ್ತದೆ. ಟಾಯ್ಲೆಟ್ ಇತ್ಯಾದಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಮಾತ್ರ ಈ ಕೆಲಸಗಳನ್ನು ಮಾಡಬಹುದು. ಈ ನಿಷೇಧಿತ ಕೃತ್ಯಗಳನ್ನು ಮಾಡುತ್ತಿರುವ ವೇಳೆ ರೈಲ್ವೇ ಸಿಬ್ಬಂದಿ ನಿಮ್ಮನ್ನು ಹಿಡಿದರೆ, ಪ್ರಯಾಣಿಕರಿಗೆ 500 ರೂ.ವರೆಗೆ ದಂಡವನ್ನು ವಿಧಿಸಬಹುದು. ರೈಲ್ವೆಯಲ್ಲಿ ಇಂತಹ ಕೃತ್ಯಗಳಿಗೆ ದಂಡ ವಿಧಿಸಲು ಅವಕಾಶವಿದೆ.

Indian Railway latest News Updates
Image Credit: Vachamarathi

ರೈಲು ಅಥವಾ ರೈಲ್ವೆ ಆವರಣದ ಯಾವುದೇ ಸ್ಥಳದಲ್ಲಿ ನೀವು ಏನನ್ನಾದರೂ ಬರೆದರೆ ಅಥವಾ ಅಂಟಿಸಿದರೆ, ನಂತರ ರೈಲ್ವೆ ಕಾಯ್ದೆಯ ಪ್ರಕಾರ, ಇದು ಕೂಡ ಅಪರಾಧದ ವರ್ಗಕ್ಕೆ ಬರುತ್ತದೆ. ಇದಕ್ಕೆ ದಂಡ ವಿಧಿಸಬಹುದು. ಇನ್ನು ಬಹುತೇಕ ಪ್ರಯಾಣಿಕರು ಚಿಪ್ಸ್ ಅಥವಾ ಇತರ ವಸ್ತುಗಳನ್ನು ತಿಂದ ನಂತರ ಕವರ್ ಗಳನ್ನು ನಿಲ್ದಾಣದ ಆವರಣದಲ್ಲಿರುವ ಖಾಲಿ ಜಾಗಗಳಲ್ಲಿ ಎಸೆಯುತ್ತಾರೆ, ಇದೂ ಕೂಡ ದಂಡಕ್ಕೆ ಒಳಗಾಗುತ್ತದೆ. ಗೊತ್ತುಪಡಿಸಿದ ಸ್ಥಳವನ್ನು ಹೊರತುಪಡಿಸಿ ಯಾವುದೇ ಖಾಲಿ ರೈಲ್ವೆ ಆವರಣ ಅಥವಾ ಕಂಪಾರ್ಟ್‌ ಮೆಂಟ್‌ ಗಳಲ್ಲಿ ಕಸವನ್ನು ಎಸೆದರೆ ದಂಡ ಪಾವತಿಸಬೇಕು.

Join Nadunudi News WhatsApp Group

Join Nadunudi News WhatsApp Group