Railway Ticket: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ಈ ಭೋಗಿಗಳ ಟಿಕೆಟ್ ದರದಲ್ಲಿ 40% ಇಳಿಕೆ

ಟಿಕೆಟ್ ದರದಲ್ಲಿ ಇಳಿಕೆ ಮಾಡುವ ಮೂಲಕ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

Railway Ticket Price Down: ಸಾಮಾನ್ಯವಾಗಿ ಜನರು ಪ್ರಯಾಣಕ್ಕಾಗಿ ಹೆಚ್ಚಾಗಿ ರೈಲು ಪ್ರಯಾಣವನ್ನು ಆರಿಸಿಕೊಳ್ಳುತ್ತಾರೆ. ಇನ್ನಿತರ ವಿಧಾನದ ಮೂಲಕ ಪ್ರಯಾಣವನ್ನು ಮಾಡುವುದಕ್ಕಿಂತ ರೈಲು ಪ್ರಯಾಣವು ಹೆಚ್ಚು ಆರಾಮದಾಯಕ, ಮತ್ತು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.

ಇನ್ನು ರೈಲು ಪ್ರಯಾಣದಲ್ಲಿ ವಿಶೇಷವಾಗಿ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವನ್ನು ಮಾಡಿಕೊಡಲಾಗುತ್ತದೆ. ಪ್ರತಿನಿತ್ಯ ರೈಲುಗಳಲ್ಲಿ ಲಕ್ಷಾಂತರ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಎಲ್ಲ ಪ್ರಯಾಣಿಕರಿಗೂ ಕೂಡ ರೈಲ್ವೆ ಇಲಾಖೆಯು ವಿಶೇಷ ಸೌಲಭ್ಯವನ್ನು ನೀಡುತ್ತದೆ.

Railway Ticket Price Down
Image Credit: Business Standard

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್
ಇನ್ನು ರೈಲು ಇಲಾಕೆಯು ಪ್ರಯಾಣಿಕರಿಗೆ ಸೌಲಭ್ಯವನ್ನು ನೀಡುವುದರ ಜೊತೆಗೆ ವಿವಿಧ ಷರತ್ತುಗಳನ್ನು ಕೂಡ ವಿದಿಸಿರುತ್ತದೆ. ಪ್ರಯಾಣಿಕರು ಪ್ರಯಾಣ ಮಾಡುವಾಗ ಸೌಲಭ್ಯಗಳನ್ನು ಬಳಸಿಕೊಳ್ಳುವುದರ ಜೊತೆಗೆ ನಿಯಮವನ್ನು ಕೂಡ ಪಾಲಿಸುವುದು ಅಗತ್ಯವಾಗಿರುತ್ತದೆ. ಇದೀಗ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಟಿಕೆಟ್ ವಿಷಯವಾಗಿ ಸಿಹಿ ಸುದ್ದಿ ನೀಡಿದೆ. ಅದೇನು ಎನ್ನುವ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

ರೈಲುಗಳ ಕನಿಷ್ಠ ಟಿಕೆಟ್ ದರ 10 ರೂ. ಇಳಿಕೆ
ಈಗಾಗಲೇ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ Ticket ವಿಷಯವಾಗಿ ಸಾಕಷ್ಟು ಸೌಲಭ್ಯವನ್ನು ನೀಡಿದೆ. ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ನಲ್ಲಿ ಕಷ್ಟ ಆಗಬಾರದು ಎನ್ನುವ ಉದ್ದೇಶದಿಂದ Online Ticket Booking ಗೆ ಅವಕಾಶ ನೀಡಿದೆ. ಪ್ರಯಾಣಿಕರು ತಮ್ಮ ಪ್ರಯಾಣಕ್ಕಾಗಿ ಟಿಕೆಟ್ ಗಳನ್ನೂ Online ನಲ್ಲಿ ಪಡೆಯಬಹುದಾಗಿದೆ. ಸದ್ಯ ಟಿಕೆಟ್ ದರದಲ್ಲಿ ಇಳಿಕೆ ಮಾಡುವ ಮೂಲಕ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

Railway Ticket Price Update
Image Credit: India Today

ಪ್ರಯಾಣಿಕರ ಕನಿಷ್ಠ ಟಿಕೆಟ್ ದರದಲ್ಲಿ 10 ರೂ. ಇಳಿಕೆ ಮಾಡಲಾಗಿದೆ. ಫೆ. 27  ರಿಂದ ಈ ದರವು ಅನ್ವಯಗವಾಗಲಿದೆ, ಅಂದರೆ ನಿನ್ನೆಯಿಂದಲೇ ಹೊಸ ಟಿಕೆಟ್ ದರ ಜಾರಿಗೆ ಬಂದಿರುತ್ತದೆ. ಕರೋನ ಸಮಯದಲ್ಲಿ ರೈಲ್ವೆ ಇಲಾಖೆಯು ರೈಲುಗಳ ಟಿಕೆಟ್ ದರದಲ್ಲಿ ಹೆಚ್ಚಳವನ್ನು ಮಾಡಿತ್ತು. ಆ ಸಮಯದಲ್ಲಿ ಪ್ರಯಾಣಿಕರ ಕನಿಷ್ಠ ಟಿಕೆಟ್ 10 ರೂ. ಇದ್ದಿದ್ದನ್ನು 30 ರೂ. ಗೆ ಹೆಚ್ಚಿಸಲಾಗಿತ್ತು. ಈ ಮೂಲಕ ಒಂದೇ ಬಾರಿಗೆ 20 ರೂ. ಏರಿಕೆ ಮಾಡಲಾಗಿತ್ತು. ಸದ್ಯ ಇದೀಗ ರೈಲುಗಳ ಸೆಕೆಂಡ್ ಕ್ಲಾಸ್ ದರವನ್ನು ಮತ್ತೆ ಹಿಂದಿನ 10 ರೂ. ಗೆ ಇಳಿಸಲಾಗಿದೆ. ಹಾಗೆಯೆ ಟಿಕೆಟ್ ದರಗಳನ್ನು ಕೂಡ ಸೆ. 40 ರಿಂದ 50 ರಷ್ಟು ಕಡಿತಗೊಳಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group