Rain Alert: ಬಿಸಿಲಿನಿಂದ ತತ್ತರಿಸಿದ ಜನತೆಗೆ ಗುಡ್ ನ್ಯೂಸ್, ರಾಜ್ಯದಲ್ಲಿ ಈ ಭಾಗದಲ್ಲಿ ಈ ವಾರ ಭರ್ಜರಿ ಮಳೆ.

ರಾಜ್ಯದಲ್ಲಿ ಈ ಭಾಗದಲ್ಲಿ ಈ ವಾರ ಭರ್ಜರಿ ಮಳೆ

Rain Alert: ಸದ್ಯ ಜನರು ಬೇಸಿಗೆಯ ಬಿಸಿಲಿನ ಶಾಖಕ್ಕೆ ರೋಸಿ ಹೋಗಿದ್ದಾರೆ. ಬಿಸಿಗೆಯಿಂದ ಮುಕ್ತಿ ಪಡೆದುಕೊಳ್ಳಲು ಫ್ಯಾನ್, ಎಸಿ, ಕೂಲರ್ ಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಯಾವುದೇ ರೀತಿಯಲ್ಲೂ ಶೆಕೆಯಿಂದ ಅಷ್ಟೊಂದು ಪರಿಹಾರ ಸಿಗುತ್ತಿಲ್ಲ ಎನ್ನಬಹುದು. ಈ ಕಾರಣಕ್ಕೆ ಮಳೆಯ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದರೆ.

ಮಳೆ ಯಾವಾಗ ಬರುತ್ತದೆ ಎಂದು ಕಾಯುವಂತಾಗಿದೆ. ಮಳೆಯ ಕೊರತೆಯಿಂದಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಬರ ಪರಿಸ್ಥಿತಿ ಎದುರಾಗಿದೆ. ಕುಡಿಯಲು ನೀರಿಲ್ಲದೆ ಕೂಡ ಜನರು ಪರದಾಡುವಂತಾಗಿದೆ ಎನ್ನಬಹುದು. ಇನ್ನು ಮಳೆಯ ನಿರೀಕ್ಷೆಯಲ್ಲಿರುವ ಜನರಿಗೆ ಹವಾಮಾನ ಇಲಾಖೆ ಇದೀಗ ಸಿಹಿ ಸುದ್ದಿ ನೀಡಿದೆ. ಹೌದು, ಯಾವ ದಿನದಲ್ಲಿ ಯಾವ ಯಾವ ಜಿಲ್ಲೆಯಲ್ಲಿ ಈ ಬಾರಿ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.

Rain Alert In Karnataka
Image Credit: Live Mint

ಬಿಸಿಲಿನಿಂದ ತತ್ತರಿಸಿದ ಜನತೆಗೆ ಗುಡ್ ನ್ಯೂಸ್
ಭೂಮಿಯ ತಾಪಮಾನ ಹೆಚ್ಚಳ ಹಾಗೂ ಭೂಮಿಯ ವಾತಾವರಣದಲ್ಲಿ ಮಾನವನ ಹಿಂಸೆಯೇ ಮಳೆ ಬಾರದಿರುವುದಕ್ಕೆ ಕಾರಣ ಎನ್ನುತ್ತಾರೆ ವಿಜ್ಞಾನಿಗಳು. ಮಳೆಯ ಅಭಾವ ನೇರವಾಗಿ ರೈತರ ಮೇಲೆ ಪರಿಣಾಮವನ್ನು ಬೀರುತ್ತದೆ. ರೈತರು ಬೆಲೆ ಬೆಳೆದಿದ್ದಾರೆ ಸರಿಯಾದ ಸಮಯದಲ್ಲಿ ಮಳೆ ಇಲ್ಲದಿದ್ದರೆ ದೊಡ್ಡ ಪ್ರಮಾಣದ ನಷ್ಟವನ್ನು ಎದುರಿಸಬೇಕಾಗುತ್ತದೆ. ನಿಮಗೆ ತಿಳಿದಿರುವ ಹಾಗೆ ಕೃಷಿ ಮಾಡಲು ಮಳೆ ಅಗತ್ಯವಾಗಿರುತ್ತದೆ. ಮಳೆ ಇಲ್ಲದೆ ಹಲವಡೆ ನೀರಿನ ಸಮಸ್ಯೆ ಹೆಚ್ಚಿದೆ. ನೀರಿಗಾಗಿ ಆಹಾಕಾರ ಕೇಳಿಬರುತ್ತಿದೆ. ಇನ್ನು ಮೇ ಮೊದಲ ವಾರದಲ್ಲಿ ಮಳೆ ಬರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಈ ಭಾಗದಲ್ಲಿ ಈ ವಾರ ಭರ್ಜರಿ ಮಳೆ
ಹವಾಮಾನ ತಜ್ಞರ ಪ್ರಕಾರ ಮೇ ಮೊದಲ ವಾರದಲ್ಲಿ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರು, ಮೈಸೂರು, ಹಾಸನ, ರಾಮನಗರ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಭಾರೀ ಮಳೆಯಾಗಲಿ ಎಂದು ಜನರು ದೇವರ ಮೊರೆ ಹೋಗುತ್ತಿದ್ದಾರೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಈ ವಾರ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಕನ್ನಡಿಗರು ಸಂತಸಗೊಂಡಿದ್ದಾರೆ.

Rain Alert Update
Image Credit: Oneindia

Join Nadunudi News WhatsApp Group

Join Nadunudi News WhatsApp Group