ಕೊನೆಗೂ ಚಿರು ಕನಸನ್ನ ನನಸು ಮಾಡಿದ ತಮ್ಮ ದ್ರುವ ಸರ್ಜಾ, ಅಭಿಮಾನಿಗಳಿಗೆ ಸಿಹಿಸುದ್ದಿ ನೋಡಿ.

ಕನ್ನಡ ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ನಟ ಚಿರಂಜೀವಿ ಸರ್ಜಾ ಕೂಡ ಒಬ್ಬರು. ಹಲವು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟ ಚಿರಂಜೀವಿ ಸರ್ಜಾ ಅವರು ಇಂದು ನಮ್ಮಜೊತೆ ಇಲ್ಲದೆ ಇರಬಹುದು, ಆದರೆ ಅವರ ನೆನಪುಗಳು ನಾವು ಇರುವ ತನಕ ನಮ್ಮಜೊತೆ ಇರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಎರಡು ವರ್ಷದ ಹಿಂದೆ ನಟ ಚಿರಂಜೀವಿ ಸರ್ಜಾ ಅವರು ತೀವ್ರವಾದ ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದರು ಮತ್ತು ನಟ ಚಿರಂಜೀವಿ ಸರ್ಜಾ ಅವರ ಅಗಲಿಕೆಗೆ ಇಡೀ ದೇಶವೇ ಕಂಬನಿಯನ್ನ ಮಿಡಿದಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ಅಣ್ಣ ತಮ್ಮ ಅಂದರೆ ನಿಜಕ್ಕೂ ಹೇಗಿರಬೇಕು ಅನ್ನುವುದಕ್ಕೆ ಉತ್ತಮವಾದ ಉದಾಹರಣೆಯಾಗಿದ್ದರು ಚಿರಂಜೀವಿ ಸರ್ಜಾ ಮತ್ತು ದ್ರುವ ಸರ್ಜಾ.

ವಾರದ ಹಿಂದೆ ನಡೆದ ಒಂದು ಕಾರ್ಯಕ್ರಮದಲ್ಲಿ ನಟ ದ್ರುವ ಸರ್ಜಾ ಅವರು ನನಗೆ ಅಪ್ಪನನ್ನ ಬಿಟ್ಟಿದ್ದು ಬಹಳ ಅಭ್ಯಾಸ ಇದೆ ಆದರೆ ಅಣ್ಣನನ್ನ ಬಿಟ್ಟಿದ್ದು ಅಭ್ಯಾಸನೆ ಇಲ್ಲ, ನನಗೆ ತುಂಬಾ ಕಷ್ಟವಾಗುತ್ತಿದೆ ಎಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದರು ನಟ ದ್ರುವ ಸರ್ಜಾ. ಇನ್ನು ಈಗ ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ನಟ ದ್ರುವ ಸರ್ಜಾ ಅವರು ಸಿಹಿ ಸುದ್ದಿಯನ್ನ ನೀಡಿದ್ದಾರೆ. ಹೌದು ನಟ ಚಿರಂಜೀವಿ ಸರ್ಜಾ ಅವರ ಕನಸನ್ನ ತಮ್ಮ ದ್ರುವ ನನಸು ಮಾಡಿದ್ದಾರೆ ಎಂದು ಹೇಳಬಹುದು. ಹಾಗಾದರೆ ಚಿರಂಜೀವಿ ಸರ್ಜಾ ಅವರ ಯಾವ ಕನಸನ್ನ ನಟ ದ್ರುವ ಸರ್ಜಾ ಅವರು ನನಸು ಮಾಡಿದ್ದಾರೆ ಅನ್ನುವುದನ್ನ ತಿಳಿಯೋಣ ಬನ್ನಿ.

Raja martanda movie

ಹೌದು ಸ್ನೇಹಿತರೆ ಇದೇ ಸಪ್ಟೆಂಬರ್ 2 ರಂದು ಚಿರು ಅಭಿನಯದ ಕೊನೆಯ ಚಿತ್ರ ರಾಜ ಮಾರ್ತಾಂಡ ತೆರೆಗೆ ಬರಲು ಸಿದ್ಧವಾಗಿದೆ. ಇದು ಚಿರು ಸರ್ಜಾ ಅವರ ಕೊನೆಯ ಚಿತ್ರವಾಗಿದ್ದು ಚಿತ್ರದ ಎಲ್ಲಾ ಕೆಲಸಗಳು ಪೂರ್ಣವಾಗಿದ್ದು ಇದೆ ಸೆಪ್ಟೆಂಬರ್ ತಿಂಗಳಲ್ಲಿ ಈ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಹೇಳಬಹುದು. ಎಲ್ಲಾ ಚನ್ನಾಗಿಯೇ ಇದ್ದಿದ್ದರೆ ಈ ಚಿತ್ರ 2019 ಅಥವಾ 2020 ರಲ್ಲೇ ತೆರೆಗೆ ಬರಬೇಕಾಗಿತ್ತು, ಆದರೆ ಚಿರು ಅಗ್ಗಳಿಕೆ ಈ ಚಿತ್ರ ಅರ್ಧಕ್ಕೆ ನಿಂತು ಹೋಗಿತ್ತು. ಇನ್ನು ಈಗ ಚಿರು ನಿಧನದ ಎರಡು ವರ್ಷದ ಬಳಿಕ ಚಿರು ನಟಿಸಿದ್ದ ಕೊನೆಯ ಸಿನಿಮಾ ರಾಜ ಮಾರ್ತಾಂಡ ತೆರೆಗೆ ಬರಲು ಸಿದ್ಧವಾಗಿದೆ.

ಈ ವಿಚಾರವನ್ನು ಸ್ವತಃ ಚಿರು ಸಹೋದರ ಹಾಗೂ ನಟ ಧ್ರುವ್ ಸರ್ಜಾ ಖಚಿತಪಡಿಸಿದ್ದು, ಟ್ವಿಟ್ ಮೂಲಕ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಶೂಟಿಂಗ್ ಮುಗಿದು ಡಬ್ಬಿಂಗ್ ಮಾತ್ರ ಬಾಕಿ ಇದ್ದ ಕಾರಣ ಚಿತ್ರ ತೆರೆಗೆ ಬರದೇ ಉಳಿದಿತ್ತು, ಇನ್ನು ಚಿತ್ರತಂಡಕ್ಕೆ ಅಂದು ಮಾತುಕೊಟ್ಟಿದ್ದ ದ್ರುವ ಸರ್ಜಾ ಅಣ್ಣನ ಚಿತ್ರಕ್ಕೆ ಧ್ವನಿ ಕೊಟ್ಟಿದ್ದಾರೆ. ಇನ್ನು ಚಿತ್ರದ ಕುರಿತು ಮಾತನಾಡಿರುವ ಮೇಘನಾ ಮತ್ತು ಸರ್ಜಾ ಕುಟುಂಬ, ಇದು ಚಿರುವಿನ ಕೊನೆಯ ಚಿತ್ರವಾಗಿದ್ದು ಚಿತ್ರವನ್ನ ಗೆಲ್ಲಿಸಿ ಎಂದು ಮನವಿಯನ್ನ ಮಾಡಿಕೊಂಡಿದ್ದಾರೆ. ಸಪ್ಟೆಂಬರ್ 2 ನೇ ತಾರೀಕು ಸಿನಿಮಾ ರಿಲೀಸ್ ಆಗಲಿದೆ. ಇದು ಚಿರು ಕೊನೆಯ ಸಿನಿಮಾ ಆಗಿರೋದರಿಂದ ಅಭಿಮಾನಿಗಳು ನೋಡಿ ಎಂಜಾಯ್ ಮಾಡಿ ಎಂದು ಚಿತ್ರತಂಡ ಮನವಿ ಮಾಡಿದೆ.

Join Nadunudi News WhatsApp Group

Raja martanda movie

Join Nadunudi News WhatsApp Group