Ram Mandir: ರಾಮ್ ಮಂದಿರದಿಂದ UP ಸರ್ಕಾರಕ್ಕೆ ಪ್ರತಿವರ್ಷ ಬರುವ ಆದಾಯ ಎಷ್ಟು ಗೊತ್ತಾ…? ಕೋಟಿಗಟ್ಟಲೆ ಆದಾಯ

ರಾಮ ಮಂದಿರ ನಿರ್ಮಾಣದಿಂದ ಉತ್ತರ ಪ್ರದೇಶ ಸರ್ಕಾರದ ಆದಾಯ ಇನ್ನಷ್ಟು ಹೆಚ್ಚಳವಾಗಲಿದೆ

Incomes From Ram Mandir: ದೇಶದಲ್ಲಿ ನಿನ್ನೆಯಷ್ಟೇ ಅಯೋಧ್ಯ ರಾಮ ಮಂದಿರ (Ram Mandir) ನಿರ್ಮಾಣವಾಗಿದೆ. ಉತ್ತರ ಪ್ರದೇಶದದಲ್ಲಿ ನಿರ್ಮಾಣಗೊಂಡಿರುವ ರಾಮ ಮಂದಿರ ಕೋಟ್ಯಾಂತರ ಹಿಂದುಗಳಿಗೆ ಖುಷಿ ನೀಡಿದೆ. ಹಲವು ವರ್ಷಗಳ ಕನಸು ನೆರವೇರಿದೆ.

ಇನ್ನು ಉತ್ತರ ಪ್ರದೇಶದಲ್ಲಿ ಅಯೋಧ್ಯ ರಾಮ ಮಂದಿರ ನಿರ್ಮಾಣವಾದ ಕಾರಣ ಉತ್ತರ ಪ್ರದೇಶವು ಇನ್ನುಮುಂದೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲಿದೆ. ಉತ್ತರ ಪ್ರದೇಶದ ಆರ್ಥಿಕತೆಗೆ ಆಯೋಧ್ಯ ರಾಮ ಮಂದಿರ ಇನ್ನುಮುಂದೆ ಕೇಂದ್ರವಾಗಲಿದೆ. ರಾಮ ಮಂದಿರ ನಿರ್ಮಾಣದಿಂದ ಉತ್ತರ ಪ್ರದೇಶ ಸರ್ಕಾರದ ಆದಾಯ ಇನ್ನಷ್ಟು ಹೆಚ್ಚಳವಾಗಲಿದೆ.

Construction of Ram Mandir will increase revenue of Uttar Pradesh government
Image Credit: Kannadadunia

UP ಸರ್ಕಾರದ ಬೊಕ್ಕಸ ತುಂಬಿಸಲಿದೆ ರಾಮ ಮಂದಿರ
ಅಯೋಧ್ಯ ಲೋಕಾರ್ಪಣೆಯ ಸಮಯದಲ್ಲಿ ವ್ಯಾಪಾರಸ್ಥರು ಹೆಚ್ಚಿನ ಆದಾಯವನ್ನು ಗಳಿಸಿದ್ದಾರೆ. ಧ್ವಜಗಳು, ಹೂವುಗಳು ಮತ್ತು ಹಣ್ಣುಗಳು, ಪೂಜಾ ಸಾಮಗ್ರಿಗಳು, ಸಿಹಿತಿಂಡಿಗಳು ಮತ್ತು ದೀಪಗಳನ್ನು ಭಕ್ತರು ವ್ಯಾಪಕವಾಗಿ ಖರೀದಿಸುತ್ತಾರೆ. ಟೆಂಟ್‌ ಗಳು ಮತ್ತು ಸಿಹಿತಿಂಡಿಗಳ ಬುಕಿಂಗ್‌ ಗಳು ಸಹ ಲೆಕ್ಕವಿಲ್ಲದಷ್ಟು ಆಗಿವೆ. ಟ್ರೇಡರ್ಸ್ ಆರ್ಗನೈಸೇಶನ್ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಪ್ರಕಾರ, ದೇಶಾದ್ಯಂತ ವ್ಯಾಪಾರಿಗಳು 1 ಲಕ್ಷ ಕೋಟಿ ರೂ. ಹೆಚ್ಚಿನ ವಹಿವಾಟನ್ನು ನಡೆಸಿದ್ದಾರೆ. ಅಯೋಧ್ಯ ರಾಮ ಮಂದಿರ ಲೋಕಾರ್ಪಣೆಯ ಕಾರಣ ಪೂಜಾ ಸಾಮಗ್ರಿಗಳ ಬೇಡಿಕೆ ವ್ಯಾಪಕವಾಗಿತ್ತು.

ರಾಮಮಂದಿರದ ಫೋಟೋ ಮುದ್ರಿಸಿದ ಕುರ್ತಾ, ಕ್ಯಾಪ್, ಟೀ ಶರ್ಟ್ ಮತ್ತು ಲುಂಗಿಗಳ ಖರೀದಿ ಜೋರಾಗಿ ನಡೆದಿದೆ. ಹಲವು ವಾದ್ಯಗಳ ಬುಕಿಂಗ್ ಕೂಡ ಹೆಚ್ಚು ನಡೆದಿರುವುದು ವಿಶೇಷ. ರಾಮ್ ಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ 20 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಾಮಮಂದಿರ ತೆರೆಯುವುದರೊಂದಿಗೆ ಅಯೋಧ್ಯೆಯ ವ್ಯಾಪಾರವು ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೊಂದಿಗೆ ವೇಗವಾಗಿ ಹೆಚ್ಚಾಗುತ್ತದೆ. ರಾಮಮಂದಿರ ನಿರ್ಮಾಣದಿಂದ ಅಯೋಧ್ಯೆಯ ಆರ್ಥಿಕತೆ ಮಾತ್ರವಲ್ಲದೆ ಉತ್ತರ ಪ್ರದೇಶ ಸರ್ಕಾರದ ಬೊಕ್ಕಸವೂ ತುಂಬಲಿದೆ.

Ayodhya Ram Mandir Latest News Update
Image Credit: Hindustantimes

ಪ್ರತಿ ವರ್ಷ UP ಸರ್ಕಾರದ ಖಜಾನೆಗೆ ಬರಲಿದೆ 25 ಸಾವಿರ ಕೋಟಿ
ಅಯೋಧ್ಯೆಯಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮದ ಹೆಚ್ಚಳದಿಂದಾಗಿ ಯುಪಿ ಸರ್ಕಾರದ ಆದಾಯವು ಹೆಚ್ಚಾಗುತ್ತದೆ. 2025 ರ ಹಣಕಾಸು ವರ್ಷದಲ್ಲಿ ಉತ್ತರ ಪ್ರದೇಶ ಸರ್ಕಾರವು 20,000 ರಿಂದ 25,000 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ.

Join Nadunudi News WhatsApp Group

ಯುಪಿ ಸರ್ಕಾರದ ಬಜೆಟ್ ಪ್ರಕಾರ, 2024 ರ ಆರ್ಥಿಕ ವರ್ಷದಲ್ಲಿ ಸರ್ಕಾರದ ತೆರಿಗೆ ಆದಾಯವು 2.5 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಬಹುದು. ಉತ್ತರ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು 2022 ಕ್ಕೆ ಹೋಲಿಸಿದರೆ 2024 ರಲ್ಲಿ ದ್ವಿಗುಣಗೊಳ್ಳಬಹುದು. ಉತ್ತರ ಪ್ರದೇಶದಲ್ಲಿ ದೇಶೀಯ ಮತ್ತು ವಿದೇಶಿ ಪ್ರವಾಸಿಗರು 10,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಂದ ಉತ್ತರ ಪ್ರದೇಶ ಸರ್ಕಾರ ಸಾಕಷ್ಟು ಆದಾಯವನ್ನು ಗಳಿಸಿದೆ.

Join Nadunudi News WhatsApp Group