Raita Siri: ಕಡಿಮೆ ಭೂಮಿ ಹೊಂದಿರುವ ರೈತರ ಖಾತೆಗೆ 10000 ರೂ ಹಾಕಲು ಸರ್ಕಾರದ ನಿರ್ಧಾರ, ಹೊಸ ಯೋಜನೆ.

ಕಡಿಮೆ ಭೂಮಿ ಹೊಂದಿರುವ ರೈತರ ಖಾತೆಗೆ 10000 ರೂ ಹಾಕಲು ಸರ್ಕಾರದ ನಿರ್ಧಾರ

Raita Siri Yojana 2024: ರಾಜ್ಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಯೋಜನೆಗಳು ಪರಿಚಯವಾಗುತ್ತಿದೆ. ಮಹಿಳೆಯರಿಗೆ, ನಿರುದ್ಯೋಗಿಗಳಿಗೆ, ಹಿರಿಯ ನಾಗರಿಕರಿಗೆ ಸೇರಿದಂತೆ ರೈತರಿಗಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆಯನ್ನು ಪರಿಚಯಿಸಿದೆ. ಇತ್ತೀಚೆಗಷ್ಟೇ ರಾಜ್ಯದ ರೈತರು ಬರಗಾಲದಿಂದಾಗಿ ತಮ್ಮ ಬೆಳೆಯನ್ನು ಕಳೆದುಕೊಂಡಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಬೆಲೆ ಪರಿಹಾರವನ್ನು ನೀಡಿದೆ.

ಇನ್ನು ಸರಿಯಾದ ಸಮಯಕ್ಕೆ ಮಳೆ ಬಾರದೆ ಇರುವ ಕಾರಣ ರೈತರು ಕೃಷಿ ಮಾಡಲು ಹಿಂದೆಯೂ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಸಾವಯವ ಕೃಷಿ ಮತ್ತು ರಾಗಿ ಬೆಳೆಯುವವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಯೋಜನೆಗೆ ಚಾಲನೆ ನೀಡಲು ಮುಂದಾಗಿದೆ. ಈ ಯೋಜನೆಯಡಿ ರೈತರಿಗೆ ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ.

Raita Siri Yojana 2024
Image Credit: Karnataka Times

ರಾಜ್ಯದಲ್ಲಿ “ರೈತ ಸಿರಿ” ಯೋಜನೆ ಜಾರಿ
ರಾಜ್ಯದಲ್ಲಿ ಕಡಿಮೆ ಭೂಮಿ ಹೊಂದಿರುವ ರೈತರಿಗಾಗಿ ರಾಜ್ಯ ಸರ್ಕಾರ ವಿಶೇಷ ಯೋಜನೆಯನ್ನು ಆರಂಭಿಸಲು ಯೋಜನೆ ಹಾಕಿಕೊಂಡಿದೆ. ಕಡಿಮೆ ಭೂಮಿ ಎಂದರೆ 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವವರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಸಿರಿದಾನ್ಯ ಬೆಳೆಯನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ “ರೈತ ಸಿರಿ” ಯೋಜನೆನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ರೈತರು ಸಿರಿದಾನ್ಯ ಬೆಳವಣಿಗೆಗೆ ಬೇಕಾಗುವ ಅಗತ್ಯ ವಸ್ತುಗಳ ಪೂರೈಕೆಗೆ ಹಣಕಾಸಿನ ನೆರವನ್ನು ಪಡೆಯಬಹುದು.

ಕಡಿಮೆ ಭೂಮಿ ಹೊಂದಿರುವ ರೈತರ ಖಾತೆಗೆ 10000 ರೂ ಹಾಕಲು ಸರ್ಕಾರದ ನಿರ್ಧಾರ
ರೈತ ಸಿರಿ ಯೋಜನೆಯ ಅಡಿಯಲ್ಲಿ ರಾಗಿ ಬೆಳೆಯುವ ರೈತರ ಪ್ರತಿ ಎಕರೆಗೆ 10,000 ರೂ. ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರ 2019 -20 ರ ಬಜೆಟ್ ನಲ್ಲಿ ಘೋಷಣೆ ಮಾಡಿದೆ. ಆದರೆ ಈ ವೇಳೆ ಅನುಷ್ಠಾನಕ್ಕೆ ತರಲು ಸಾಧ್ಯವಾಗದ ಕಾರಣ 2024 -25 ಬಜೆಟ್ ನಲ್ಲಿ ಘೋಷಿಸಿದೆ. ಮುಖ್ಯವಾಗಿ ಅರ್ಜಿದಾರರು ರೈತರಾಗಿದ್ದು, ಅವರ ಹೆಸರಿನಲ್ಲಿಯೇ ಜಮೀನು ಇದ್ದರೆ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Raita Siri Yojana Details
Image Credit: Kannada News

ಆಧಾರ್ ಕಾರ್ಡ್, ಪ್ರಾಪರ್ಟಿ ಡಾಕ್ಯುಮೆಂಟ್, ಶಾಶ್ವತ ನಿವಾಸ ಪ್ರಮಾಣಪತ್ರ, ವಿಳಾಸ ಪುರಾವೆ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಸಂಖ್ಯೆ, ಅರ್ಜಿದಾರರ ಭಾವಚಿತ್ರ ಸೇರಿದಂತೆ ಮುಖ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಕಾರಂತಕದಲ್ಲಿ ಕಡಿಮೆ ಭೂಮಿ ಹೊಂದಿರುವ ಯಾವುದೇ ರೈತರು ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

Join Nadunudi News WhatsApp Group

Raita Siri Yojana Latest Update
Image Credit: Vijay Karnataka

Join Nadunudi News WhatsApp Group