Rain Alert: ಇಂದಿನಿಂದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ, ರೆಡ್ ಅಲರ್ಟ್ ಘೋಷಣೆ ಮಾಡಿದ ಹವಾಮಾನ ಇಲಾಖೆ

ಇಂದಿನಿಂದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ

Rain Alert In Karnataka: ಸದ್ಯ ಕೆಲವು ಕಡೆ ಧಾರಾಕಾರ ಮಳೆಯಿಂದಾಗಿ ಹಾನಿ ಉಂಟಾಗಿದ್ದರೆ. ಇನ್ನು ಕೆಲವೊಂದು ಕಡೆ ಒಂದು ಮಳೆ ಕೂಡ ಬಂದಿಲ್ಲ ಎನ್ನಬಹುದು. ಮೇ ತಿಂಗಳ ಮೊದಲ ವಾರದಲ್ಲಿ ಕೆಲ ಪ್ರದೇಶದಲ್ಲಿ ಮಳೆ ಸುರಿದಿದೆ. ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಜನರಿಗೆ ಮಳೆಯ ಅಗತ್ಯ ಹೆಚ್ಚಿದೆ. ಹಾಗೆಯೆ ಕೃಷಿ ಮಾಡಿವವರಿಗೆ ತೋಟಗಳಿಗೆ ನೀರಿನ ಕೊರತೆ ಉಂಟಾಗಿರುವುದರಿಂದ ರೈತರು ಮಳೆಗಾಗಿ ಕಾಯುತ್ತಿದ್ದಾರೆ.

ಸದ್ಯ ಮಳೆ ಇಲ್ಲದೆ ಬಿಸಿಲು ಹೆಚ್ಚಾಗಿ ಜನರು ಚಿಂತಿಸುತಿದ್ದಾರೆ. ಸದ್ಯ ಹವಾಮಾನ ಇಲಾಖೆಯು ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಮಳೆ ಯಾವಾಗ ಬರಲಿದೆ ಎನ್ನುವ ಬಗ್ಗೆ ವರದಿ ನೀಡಿದೆ. ಇದೀಗ ನಾವು ಕರ್ನಾಟಕದ ಯಾವ ಯಾವ ಜಿಲ್ಲೆಯಲ್ಲಿ ಮಳೆ ಆಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Rain Alert In Karnataka
Image Credit: India Today

ಇಂದಿನಿಂದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ
ಕೇರಳದಲ್ಲಿ ಈಗಾಗಲೇ ಮುಂಗಾರು ಆರಂಭವಾಗಿದ್ದು, ಇಂದಿನಿಂದ ಕರ್ನಾಟಕಕ್ಕೆ ಮುಂಗಾರು ಪ್ರವೇಶಮಾಡಲಿದೆ. ಪರಿಣಾಮ ಇಂದು ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಮುಂದಿನ 5 ದಿನಗಳ ವರೆಗೆ ರಾಜ್ಯದ ಎಂಟು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಇನ್ನು ಜೂನ್‌ 3 ರಂದು ಮುಂಗಾರು ಮಳೆ ಉತ್ತರ ಒಳನಾಡು ಪ್ರವೇಶ ಮಾಡುವ ಸಾಧ್ಯತೆಯಿದ್ದು ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

 Karnataka Weather update
Image Credit: Live Mint

Join Nadunudi News WhatsApp Group

Join Nadunudi News WhatsApp Group