Railway Ticket Refund: ರೈಲು ಟಿಕೆಟ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್, ಇನ್ಮುಂದೆ 24 ಘಂಟೆಯೊಳಗೆ ಹಣ ವಾಪಾಸ್.

ರೈಲು ಟಿಕೆಟ್ ಬುಕ್ ಮಾಡುವವರಿಗೆ ಹೊಸ ಸೇವೆ ಆರಂಭ

Railway Ticket Refund Latest Update: ಭಾರತೀಯ ರೈಲ್ವೆಯು ಪ್ರಯಾಣಿಕರಿಗಾಗಿ ಆಗಾಗ ಹೊಸ ಹೊಸ ಸೌಲಭ್ಯವನ್ನು ನೀಡುತ್ತಾ ಇರುತ್ತದೆ. ಇದೀಗ ರೈಲ್ವೆ 100 ದಿನಗಳ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯು ರೈಲ್ವೆ ಪ್ರಯಾಣಿಕರಿಗಾಗಿ ಸಾಕಷ್ಟು ಅನುಕೂಲವನ್ನು ಮಾಡಿಕೊಡಲಿದೆ.

ಈಗಾಗಲೇ ಪ್ರತಿನಿತ್ಯ ರೈಲುಗಳಲ್ಲಿ ಲಕ್ಷಾಂತರ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಹೆಚ್ಚು ಹೆಚ್ಚು ಸೌಲಭ್ಯಗಳು ಜಾರಿಯಾಗುತ್ತಿರುವ ಕಾರಣ ಪ್ರಯಾಣಿಕರು ಕೂಡ ಹೆಚ್ಚಾಗುತ್ತಿದ್ದಾರೆ. ಸದ್ಯ 100 ದಿನಗಳ ಯೋಜನೆ ಹಾಕಿಕೊಂಡಿರುವ ರೈಲ್ವೆ ಇಲಾಖೆಯು ಇದೀಗ ಪ್ರಯಾಣಿಕರಿಗಾಗಿ ಟಿಕೆಟ್ ಹಣದ ಮರುಪಾವತಿಗೆ ಸಂಬಂಧಿಸಿದಂತೆ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.

Railway Ticket Refund
Image Credit: Informalnewz

ಇನ್ಮುಂದೆ 24 ಘಂಟೆಯೊಳಗೆ ಹಣ ವಾಪಾಸ್
ಭಾರತೀಯ ರೈಲ್ವೇಯು ಪ್ರಯಾಣಿಕರಿಗಾಗಿ ಹೊಸ ‘ಸೂಪರ್ ಆ್ಯಪ್’ ಅನ್ನು ಪರಿಚಯಿಸಲು ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದು ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರತಿಯೊಂದು ಕೆಲಸವನ್ನು ಸುಲಭಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಭಾರತೀಯ ರೈಲ್ವೆ ಯೋಜನೆಯ ಪ್ರಕಾರ, ಮುಂಬರುವ ದಿನಗಳಲ್ಲಿ ವಂದೇ ಭಾರತ್‌ ನಂತಹ ವೇಗದ ರೈಲುಗಳಲ್ಲಿ ಸ್ಲೀಪರ್ ಸೀಟ್‌ ಗಳು ಲಭ್ಯವಿರುತ್ತವೆ. ಇಡೀ ದೇಶದಲ್ಲೇ ಪ್ರಥಮ ಬಾರಿಗೆ ರೈಲ್ವೆ ಮೇಲ್ಸೇತುವೆ ಹಾಗೂ ರೈಲ್ವೆ ಕೆಳಸೇತುವೆ ನಿರ್ಮಿಸುವ ಗುರಿ ಹೊಂದಲಾಗಿದೆ.

ಇದಲ್ಲದೆ, ಅಹಮದಾಬಾದ್ ಮತ್ತು ಮುಂಬೈಗೆ ಸಂಪರ್ಕ ಕಲ್ಪಿಸುವ ಬುಲೆಟ್ ರೈಲಿನ ಕಾಮಗಾರಿಯೂ ತ್ವರಿತಗತಿಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹೊಸ ಸರ್ಕಾರಕ್ಕೆ 100 ದಿನಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಚಿವಾಲಯಗಳು ಸಿದ್ಧತೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.

IRCTC refund rules
Image Credit: Jagran

ಇನ್ಮುಂದೆ 24 ಘಂಟೆಯೊಳಗೆ ಹಣ ವಾಪಾಸ್
ಪ್ರಸ್ತುತ, ಬುಕ್ ಮಾಡಿದ ಟಿಕೆಟ್‌ ನ ರದ್ದತಿಗೆ ಮರುಪಾವತಿಗೆ ಮೂರು ದಿನಗಳ ಅಗತ್ಯವಿದೆ. ಆದರೆ ಶೀಘ್ರದಲ್ಲೇ ಈ ತೊಂದರೆ ಕೊನೆಗೊಳ್ಳುತ್ತದೆ. ಭಾರತೀಯ ರೈಲ್ವೆಯು 24 ಗಂಟೆಗಳಲ್ಲಿ ಮರುಪಾವತಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

Join Nadunudi News WhatsApp Group

ಇದಕ್ಕಾಗಿ ರೈಲ್ವೇ ಹೊಸ ಸೂಪರ್ ಆ್ಯಪ್ ಅನ್ನು ಕೂಡ ಬಿಡುಗಡೆ ಮಾಡಲಿದ್ದು, ಇದರ ಮೂಲಕ ಟಿಕೆಟ್ ಬುಕ್ಕಿಂಗ್ ನಿಂದ ಹಿಡಿದು ರೈಲು ಟ್ರ್ಯಾಕಿಂಗ್ ವರೆಗೆ ಹಲವು ಕೆಲಸಗಳನ್ನು ಸುಲಭವಾಗಿ ಮಾಡಬಹುದಾಗಿದೆ. ಇನ್ನಮುಂದೆ ರೈಲು ಟಿಕೆಟ್ ಬುಕಿಂಗ್ ಗಾಗಲಿ, ಟಿಕೆಟ್ ನ ಹಣದ ಮರುಪಾವತಿಗಾಗಲಿ ಹೆಚ್ಚು ಕಾಯುವ ಅಗತ್ಯ ಇರುವುದಿಲ್ಲ.

Railway Ticket Refund Latest Update
Image Credit: Indiatoday

Join Nadunudi News WhatsApp Group