Ram Mandir: ರಾಮನ ದರ್ಶನ ಎಲ್ಲಾ ಭಕ್ತರಿಗೆ ಹೊಸ ನಿಯಮ, ಈ ದಾಖಲೆ ಜೊತೆಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ

ಶ್ರೀರಾಮನ ದರ್ಶನ ಪಡೆಯಲುಈ ಆಮಂತ್ರಣ ಪತ್ರಿಕೆ ಕಡ್ಡಾಯ

Ram Mandir Invitation: ಸದ್ಯ ದೇಶದೆಲ್ಲೆಡೆ ಜನವರಿ 22 ಸೋಮವಾರದಂದು ನೆರವೇರಲಿರುವ ರಾಮ ಮಂದಿರ ಉದ್ಘಾಟನೆಗಾಗಿ ಕಾತುರತೆ ಹೆಚ್ಚಾಗಿದೆ. ಕೋಟ್ಯಾಂತರ ಭಕ್ತರು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಸಿಕೊಳ್ಳಲು ದಿನಗಳ ಎಣಿಕೆ ಮಾಡುತ್ತಿದ್ದಾರೆ ಎನ್ನಬಹುದು.

ಈಗಾಗಲೇ ರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ನರೇಂದ್ರ ಮೋದಿ ಅವರಿಂದ ಹಿಡಿದು ಸಾಕಷ್ಟು ಪ್ರಮುಖ ಗಣ್ಯರಿಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಇದೀಗ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಹೋಗಲು ಏನು ಮುಖ್ಯ ಎನ್ನುವ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

Ram Mandir Invitation Card
Image Credit: Indianexpress

ಈ ಆಮಂತ್ರಣ ಪತ್ರಿಕೆಯ ಮೂಲಕ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಪ್ರವೇಶ ಸಾಧ್ಯ
ಜನವರಿ 22 ರಂದು ನಡೆಯಲಿರುವ ರಾಮ್ ಲಲ್ಲ ಸರ್ಕಾರದ ಜೀವನ ಪ್ರತಿಷ್ಠಾಪನಾ ಕಾರ್ಯಕ್ರಮದ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಮಾಹಿತಿಯನ್ನು ನೀಡಿದೆ. ಪ್ರಾಣ ಪ್ರತಿಷ್ಠಾ ಉತ್ಸವಕ್ಕೆ ಆಹ್ವಾನಿತರ ಪ್ರವೇಶಕ್ಕೆ ಸಂಬಂದಿಸಿದ ಮಾಹಿತಿಯಾಗಿದೆ.

ಶ್ರೀ ರಾಮಲಾಲಾ ಸರ್ಕಾರ್ ಅವರ ಪ್ರಾಣ ಪ್ರತಿಷ್ಠಾ ಉತ್ಸವಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರವೇಶಿಕದ ಮೂಲಕ ಮಾತ್ರ ಪ್ರವೇಶ ಸಾಧ್ಯ. ಕೇವಲ ಆಮಂತ್ರಣ ಪತ್ರವು ಸಂದರ್ಶಕರಿಗೆ ಪ್ರವೇಶವನ್ನು ಖಾತರಿಪಡಿಸುವುದಿಲ್ಲ. ಪ್ರವೇಶ ದ್ವಾರದಲ್ಲಿ ಕ್ಯೂಆರ್ ಕೋಡ್ ಅನ್ನು ಹೋಲಿಕೆ ಮಾಡಿದ ನಂತರವೇ ಆವರಣಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತದೆ.

Join Nadunudi News WhatsApp Group

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೂಡ ಪ್ರೈಮರ್‌ ನ ಕರಡನ್ನು ಲಗತ್ತಿಸಿದೆ. ರಾಜಕೀಯ ಕ್ರೀಡೆ, ಸಿನಿಮಾ, ಉದ್ಯಮ ಸೇರಿದಂತೆ ಪ್ರತಿ ಕ್ಷೇತ್ರದ ಪ್ರಮುಖ ವ್ಯಕ್ತಿಗಳಿಗೆ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ. ಶ್ರೀರಾಮನ ದರ್ಶನ ಪಡೆಯಲು ಆಮಂತ್ರಣ ಪತ್ರಿಕೆ ಕಡ್ಡಾಯ ಎನ್ನುವುದು ತಿಳಿದಿರುವುದು ಅಗತ್ಯ.

Join Nadunudi News WhatsApp Group