Rain Alert: ಮುಂದಿನ ಮೂರೂ ದಿನ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಬಾರಿ ಮಳೆ, ಇಲಾಖೆಯ ಎಚ್ಚರಿಕೆ.

ಮುಂದಿನ ಮೂರೂ ದಿನ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಬಾರಿ ಮಳೆಯಾಗಲಿದೆ.

Rain Alert: ಜನರು ಬೇಸಿಗೆಯ ಬಿಸಿಲಿಗೆ ರೋಸಿ ಹೋಗಿದ್ದಾರೆ. ಈ ಸಮಯದಲ್ಲಿ ಮಳೆ ಬರಲಿ ಎಂದು ಎಲ್ಲರು ಬಯಸುತ್ತಾರೆ. ಒಂದು ಮಳೆ ಬಂದರೆ ಕೃಷಿಗೆ, ತೋಟಕ್ಕೆ, ಬೆಳೆಗಳಿಗೆ ಉತ್ತಮವಾಗುತ್ತದೆ. ಹೀಗಿರುವಾಗ ಈಗಾಗಲೇ ಕೆಲವು ಕಡೆ ಒಂದೆರಡು ಬಾರಿ ಮಳೆ ಬಿದ್ದಿದೆ. ಮಳೆ ಬಂದರು ಬಿಸಿಲಿನ ಶಾಖ ಕಡಿಮೆಯಾಗಿಲ್ಲ ಎನ್ನಬಹುದು.

ಇನ್ನು ಮೇ ಮೊದಲ ವಾರದಲ್ಲಿ ಮಳೆ ಬರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಅಲ್ಲಲ್ಲಿ ಮಳೆ ಆಗಿದೆ. ಸದ್ಯ ಕರ್ನಾಟಕದಲ್ಲಿ ಮುಂದಿನ ಮೂರೂ ದಿನ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಬಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Rain Alert Update
Image Credit: Oneindia

ಮುಂದಿನ ಮೂರೂ ದಿನ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಬಾರಿ ಮಳೆ
ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಚಿತ್ರದುರ್ಗದ ದಕ್ಷಿಣ ಒಳನಾಡಿನ ಜಿಲ್ಲೆಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉಳಿದ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮಲೆನಾಡಿನ ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಲಿದ್ದು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರಿನಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಸಾಧಾರಣ ಮಳೆಯಾಗಿದೆ.

Rain Alert In Karnataka
Image Credit: Firstpost

Join Nadunudi News WhatsApp Group

Join Nadunudi News WhatsApp Group