Railway Recruitment: SSLC ಪಾಸ್ ಆದವರಿಗೆ ಭಾರತೀಯ ರೈಲ್ವೆ ಅಲ್ಲಿ ಭರ್ಜರಿ ಉದ್ಯೋಗ ಮತ್ತು ಉತ್ತಮ ಸಂಬಳ.

SSLC ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ ಇದ್ದು SSLC ಆದವರು ಅರ್ಜಿ ಸಲ್ಲಿಸಬಹುದು.

Railway Recruitment Jobs: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಸಾಕಷ್ಟು ಪದವೀಧರರು ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಮಾಹಿತಿಗಳು ಹರಡುತ್ತಿದೆ.

ಇದೀಗ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಖಾಲಿ ಇರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ರೈಲ್ವೆ ಇಲಾಖೆಯಿಂದ ಎಸ್ ಎಸ್ ಎಲ್ ಸಿ ಪಾಸ್ ಆದವರಿಗಾಗಿ ಉದ್ಯೋಗಾವಕಾಶದ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. ನೀವು ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿದ್ದಲ್ಲಿ ಈ ಸುದ್ದಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಹೌದು ನಿಮಗಾಗಿ ಭಾರತೀಯ ರೈಲ್ವೆ ಅಲ್ಲಿ ಸಾಕಷ್ಟು ಹುದ್ದೆ ಖಾಲಿ ಇದ್ದು ಅರ್ಜಿ ಸಲ್ಲಿಸಬಹುದು. 

There are job vacancies in Indian Railways where people can apply
Image Credit: yourstory

SSLC ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
ರೈಲ್ವೆ ನೇಮಕಾತಿ ಕೋಶವು (RRDC ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ವಿಭಾಗೀಯ ಅಥವಾ ವರ್ಕ್ ಶಾಪ್ ಗಳಲ್ಲಿ 2023 -24 ನೇ ಸಲಿಗೆ 3624 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಇನ್ನು ಲಿಖಿತ ಪರೀಕ್ಷೆ ಇಲ್ಲದೆ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

ಖಾಲಿ ಇರುವ ಹುದ್ದೆಗಳ ವಿವರ
ಫಿಟ್ಟರ್, ವೆಲ್ಡರ್, ಪೈಪ್ ಫಿಟ್ಟರ್, ಪ್ಲಂಬರ್, ಡ್ರಾಫ್ಟ್ಸ್‌ಮನ್ (ಸಿವಿಲ್), ಸ್ಟೆನೋಗ್ರಾಫರ್, ಮೆಷಿನಿಸ್ಟ್, ಟರ್ನರ್, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ವೈರ್‌ಮ್ಯಾನ್, ರೆಫ್ರಿಜರೇಟರ್ ಮೆಕ್ಯಾನಿಕ್ (ಎಸಿ-ಮೆಕ್ಯಾನಿಕ್), ಪೇಂಟರ್, ಡೀಸೆಲ್ ಮೆಕ್ಯಾನಿಕ್, ಮೋಟಾರು ವಾಹನಗಳು ಮತ್ತು ಇತರ ಟ್ರೇಡ್​​​ ಗಳಲ್ಲಿ ಹುದ್ದೆಗಳು ಖಾಲಿ ಇವೆ.

There are job vacancies in Indian Railways for SSLC pass.
Image Credit: krishijagran

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ
ಎಸ್ ಎಸ್ ಎಲ್ ಸಿ ಪಾಸ್ ಆದವರು ಮತ್ತು ಐಟಿಐ ಪ್ರಮಾಣಪತ್ರ ಹೊಂದಿರುವ ಯಾರಾದರೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿದಾರ ವಯಸ್ಸು 15 ರಿಂದ 24 ವರ್ಷಗಳ ನಡುವೆ ಇರಬೇಕು. ಇನ್ನು ಸಾಮಾನ್ಯ ವರ್ಗಕ್ಕೆ ಸೇರಿದವರು 100 ರೂ. ನೋಂದಣಿ ಶುಲ್ಕವನ್ನು ಪಾವತಿಸಬೇಕು. ಹಾಗೆಯೆ ಆಸಕ್ತಿ ಇರುವವರು ಆನ್ಲೈನ್ ನ ಮೂಲಕ ಅರ್ಜಿ ಸಲ್ಲಿಸಬಹುದು. ಈ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 26 2023 ಆಗಿದೆ.

Join Nadunudi News WhatsApp Group

Join Nadunudi News WhatsApp Group