Raitha Siri: ಸ್ವಂತ ಜಮೀನು ಇರುವ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್, ಸರ್ಕಾರದಿಂದ ನಿಮಗೆ ಸಿಗಲಿದೆ 10,000 ರೂ.

ಈ ಯೋಜನೆಯಡಿ ಸ್ವಂತ ಜಮೀನು ಇರುವ ರೈತರಿಗೆ ಸಿಗಲಿದೆ 10 ಸಾವಿರ ರೂಪಾಯಿ

Raitha Siri Yojana Benefit: ದೇಶದ ಬೆನ್ನೆಲುಬಾಗಿರುವ ರೈತನಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ. ರೈತರ ಏಳಿಗೆಗಾಗಿಯೇ ಸಾಕಷ್ಟು ಯೋಜನೆಗಳನ್ನು ಜಾರಿಮಾಡಲಾಗಿದೆ. ಸದ್ಯ ರಾಜ್ಯ ಸರ್ಕಾರ ರೈತರಿಗಾಗಿ ವಿಶೇಷ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ರೈತರು ಹೆಚ್ಚಿನ ಸಹಾಯಧನವನ್ನು ಪಡೆದುಕೊಂಡು ತಮ್ಮ ಕೃಷಿಯನ್ನು ಇನ್ನಷ್ಟು ಬೆಳಸಿಕೊಳ್ಳಬಹುದು.

Karnataka Raitha Siri Scheme
Image Credit: Hindigovtscheme

ಸ್ವಂತ ಜಮೀನು ಇರುವ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್
ರಾಜ್ಯ ಸರ್ಕಾರ ಇದೀಗ ರೈತರಿಗಾಗಿ “ರೈತ ಸಿರಿ” ಯೋಜನೆಯನ್ನು ಜಾರಿ ಮಾಡಿದೆ. ರಾಜ್ಯದಲ್ಲಿ ಸಾವಯವ ಕೃಷಿ ಮತ್ತು ರಾಗಿ ಬೆಳೆಯುವವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೈತ ಸಿರಿ ಯೋಜನೆಯನ್ನು ಜಾರಿಗೊಳಿಸಿದೆ.

ರಾಗಿ ಬೆಳೆಯುವ ರೈತರ ಪ್ರತಿ ಎಕರೆಗೆ 10,000 ರೂ ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರ 2019 -20 ರ ಬಜೆಟ್ ನಲ್ಲಿ ಘೋಷಣೆ ಮಾಡಿದೆ. ಆದರೆ ಈ ವೇಳೆ ಅನುಷ್ಠಾನಕ್ಕೆ ತರಲು ಸಾಧ್ಯವಾಗದ ಕಾರಣ 2024 -25 ಬಜೆಟ್ ನಲ್ಲಿ ಘೋಷಿಸಿದೆ. ನಾವೀಗ ಈ ಯೋಜನೆಯಲ್ಲಿ ಲಾಭ ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ರೈತ ಸಿರಿ ಯೋಜನೆಯ ಲಾಭ ಪಡೆಯಲು ಯಾರು ಅರ್ಹರು
•ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.

•ಮುಖ್ಯವಾಗಿ ಅರ್ಜಿದಾರರು ರೈತರಾಗಿದ್ದು, ಅವರ ಹೆಸರಿನಲ್ಲಿಯೇ ಜಮೀನು ಇರಬೇಕು.

Join Nadunudi News WhatsApp Group

•ಮುಖ್ಯವಾಗಿ ರೈತರು ರಾಗಿ ಬೆಳೆಗಾರರಾಗಿರಬೇಕು.

•ರೈತರು ಕನಿಷ್ಠ ಒಂದು ಹೆಕ್ಟೇರ್ ಭೂಮಿ ಹೊಂದಿರಬೇಕು.

Raitha Siri Yojana Benefit
Image Credit: Fortune India

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳಾವುವು…?
•ಆಧಾರ್ ಕಾರ್ಡ್

•ಪ್ರಾಪರ್ಟಿ ಡಾಕ್ಯುಮೆಂಟ್

•ಶಾಶ್ವತ ನಿವಾಸ ಪ್ರಮಾಣಪತ್ರ

•ವಿಳಾಸ ಪುರಾವೆ

•ಪಡಿತರ ಚೀಟಿ

•ಬ್ಯಾಂಕ್ ಪಾಸ್ ಬುಕ್

•ಮೊಬೈಲ್ ಸಂಖ್ಯೆ

•ಅರ್ಜಿದಾರರ ಭಾವಚಿತ್ರ

Join Nadunudi News WhatsApp Group