Raksha QR Code: ಇನ್ಮೇಲೆ ಅಪಘಾತವಾದರೆ ಹೆದರಬೇಕಿಲ್ಲ, ಆರಂಭವಾಯ್ತು ಹೊಸ ಸೇವೆ

ಈ ವಿಧಾನದ ಮೂಲಕ ರಸ್ತೆಯಲ್ಲಿ ಅನಾಮಿಕರು ಅಪಘಾತ ಮಾಡಿಕೊಂಡರೆ ಅವರ ಕುಟುಂಬಕ್ಕೆ ಸುಲಭವಾಗಿ ಮಾಹಿತಿ ತಿಳಿಸಬಹುದಾಗಿದೆ.

Raksha QR Code For Vehicle Accident: ದೇಶದಲ್ಲಿ ರಸ್ತೆ ವಾಹನ ಅಪಘಾತಗಳು ಹೆಚ್ಚುತ್ತಿವೆ. ವಾಹನ ಸವಾರರು ಎಷ್ಟೇ ಕಾಳಜಿ ವಹಿಸಿದರು ಕೊಡ ಒಂದು ಸಣ್ಣಾ ತಪ್ಪಿನಿಂದ ದೊಡ್ಡ ಅನಾಹುತ ಸಂಭವಿಸುತ್ತದೆ.

ರಸ್ತೆ ಅಪಘಾತದಲ್ಲಿ ಸಾಕಷ್ಟು ವಾಹನ ಸವಾರರು ಮರಣ ಹೊಂದಿರುವ ಪ್ರಕರಣಗಳಿವೆ. ಇನ್ನು ರಸ್ತೆ ವಾಹನ ಅಪಘಾತವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಾಕಷ್ಟು ನಿಯಮವನ್ನು ಜಾರಿಗೊಳಿಸಿದೆ. ರಸ್ತೆಗಲ್ಲಿ ನಿಧಾನವಾಗಿನ ವಾಹನಗಳನ್ನು ಚಲಾಯಿಸಲು ಸೂಚನೆ ನೀಡಲಾಗುತ್ತದೆ.

Raksha QR Code For Vehicle Accident
Image Credit: Deccanherald

ದೇಶದಲ್ಲಿ ಹೆಚ್ಚುತ್ತಿದೆ ರಸ್ತೆ ಅಪಘಾತದ ಪ್ರಕರಣ
ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವಾಗ ಎಷ್ಟೇ ಕಾಳಜಿ ವಹಿಸಿದರು ಅದು ಕಡಿಮೆಯೇ. ರಸ್ತೆ ಅಪಘಾತವು ಆಕಸ್ಮಿಕವಾಗಿ ಸಂಭವಿಸುತ್ತದೆ. ಇನ್ನು ವಾಹನ ಅಪಘಾತವಾದ ಸಮಯದಲ್ಲಿ ಸಾಕಷ್ಟು ಜನರು ಸೇರಿಕೊಳ್ಳುವುದು ಸಾಮಾನ್ಯ. ಆದರೆ ಅಲ್ಲಿ ಇದ್ದ ಜನರು ಅಪಘಾತ ಆದವರಿಗೆ ಸಹಾಯ ಮಾಡುವವರಿಗಿಂತ ನೋಡುವವರೇ ಹೆಚ್ಚಾಗಿರುತ್ತಾರೆ. ರಸ್ತೆ ಅಪಘಾತವಾದಾಗ ಅವರಿಗೆ ಸಹಾಯ ಮಾಡಲು ಕೆಲವರು ಹಿಂಜರಿಯುತ್ತಾರೆ. ಇನ್ನು ಕೆಲವರು ಸಹಾಯಮಾಡಲು ಮುಂದಾಗುತ್ತಾರೆ.

ಅಪಘಾತವಾದರೆ ಮನೆಯವರಿಗೆ ಮಾಹಿತಿ ತಿಳಿಸಲು ಸುಲಭ ವಿಧಾನ
ಸಾಮಾನ್ಯವಾಗಿ ಯಾವುದೇ ರಸ್ತೆ ಅಪಘಾತವಾದಾಗ ಜನರು ಅಪಘಾತಕ್ಕೊಳಗಾದವರ ಮನೆಯವರಿಗೆ ವಿಷಯವನ್ನು ತಲುಪಿಸಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಅವರ ಬಳಿ ಮನೆಯವರ ಬಗ್ಗೆ ಮಾಹಿತಿ ಕೇಳುತ್ತಾರೆ. ಆದರೆ ಅಪಘಾತವಾದ ಅವರಿಗೆ ಯಾವುದೇ ರೀತಿಯ ವಿವರವನ್ನು ನೀಡಲು ಆಗುವುದಿಲ್ಲ. ಹೀಗಾಗಿ ರಸ್ತೆ ಅಪಘಾತ ಸಂಭವಿಸಿದ ವೇಳೆ ಕುಟುಂಬದವರನ್ನು ಸಂಪರ್ಕಿಸಲು ಸುಲಭ ವಿಧಾನವನ್ನು ಕಂಡು ಹಿಡಿಯಲಾಗಿದೆ. ಈ ವಿಧಾನದ ಮೂಲಕ ರಸ್ತೆಯಲ್ಲಿ ಅನಾಮಿಕರು ಅಪಘಾತ ಮಾಡಿಕೊಂಡರೆ ಅವರ ಕುಟುಂಬಕ್ಕೆ ಸುಲಭವಾಗಿ ಮಾಹಿತಿ ತಿಳಿಸಬಹುದಾಗಿದೆ.

QR codes for vehicles to alert family, police and hospitals to aid accident
Image Credit: Asianetnews

ವಾಹನಗಳಿಗೆ CR Code ಅಳವಡಿಕೆ
ಇದೀಗ ಹೈವೇ ಡಿಲೈಟ್ ಕಂಪನಿ Raksha QR Code ಅನ್ನು ಪರಿಚಯಿಸಲು ಮುಂದಾಗಿದೆ. ಅಪಘಾತಕ್ಕೆ ಒಳಗಾದವರ ಸಹಾಯಕ್ಕಾಗಿ QR Code ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ಸ್ಥಳೀಯರು ಅಪಘಾತಕ್ಕೆ ಒಳಗಾದವರ ವಾಹನಕ್ಕೆ ಅಂಟಿಸಿರುವ ಈ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ತಿಳಿಸಬಹುದು.

Join Nadunudi News WhatsApp Group

Raksha QR Code ಬಗ್ಗೆ ಮಾಹಿತಿ
ಕರೆ ಮಾಡುವ ಮತ್ತು ಸ್ವೀಕರಿಸುವಾ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಹೈವೇ ಡಿಲೈಟ್ ಕಂಪನಿ ಅಪಘಾತದ ಸ್ಥಳದ ಮಾಹಿತಿ ಪಡೆದು ಸ್ಥಳೀಯ ಹಾಸ್ಪಿಟಲ್ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತದೆ. Raksha QR Code ಪಡೆಯಲು ವಾಹನ ಮಾಲೀಕರು ವಾರ್ಷಿಕ ರೂ. 365 ಶುಲ್ಕ ಪಾವತಿಸಾಬೇಕಾಗುತ್ತದೆ. ರಕ್ತದ ಗುಂಪು, ವಾಹನದ ವಿಮೆ, ಆರೋಗ್ಯ ವಿಮೆ ಹಾಗು ಕುಟುಂಬದ ಮಾಹಿತಿ ಈ ಸ್ಕ್ಯಾನರ್ ನಲ್ಲಿ ಸೇರಿಸಬಹುದಾಗಿದೆ.

Join Nadunudi News WhatsApp Group