Punch And Swift: ಟಾಟಾ ಪಂಚ್ ಮತ್ತು ಮಾರುತಿ ಸ್ವಿಫ್ಟ್ ಎರಡರಲ್ಲಿ ಯಾವ ಕಾರ್ ಬೆಸ್ಟ್…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಸ್ವಿಫ್ಟ್ ಮತ್ತು ಟಾಟಾ ಪಂಚ್ ನಲ್ಲಿ ಯಾವ ಕಾರ್ ಬೆಸ್ಟ್ ನೋಡಿ

Tata Punch v/s Maruti Swift: ಭಾರತೀಯ ಮಾರುಕಟ್ಟೆಯಲ್ಲಿ ಈಗಂತೂ ಅನೇಕ ಮಾದರಿಯ ಕಾರ್ ಗಳು ಲಾಂಚ್ ಆಗುತ್ತಿವೆ. ಗ್ರಾಹಕರಿಗೆ ಯಾವ ಮಾದರಿಯ ಕಾರ್ ಅನ್ನು ಖರೀದಿಸಬೇಕು ಎನ್ನುವ ಗೊಂದಲ ಉಂಟಾಗುವಷ್ಟು ಆಯ್ಕೆಗಳು ಲಭ್ಯವಿದೆ.

ಇನ್ನು ಮಾರುಕಟ್ಟೆಯಲ್ಲಿ ಇತ್ತೀಚಿಗೆ Tata ಪಂಚ್ EV ಮತ್ತು Maruti Swift ನ ಬಗ್ಗೆ ಸಾಕಷ್ಟು ಅಪ್ಡೇಟ್ ಕೇಳಿಬರುತ್ತಿದೆ. ಈ ಎರಡು ಮಾಡೆಲ್ ಕಾರ್ ಗಳು ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ. ಈ ಎರಡು ಮಾದರಿಯಲ್ಲಿ ಯಾವ ಕಾರ್ ಬೆಸ್ಟ್ ಎನ್ನುವ ಪ್ರಶ್ನೆ ಇದೀಗ ಜನರಲ್ಲಿ ಮೂಡಿದೆ. ನಾವೀಗ ಈ ಲೇಖನದಲ್ಲಿ ಎರಡು ಕಾರ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Tata Punch Electric Price In India
Image Credit: Live Hindustan

ಟಾಟಾ ಪಂಚ್ ಮತ್ತು ಮಾರುತಿ ಸ್ವಿಫ್ಟ್ ಎರದಲ್ಲಿ ಯಾವ ಕಾರ್ ಬೆಸ್ಟ್…?
•Tata Punch
ಇದೀಗ ಟಾಟಾ ಕಂಪನಿಯು ಎಲೆಕ್ಟ್ರಿಕ್ SUV Tata Punch EV ಯ ಸ್ಮಾರ್ಟ್ ರೂಪಾಂತರವನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ರೂಪಾಂತರವು 10,98,999 ಆರಂಭಿಕ ಎಕ್ಸ್ ಶೋರೂಂ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. ಈ SUV ಯ ಆನ್ ರೋಡ್ ಬೆಲೆ ರೂ. 11,54,168 ಆಗಿದೆ. ಟಾಟಾ ಪಂಚ್ EV ಎಲೆಕ್ಟ್ರಿಕ್ SUV ಯಲ್ಲಿ ನೀವು 25 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತೀರಿ. ನೀವು 3.6 ಗಂಟೆಗಳಲ್ಲಿ 10 ರಿಂದ 100 ಪ್ರತಿಶತ ಚಾರ್ಜ್ ಮಾಡಬಹುದು. ಇದರಲ್ಲಿ ಕಂಪನಿಯು ಗಂಟೆಗೆ 140 ಕಿಲೋಮೀಟರ್ ವೇಗವನ್ನು ಒದಗಿಸುತ್ತದೆ.

ಇದರಲ್ಲಿ ನೀವು ಒಂದೇ ಚಾರ್ಜ್‌ ನಲ್ಲಿ 315 ಕಿಲೋಮೀಟರ್‌ ಗಳ ಮೈಲೇಜ್ ಅನ್ನು ಪಡೆಯಬಹುದು. ಟಾಟಾದ ಎಲೆಕ್ಟ್ರಿಕ್ ಮಾದರಿಯಲ್ಲಿ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮೆರಾ, leather ಆಸನಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ ಹಿಲ್ ಹೋಲ್ಡ್ ಅಸಿಸ್ಟ್, Connected Car Tech, ವೈರ್ಲೆಸ್ ಚಾರ್ಜರ್, Ventilated seats in front, cruise control, ಸನ್ರೂಫ್ ಸೇರಿದಂತೆ ಹೆಚ್ಚಿನ ಫೀಚರ್ ಅನ್ನು ಕಾಣಬಹುದು.

Maruti Suzuki Swift Price
Image Credit: Autocar India

•Maruti Suzuki Swift
ಬಹುನಿರೀಕ್ಷಿತ Maruti Suzuki Swift 2024 ಮಾರುಕಟ್ಟೆಯಲ್ಲಿ Sunroof ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಕಾರ್ ನಲ್ಲಿನ Sunroof ವೈಶಿಷ್ಟ್ಯವು ಕಾರ್ ಗೆ ಐಷಾರಾಮಿ ಲುಕ್ ನೀಡುತ್ತದೆ. ರಸ್ತೆ ಪರೀಕ್ಷೆಯಲ್ಲಿ ಸ್ವಿಫ್ಟ್ ಡಿಜೈರ್ ಇತ್ತೀಚೆಗೆ ಸನ್‌ ರೂಫ್‌ ನೊಂದಿಗೆ ಗುರುತಿಸಲ್ಪಟ್ಟಿದೆ. ಮುಂಬರಲಿರುವ ಮಾರುತಿ ಸ್ವಿಫ್ಟ್ ಪ್ರತಿ ಲೀಟರ್ ಗೆ ಸುಮಾರು 40km ಮೈಲೇಜ್ ಅನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Join Nadunudi News WhatsApp Group

ಸ್ವಿಫ್ಟ್ ನಲ್ಲಿ ಕಂಪನಿಯು ಹೈಬ್ರಿಡ್ ಎಂಜಿನ್ ಅನ್ನು ನೀಡಿದೆ. ಇನ್ನು 2024 ರ ಮಧ್ಯದಲ್ಲಿ ಅಥವಾ ಈ ವರ್ಷದ ಅಂತ್ಯದೊಳಗೆ ಸ್ವಿಫ್ಟ್ ಅನಾವರಣಗೊಳ್ಳಲಿದೆ. ಸ್ವಿಫ್ಟ್ ನಲ್ಲಿ 1.2-ಲೀಟರ್ 3-ಸಿಲಿಂಡರ್, ನೈಸರ್ಗಿಕವಾಗಿ-ಆಕಾಂಕ್ಷೆಯ Z12 ಪೆಟ್ರೋಲ್ ಎಂಜಿನ್ ಅನ್ನು ಸ್ವಿಫ್ಟ್ ಹ್ಯಾಚ್‌ ಬ್ಯಾಕ್‌ ನಲ್ಲಿ ಪರಿಚಯಿಸಲಾಗಿದೆ. ಇನ್ನು Instrument cluster with automatic climate control, analog dial, digital multi-information display ವೈಶಿಷ್ಟ್ಯಗಳನ್ನು ಹೊಂದಿರುವ ಸ್ವಿಫ್ಟ್ ಮಾದರಿ ಮಾರುಕಟ್ಟೆಯಲ್ಲಿ ಸರಿಸುಮಾರು 6 .56 ರಿಂದ 9 .38 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Tata Punch vs Maruti Swift
Image Credit: Gaadiwaadi

Join Nadunudi News WhatsApp Group