Ram Lalla: ನಗುತ್ತ ತಲೆ ಅಲ್ಲಾಡಿಸಿದ ಬಾಲರಾಮ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ರಾಮನ ವಿಶೇಷ ವಿಡಿಯೋ

Ram Lalla Viral Video: ಹಿಂದೂಗಳ 500 ವರ್ಷದ ಕನಸು ಜನವರಿ 22 ಸೋಮವಾರದಂದು ನನಸಾಗಿದೆ. ಜನವರಿ 22 ರಂದು ಇಡೀ ದೇಶವೇ ಜೈ ಶ್ರೀರಾಮ್ ಘೋಷಣೆಯಲ್ಲಿ ಮುಳುಗಿಹೋಗಿತ್ತು. ಎಲ್ಲರ ಬಾಯಲ್ಲೂ ರಾಮ ನಾಮ ಕೇಳಿಬರುತ್ತಿದೆ.

ಉತ್ತರ ಪ್ರದೇಶದಲ್ಲಿ ನಿರ್ಮಾಣಗೊಂಡ ರಾಮ ಮಂದಿರ ಕೋಟ್ಯಾಂತರ ಭಕ್ತರಿಗೆ ಹೆಚ್ಚಿನ ಸಂತೋಷವನ್ನು ನೀಡಿದೆ. ಬಹಳ ಅದ್ದೂರಿಯಾಗಿ ರಾಮ ಮಂದಿರ ಉದ್ಘಾಟನೆ ಮತ್ತು ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಿದೆ. ಇದೀಗ ದೇಶದ ಜನರು ಬಾಲರಾಮನ ದರ್ಶನವನ್ನು ಪಡೆದಿದ್ದಾರೆ.

Ram Lalla Viral Video
Image Credit: Jagran

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿಡಿಯೋ
ಇನ್ನು ಅಯೋಧ್ಯ ರಾಮ ಮಂದಿರವನ್ನು ನೇರವಾಗಿ ನೋಡಿದ್ದಕ್ಕಿಂತಾ ಮೊಬೈಲ್, ಟಿವಿಯಲ್ಲೇ ನೋಡಿದರವ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಸೋಶಿಯಲ್ ಮಿಡಿಯದಲ್ಲಂತೂ ಶ್ರೀರಾಮನ ಅಯೋದ್ಯೆ ಬಾರಿ ಸದ್ದು ಮಾಡಿತ್ತು. ಕಳೆದ ಎರಡು ವಾರಗಳಲ್ಲಿ ಅಯೋದ್ಯೆಯ ಫೋಟೋ ಎಲ್ಲೆಡೆ ಹರಿದಾಡಿದರೆ ರಾಮನ ಮೂರ್ತಿ ರಿವೀಲ್ ಆದ ಬಳಿಕ ಎಲ್ಲೆಲ್ಲೂ ಶ್ರೀರಾಮನೇ ಕಾಣಿಸಿಕೊಂಡಿದ್ದಾನೆ.

ಸೋಶಿಯಲ್ ಮೀಡಿಯಾದಲ್ಲಿ ಸಂಪೂರ್ಣ ಬಾರಿ ರಾಮನ ಪೋಟಿಗಳೇ ಹರಿದಾಡಿದ್ದವು. ಎಲ್ಲರು ರಾಮನ ಮೂರ್ತಿಯನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದ ವೇಳೆ ಅಚ್ಚರಿಯಂಬಂತೆ ಸಾಮಾಜಿಕ ಜಾಲತಾಣದಲ್ಲಿ ರಾಮನ ವಿಶೇಷ ವಿಡಿಯೋ ವೈರಲ್ ಆಗಿದೆ. ರಾಮನ ಈ ವಿಡಿಯೋವನ್ನು ನೋಡಿ ನೋಡುಗರು ಬಹಳ ಅಚ್ಚರಿ ಪಟ್ಟಿದ್ದಾರೆ. ಅಷ್ಟಕ್ಕೂ ವೈರಲ್ ಆದ ವಿಡಿಯೋದಲ್ಲಿ ಏನಿದೆ..? ಎನ್ನುವ ಬಗ್ಗೆ ತಿಳಿಯೋಣ.

Join Nadunudi News WhatsApp Group

ನಗುತ್ತ ತಲೆ ಅಲ್ಲಾಡಿಸಿದ ಬಾಲರಾಮ
ರಾಮಲಲ್ಲಾ ಮೂರ್ತಿಯು ಮುಗುಳುನಗುತ್ತಾ ತನ್ನ ತಲೆಯನ್ನು ತಿರುಗಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. AI ನಿಂದ ಸೃಷ್ಟಿಸಲಾದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ. ಬಾಲರಾಮನ ಮೂರ್ತಿಯೇ ತಲೆ ಅಲ್ಲಾಡಿಸಿ ನಗುತ್ತಿರುವಂತೆ ಕಾಣುತ್ತಿರುವುದು ನಿಜಕ್ಕೂ ನೋಡುಗರನ್ನು ಅಚ್ಚರಿಗೊಳಿಸಿದೆ. ಸಿನಿಲ್ ಚೌದರಿ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಟ್ರೆಂಡ್ ನಲ್ಲಿದೆ ಎನ್ನಬಹುದು.

Join Nadunudi News WhatsApp Group