Rajkumar Kidnap: ರಾಜಕುಮಾರ್ ಅವರನ್ನ ವಾಪಾಸ್ ಕಳುಹಿಸುವಾಗ ವೀರಪ್ಪನ್ ಕೊಟ್ಟ ಉಡುಗೊರೆ ಏನು ಗೊತ್ತಾ…?

ಡಾ.ರಾಜಕುಮಾರ್ ಅವರಿಗೆ ವೀರಪ್ಪನ್ ಕೊಟ್ಟ ಉಡುಗೊರೆ ಏನು ಗೊತ್ತಾ...?

Rajkumar Kidnap Story: ಹಲವು ವರ್ಷಗಳ ಹಿಂದೆ ಹಂತಕ ವೀರಪ್ಪನ್ ವರನಟ ಡಾ. ರಾಜಕುಮಾರ್ ಅವರನ್ನು ಅಪಹರಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಈ ಸುದ್ದಿ ಹಳೆಯದಾದರೂ ಕೂಡ ಇಂದಿಗೂ ಈ ಸುದ್ದಿ ಕೇಳಿದರೆ ಅಣ್ಣಾವ್ರ ಅಭಿಮಾನಿಗಳು ವೀರಪನ್ ವಿರುದ್ದ ಆಕ್ರೋಶ ಹೊರಹಾಕುತ್ತಾರೆ. 2000 ಇಸವಿ ಜುಲೈ 30. ಡಾ.ರಾಜ್‌ಕುಮಾರ್ ತಮ್ಮ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರೊಂದಿಗೆ ತಮ್ಮ ಹುಟ್ಟೂರಾದ ಗಾಜನೂರಿಗೆ ತೆರಳಿದರು.

ಈ ದಿನ ರಾತ್ರಿ ಅಣ್ಣಾವ್ರು ಊಟ ಮುಗಿಸಿ ಕುಳಿತಿದ್ದರು. ಈ ವೇಳೆ ವೀರಪ್ಪನ್ ತನ್ನ ಸಹಚರರೊಂದಿಗೆ ಬಂದು ರಾಜಕುಮಾರ್ ಅವರನ್ನು ಅಪಹರಣ ಮಾಡಿದ್ದ. ಸುಮಾರು 108 ದಿನಗಳ ಕಾಲ ಅಣ್ಣಾವ್ರು ಕಾಡುಗಲ್ಲ ವೀರಪ್ಪನ್ ಜೊತೆ ಕಾಡಿನಲ್ಲೇ ಇರಬೇಕಾಯಿತು. ವೀರಪ್ಪನ್ ಜೊತೆ ರಾಜ್ ಕುಮಾರ್ ಅವರು ಇದ್ದ ಸಮಯದಲ್ಲಿ ಇಡೀ ರಾಜ್ಯವೇ ಆಕ್ರೋಶ ಹೊರಹಾಕಿತ್ತು. ಸಾಕಷ್ಟು ಪ್ರತಿಭಾತನೇ ನಡೆದಿದ್ದವು.

ಮೂರು ತಿಂಗಳಿಗೂ ಹೆಚ್ಚು ದಿನ ಅಣ್ಣಾವ್ರು ವೀರಪ್ಪನ್ ಬಂದನದಲ್ಲಿದ್ದರು. ಆದರೆ ರಾಜಕುಮಾರ್ ಅವರನ್ನು ಬಿಡುಗಡೆ ಮಾಡುವಾಗ ವೀರಪ್ಪನ್ ಅವರಿಗೆ ಉಡುಗೊರೆ ನೀಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಅಷ್ಟಕ್ಕೂ ವೀರಪ್ಪನ್ ರಾಜಕುಮಾರ್ ಅವರಿಗೆ ನೀಡಿದ ಉಡುಗೊರೆ ಏನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Dr Rajkumar And Veerappan
Image Credit: Zeenews

ರಾಜಕುಮಾರ್ ಅವರನ್ನ ವಾಪಾಸ್ ಕಳುಹಿಸುವಾಗ ವೀರಪ್ಪನ್ ಕೊಟ್ಟ ಉಡುಗೊರೆ ಏನು ಗೊತ್ತಾ…?
ಅಣ್ಣಾವ್ರಿಗೆ ಹುಟ್ಟೂರಿನ ಮೇಲೆ ಅಪಾರ ಪ್ರೀತಿ. ಹೀಗಾಗಿ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಸಂಬಂಧಿಕರ ಜತೆ ಗಾಜನೂರಿನ ತೋಟದ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸುಳಿವು ಪಡೆದ ವೀರಪ್ಪನ್ ರಾತ್ರಿಯೇ ಅಪಹರಣ ಮಾಡಿ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದ. ಅವರ ಜೊತೆ ಅಳಿಯ ಎಸ್.ಎ.ಗೋವಿಂದರಾಜು, ಸಹ ನಿರ್ದೇಶಕ ನಾಗಪ್ಪ ಮಾರಡಗಿ, ಸಂಬಂಧಿ ನಾಗೇಶ್ ಇದ್ದರು. ಹಲವಾರು ಪ್ರಯತ್ನಗಳ ನಂತರ ವೀರಪ್ಪನ್ ಜೊತೆಗಿನ ಸಂಧಾನ ಯಶಸ್ವಿಯಾಗಿದೆ. ಸುಮಾರು 108 ದಿನಗಳ ನಂತರ ವೀರಪ್ಪನ್ ರಾಜ್ ಕುಮಾರ್ ಬಿಡುಗಡೆಗೆ ಸಿದ್ಧವಾಗಿದ್ದರು. ಅಣ್ಣಾವ್ರು ನವೆಂಬರ್ 15, 2000 ರಂದು ಬಿಡುಗಡೆಯಾಯಿತು.

ವೀರಪ್ಪನ್ ಸುಮಾರು 108 ದಿನಗಳ ಕಾಲ ಅಣ್ಣಾವ್ರರನ್ನು ಚೆನ್ನಾಗಿ ನೋಡಿಕೊಂಡಿದ್ದರು. ಅಣ್ಣಾವ್ರನ್ನು ಯಾವಾಗಲೂ ದೊಡ್ಡವರೆಂದು ಕರೆಯುತ್ತಿದ್ದರು. ಅಣ್ಣಾವ್ರು ತಮ್ಮ ದೈನಂದಿನ ಅಗತ್ಯಗಳಿಗೆ ವೀರಪ್ಪನ್ ಸ್ಪಂದಿಸಿರುವುದಾಗಿ ಬಿಡುಗಡೆಯ ನಂತರ ಹೇಳಿಕೊಂಡಿದ್ದರು. ಅಣ್ಣವ್ರ ಬಿಡುಗಡೆಯ ವೇಳೆ ವೀರಪ್ಪನ್ ರಾಜ್ ಕುಮಾರ್ ಗೆ ಉಡುಗೊರೆ ನೀಡಿದ್ದರು.

Join Nadunudi News WhatsApp Group

ಆ ಉಡುಗೊರೆ ಏನು ಅನ್ನೋ ಬಗ್ಗೆ ಸರಿಯಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಬಿಡುಗಡೆಯಾದ ದಿನ ಅನ್ನವರಿಗೆ ವೀರಪ್ಪನ್ ಬಿಳಿ ಪಂಚೆ ಮತ್ತು ಶಾಲು ನೀಡಿ ಗೌರವಿಸಿದ್ದ. ಹಾಗೆಯೆ ವೀರಪ್ಪನ್ ಸಹಚರ ಸೇತುಕುಳಿ ಆನೆಯ ದಂತದಿಂದ ಮಾಡಿದ ಶಿವಲಿಂಗವನ್ನು ಉಡುಗೊರೆಯಾಗಿ ನೀಡಿದ್ದನ್ನು ಎಂದು ನಾಗೇಶ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

Rajkumar Kidnap Story
Image Credit: Deccanherald

Join Nadunudi News WhatsApp Group