Diamond Crown: ಅಯೋಧ್ಯಾ ರಾಮನಿಗೆ ಹಾಕಲಾದ ವಜ್ರದ ಕಿರೀಟದ ಬೆಲೆ ಎಷ್ಟು ಗೊತ್ತಾ…? ದುಬಾರಿ ಕಿರೀಟ

ಅಯೋಧ್ಯಾ ರಾಮನಿಗೆ ಹಾಕಲಾದ ವಜ್ರದ ಕಿರೀಟದ ಬೆಲೆ ಎಷ್ಟು..? ಎನ್ನುವ ಬಗ್ಗೆ ಮಾಹಿತಿ

Ram Lalla Diamond Crown: ಜನವರಿ 22 ರಂದು ಲೋಕಾರ್ಪಣೆಗೊಂಡ ಶ್ರೀರಾಮ ಲಲ್ಲಾ (Ram Lalla) ಪ್ರಾಣಪ್ರತಿಷ್ಠಾಪನೆಗೆ ಇಡೀ ದೇಶವೇ ಸಾಕ್ಷಿಯಾಗಿದೆ. ಕೋಟ್ಯಾಂತರ ಭಕ್ತರು ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡಿದ್ದಾರೆ. ಇನ್ನು ಅಯೋಧ್ಯ ಶ್ರೀರಾಮನಿಗಾಗಿ ಸಾಕಷ್ಟು ಕಾಣಿಕೆಗಳು ಉಡುಗೊರೆಯ ರೂಪದಲ್ಲಿ ಬಂದಿದೆ.

ದೇಶದ ಪ್ರಮುಖ ವ್ಯಕ್ತಿಗಳು, ರಾಜಕೀಯ ನಾಯಕರು, ಸಿನಿಮಾ ತಾರೆಯರು ಶ್ರೀರಾಮನಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ. ಇನ್ನು ವಜ್ರದ ವ್ಯಾಪಾರಿಯೊಬ್ಬರು ಶ್ರೀರಾಮನಿಗೆ ವಜ್ರದ ಕಿರೀಟವನ್ನು ಹಾಕಿರುವ ಬಗ್ಗೆ ಮಾಹಿತಿ ಲಭಿಸಿದೆ. ಅಯೋಧ್ಯಾ ರಾಮನಿಗೆ ಹಾಕಲಾದ ವಜ್ರದ ಕಿರೀಟದ ಬೆಲೆ ಎಷ್ಟು..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Ram Lalla Diamond Crown
Image Credit: tv9bangla

ಅಯೋಧ್ಯಾ ರಾಮನಿಗೆ ಹಾಕಲಾದ ವಜ್ರದ ಕಿರೀಟದ ಬೆಲೆ ಎಷ್ಟು ಗೊತ್ತಾ..?
ಗುಜರಾತ್‌ ನ ಸೂರತ್ ಮೂಲದ ವಜ್ರದ ವ್ಯಾಪಾರಿಯಿಂದ 11 ಕೋಟಿ ರೂ. ಮೌಲ್ಯದ ಕಿರೀಟ ರಾಮಲಲ್ಲಾ ಮೂರ್ತಿಗೆ ದೇಣಿಗೆಯಾಗಿ ಬಂದಿದೆ. ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿ ಮಾಲೀಕ ಮುಖೇಶ್ ಪಟೇಲ್ ರಾಮನಿಗೆ ದುಬಾರಿ ಕಿರೀಟವನ್ನು ನೀಡಿದ್ದಾರೆ. ಸೂರತ್‌ ನ ವಜ್ರದ ವ್ಯಾಪಾರಿ ಮುಖೇಶ್ ಅವರು ಭಗವಾನ್ ಶ್ರೀರಾಮನಿಗೆ 6 ಕೆಜಿ ತೂಕದ ಚಿನ್ನ ಮತ್ತು ವಜ್ರದಿಂದ ಮಾಡಿದ ಕಿರೀಟವನ್ನು ದಾನ ಮಾಡಿದ್ದಾರೆ.

ವಜ್ರದ ಕಿರೀಟದ ಬಗ್ಗೆ ನಿಮಗೆಷ್ಟು ಗೊತ್ತು..?
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತ ಮುಖೇಶ್ ಪಟೇಲ್ ಅವರು ಕುಟುಂಬ ಸಮೇತ ಅಯೋಧ್ಯೆಗೆ ಆಗಮಿಸಿದ್ದರು. ನಂತರ, ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಗಳಿಗೆ ಸೂಕ್ಷ್ಮವಾಗಿ ರಚಿಸಲಾದ ಕಿರೀಟವನ್ನು ಖುದ್ದಾಗಿ ಹಸ್ತಾಂತರಿಸಿದರು. ಸಾಕಷ್ಟು ಸಂಶೋಧನೆಯ ನಂತರ, ಮುಖೇಶ್ ಚಿನ್ನ ಮತ್ತು ವಜ್ರದ ಕಿರೀಟವನ್ನು ನೀಡಲು ನಿರ್ಧರಿಸಿದರು.

Ayodhya Ram Mandir Latest News Updates
Image Credit: Siasat

ವಜ್ರದ ಕಿರೀಟದ ಒಟ್ಟು ತೂಕ ಆರು ಕೆ.ಜಿ. ಇದೆ. ಇದು ವಿವಿಧ ಗಾತ್ರದ ವಜ್ರಗಳು, ಮಾಣಿಕ್ಯಗಳು, ಮುತ್ತುಗಳು ಮತ್ತು ನೀಲಮಣಿಗಳ ಜೊತೆಗೆ ನಾಲ್ಕು ಕೆಜಿ ಚಿನ್ನವನ್ನು ಒಳಗೊಂಡಿದೆ. ಕಿರೀಟದ ಒಟ್ಟು ಮೌಲ್ಯ ಅಂದಾಜು 11 ಕೋಟಿ ರೂಪಾಯಿ ಆಗಿದೆ. ಇಷ್ಟು ದುಬಾರಿ ಆಭರಣವು ಇದೀಗ ಅಯೋದ್ಯೆಯ ಬಾಲ ರಾಮನ ಮೂರ್ತಿಯಲ್ಲಿ ಕಂಗೊಳಿಸುತ್ತಿದೆ. ಚಿನ್ನಾಭರಗಳಿಂದ ಕಂಗೊಳಿಸುತ್ತಿರುವ ರಾಮನ ಮೂರ್ತಿಯನ್ನು ಕಂಡು ಜನರು ಪುನೀತರಾಗುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group