Gruha Lakshmi: ಗೃಹ ಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್, ಇಂತಹ ಮಹಿಳೆಯರ ಅರ್ಜಿ ತಿರಸ್ಕಾರ ಮಾಡಿದ ಸರ್ಕಾರ.

ಇಂತಹ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ ಅರ್ಜಿ ತಿರಸ್ಕರಿಸಿದ ಸರ್ಕಾರ

Gruha Lakshmi Application Rejection: ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಯಲ್ಲಿ ಒಂದಾದ Gruha Lakshmi ಯೋಜನೆ ಅನುಷ್ಠಾನಗೊಂಡು ಎಂಟು ತಿಂಗಳು ಕಳೆಯುತ್ತಾ ಬಂದರು ಕೂಡ ದಿನಕ್ಕೊಂದು ಹೊಸ ಹೊಸ ಅಪ್ಡೇಟ್ ಹೊರಬೀಳುತ್ತ ಇರುತ್ತದೆ. ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈವರೆಗೆ 16,000 ರೂ ಹಣವನ್ನು ಪಡೆದುಕೊಂಡಿದ್ದಾರೆ.

ಆದರೆ ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಅಷ್ಟು ಮಹಿಳೆಯರಿಗೆ ಯೋಜನೆಯ ಹಣ ಜಮಾ ಆಗಿಲ್ಲ. ಈವರೆಗೆ ಒಂದು ಕಂತಿನ ಹಣವನ್ನು ಪಡೆಯದ ಸಾಕಷ್ಟು ಮಹಿಳೆಯರಿದ್ದಾರೆ. ಸದ್ಯ ರಾಜ್ಯ ಸರ್ಕಾರ ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆಯುತ್ತಿದ್ದ ಮಹಿಳೆಯರಿಗೆ ಹಣ ಜಮಾ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿದೆ. ಇನ್ನುಮುಂದೆ ಗೃಹ ಲಕ್ಷ್ಮಿ ಯೋಜನೆಯಡಿ ಇಂತಹ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದಿಲ್ಲ.

Gruha Lakshmi Big Update
Image Credit: News9live

ಗೃಹ ಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್

ಗೃಹ ಲ್ಕಷ್ಮಿ ಯೋಜನೆಯಡಿ ಅರ್ಹ ಮಹಿಳೆಯರ ಖಾತೆಗೆ ಮಾಸಿಕ 2,000 ರೂ ಹಣ ಜಮಾ ಆಗುತ್ತಿದೆ. ಈವರೆಗೆ ಗೃಹ ಲಕ್ಷ್ಮಿ ಯೋಜನೆಯಡಿ 8 ಕಂತುಗಳ ಹಣ ಅಂದರೆ 16,000 ರೂ ಹಣ ಜಮಾ ಆಗಿದೆ. ಅದಾಗ್ಯೂ, ಗೃಹ ಲಕ್ಷ್ಮಿ ಯೋಜನೆಯಡಿ ಕೆಲ ಅಂರಹರು ಯೋಜನೆಯ ಲಾಭವನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಯೋಜನೆಗೆ ಅರ್ಜಿ ಸಲ್ಲಿಸಿದ 80 ಸಾವಿರ ಅರ್ಜಿ ತಿರಸ್ಕಾರಗೊಂಡಿದೆ.

ಇಂತಹ ಮಹಿಳೆಯರ ಅರ್ಜಿ ತಿರಸ್ಕಾರ ಮಾಡಿದ ಸರ್ಕಾರ
ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಮೂಲಕ ಈಗಾಗಲೇ ಹಣ ಪಡೆದಿರುವ ಸುಮಾರು 26 ಸಾವಿರ ಮಹಿಳೆಯರಿಗೆ ಇನ್ನು ಮುಂದೆ ಅವರ ಖಾತೆಗಳಿಗೆ ಜಮಾ ಆಗುವುದಿಲ್ಲ. ಆದಾಯ ತೆರಿಗೆ ಪಾವತಿದಾರರಾಗಿದ್ದರೂ ಸುಮಾರು 14,000 ಜನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಮತ್ತು ಬ್ಯಾಂಕ್ ಖಾತೆ ವರ್ಗಾವಣೆ (ಡಿಬಿಟಿ) ಮೂಲಕ ಹಣವನ್ನು ಪಡೆದರು. ಆದರೆ ಇನ್ಮುಂದೆ ಅಂತಹ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದಿಲ್ಲ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಲ್ಲ ಎಂದು ಈ ಹಿಂದೆ ಸೂಚಿಸಲಾಗಿತ್ತು.

Join Nadunudi News WhatsApp Group

Gruha Lakshmi Application Rejection
Image Credit: Citizenmatters

ಆದರೆ, ದಾಖಲೆಗಳ ಪ್ರಕಾರ 80 ಸಾವಿರಕ್ಕೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ಈ ಕಾರಣದಿಂದ ಇನ್ನು ಮುಂದೆ ಈ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಮಾನ್ಯವಾಗುವುದಿಲ್ಲ. ಅನರ್ಹರು ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಯಾರು ಗೃಹ ಲಕ್ಷ್ಮಿ ಯೋಜನೆಯಡಿ ಹಣವನ್ನು ಪಡೆಯಲು ಅರ್ಹರಿ ಅಂತವರಿಗೆ ಮಾತ್ರ ಯೋಜನೆಯ ಹಣ ಜಮಾ ಆಗಲಿದೆ. ಸರ್ಕಾರ ಗೃಹ ಲಕ್ಷ್ಮಿ ಅರ್ಜಿ ಸಲ್ಲಿಕೆಯ ದಾಖಲೆಯನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದೆ. ಅರ್ಜಿ ಸಲ್ಲಿಕೆಯ ಯಾವುದೇ ದೋಷ ಕಂಡುಬಂದರೂ ಕೂಡ ಸರ್ಕಾರ ಅಂತಹ ಅರ್ಜಿಯನ್ನು ತಿರಸ್ಕಾರಗೊಳಿಸಲಿದೆ.

Gruha Lakshmi Yojana Latest
Image Credit: Oneindia

Join Nadunudi News WhatsApp Group