Rain Alert: ಇಂದು ರಾಜ್ಯದ ಈ 23 ಜಿಲ್ಲೆಗಳಲ್ಲಿ ಆಗಲಿದೆ ಭರ್ಜರಿ ಮಳೆ, ಯಲ್ಲೋ ಅಲರ್ಟ್ ಘೋಷಣೆ.

ಇಂದು ರಾಜ್ಯದ ಈ 23 ಜಿಲ್ಲೆಗಳಲ್ಲಿ ಆಗಲಿದೆ ಭರ್ಜರಿ ಮಳೆ

Rain Alert In Karnataka: ಸದ್ಯ ಬೇಸಿಗೆಯ ಬಿಸಿ ಜನರನ್ನು ಸುಡುತ್ತಿದೆ. ಬಿಸಿಲಿನ ಶಾಖಕ್ಕೆ ಜನರು ಕಂಗಾಲಾಗಿದ್ದಾರೆ. ಅತಿಯಾದ ತಾಪಮಾನದಿಂದ ರಕ್ಷಿಸಿಕೊಳ್ಳಲು ಜನರು ಅನೇಕ ಮಾರ್ಗಗಳನ್ನು ಹುಡುಕುತ್ತಿದ್ದರೆ. ತಂಪನ್ನು ಪಡೆಯಲು ಕೂಲ್ ಡ್ರಿಂಕ್ ಕುಡಿಯುವುದು, ಎಸಿ, ಫ್ಯಾನ್ , ಕೂಲರ್ ಗಳನ್ನೂ ಬಳಸುತ್ತಿದ್ದಾರೆ.

ಇನ್ನು ಶೆಕೆಯಿಂದ ಹೆಚ್ಚಿನ ನಿರಾಳ ಪಡೆಯಲು ಜನರು ಮಳೆಗಾಗಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶೆಕೆಯಿಂದ ಪರಿಹಾರ ಕಂಡುಕೊಳ್ಳಲು ಇದೀಗ ಮಳೆಯೊಂದೇ ದಾರಿಯಾಗಿದೆ. ಮಳೆ ಯಾವಾಗ ಬರುತ್ತದೋ ಎನ್ನುವ ನಿರೀಕ್ಷೆ ಜನರಲ್ಲಿ ಹೆಚ್ಚಾಗಿ. ಇನ್ನು ಮಳೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಜನತೆಗೆ ಇದೀಗ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ರಾಜ್ಯ ಯಾವ ದಿನದಂದು, ಯಾವ ಜಿಲ್ಲೆಯಲ್ಲಿ ಮಳೆ ಆಗಲಿದೆ ಎನ್ನುವ ಬಗ್ಗೆ ಹವಾಮಾನ ಇಲಾಖೆ ಇದೀಗ ಮಾಹಿತಿ ನೀಡಿದೆ.

Rain Alert In Karnataka
Image Credit: Firstpost

ಇಂದು ರಾಜ್ಯದ ಈ 23 ಜಿಲ್ಲೆಗಳಲ್ಲಿ ಆಗಲಿದೆ ಭರ್ಜರಿ ಮಳೆ
ಬಿಸಿಲಿನ ತಾಪದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಸಂತಸದ ಸುದ್ದಿ ನೀಡಿದೆ. ಇಂದು ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 23 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ 8 ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ಶಿವಮೊಗ್ಗ, ಕೊಡಗು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಜಯಪುರ, ಕಲಬುರಗಿ, ಯಾದಗಿರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

Rain Alert Latest News
Image Credit: News9live

Join Nadunudi News WhatsApp Group

Join Nadunudi News WhatsApp Group