Ram Mandir: ಅಯೋದ್ಯೆಯಲ್ಲಿ ಮೊದಲ ದಿನ ರಾಮನ ದರ್ಶನ ಮಾಡಿದ್ದು ಎಷ್ಟು ಜನ ಗೊತ್ತಾ…? ಇದು ರಾಮನ ಮಹಿಮೆ

ದಾಖಲೆಯ ಮಟ್ಟದಲ್ಲಿ ಬಾಲರಾಮನ ದರ್ಶನ ಪಡೆದು ಹೊಸ ದಾಖಲೆ ಸೃಷ್ಟಿ

Ram Mandir Latest Update: ಸದ್ಯ ದೇಶದೆಲ್ಲೆಡೆ ರಾಮ ನಾಮ ಘೋಷಣೆ ಕೇಳಿಬರುತ್ತಿದೆ. ಎಲ್ಲೆಡೆ ರಾಮನ ಫೋಟೋಗಳನ್ನು ಹಾಕುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ತೋರಿಕೊಳ್ಳುತ್ತಿದ್ದಾರೆ. ಹಲವು ವರ್ಷಗಳ ಹಿಂದೂಗಳ ಕನಸು ಈಗ ಈಡೇರಿದೆ ಎನ್ನಬಹುದು. ರಾಮನ ಪ್ರತಿಷ್ಠಾಪನೆ ಮುಗಿದ ಬಳಿಕ ಶ್ರೀ ರಾಮನನ್ನು ನೋಡಲು ಕೋಟ್ಯಾಂತರ ಮಂದಿ ಭಕ್ತರು ಕಾಯುತ್ತಿದ್ದಾರೆ.

Ram Mandir Latest Updates
Image Credit: India Today

ಅಯೋಧ್ಯ ರಾಮನ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ 
ಅಯೋಧ್ಯ ಶ್ರೀ ರಾಮನ ದರ್ಶದನ ಪಡೆಯಲು ಸಾರ್ವಜನಿಕರಿಗೆ ಜನವರಿ 23 ರಿಂದ ಅವಕಾಶ ಕಲ್ಪಿಸಿಕೊಡಲಾಗಿದೆ. ಭಗವಾನ್ ರಾಮನ ದರ್ಶನ ಭಾಗ್ಯಕ್ಕಾಗಿ ಭಕ್ತರು ಕಾತುರತೆಯಿಂದ ಕಾಯುತ್ತಿದ್ದಾರೆ. ಈ ಭವ್ಯವಾದ ದೇವಾಲಯದ ‘ದರ್ಶನ’ ಅವಧಿಯಲ್ಲಿ ಭಗವಾನ್ ರಾಮ್ ಲಲ್ಲಾನ ದರ್ಶನಕ್ಕಾಗಿ ಸಾವಿರಾರು ಭಕ್ತರು “ಆರತಿ” ಗಾಗಿ ಉಚಿತ ಪಾಸ್‌ ಗಳು ಆಫ್‌ ಲೈನ್ ಮತ್ತು ಆನ್‌ ಲೈನ್‌ ನಲ್ಲಿ ಲಭ್ಯವಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ವೆಬ್‌ ಸೈಟ್‌ ನ ಪ್ರಕಾರ, ಶ್ರೀರಾಮ ಜನ್ಮ ಭೂಮಿಯಲ್ಲಿರುವ ಕ್ಯಾಂಪ್ ಕಚೇರಿಯಲ್ಲಿ ಮಾನ್ಯ ಸರ್ಕಾರಿ ಗುರುತಿನ ಪುರಾವೆಯನ್ನು ಹಾಜರುಪಡಿಸುವ ಮೂಲಕ ಆಫ್‌ ಲೈನ್ ಪಾಸ್‌ ಗಳನ್ನು ಪಡೆಯಬಹುದು. ದರ್ಶನದ ಸಮಯ, 7:00 AM ನಿಂದ 11:30 AM , 2:00 PM ರಿಂದ 7:00 PM , ರಾಮಮಂದಿರ ಆರತಿ ಸಮಯ, ಬೆಳಿಗ್ಗೆ 6:30 ಹಾಗೂ ಕೊನೆಯದಾಗಿ ಸಂಧ್ಯಾ ಆರತಿ ರಾತ್ರಿ 7:30 ಆಗಿದೆ. ಕೇವಲ ಒಂದೇ ದಿನದಲ್ಲಿ ಬಾಲ ರಾಮನ ದರ್ಶನ ಪಡೆದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅಯೋದ್ಯೆಯಲ್ಲಿ ಹೊಸ ದಾಖಲೆಯೇ ಸೃಷ್ಟಿಯಾಗಿದೆ.

ಅಯೋದ್ಯೆಯಲ್ಲಿ ದಾಖಲೆಯ ಮಟ್ಟದಲ್ಲಿ ಬಾಲರಾಮನ ದರ್ಶನ
ರಾಮಜನ್ಮ ಭೂಮಿ ಟ್ರಸ್ಟ್ ಜನವರಿ 23 ರಿಂದ ರಾಮ ಮಂದಿರ ದರ್ಶನ ಭಗ್ಯ್ವನ್ನು ಸಾರ್ವಜನಿಕರಿಗೆ ನೀಡಿದೆ. ಬೆಳಿಗ್ಗೆಯಿಂದಲೇ ಅಯೋದ್ಯೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಬೆಳಿಗ್ಗೆಯಿಂದ ಇಲ್ಲಿಯವರೆಗೆ ಬರೋಬ್ಬರಿ 3 ಲಕ್ಷಕ್ಕೂ ಧಿಕ ಮಂದಿ ಭಕ್ತರು ಶ್ರೀ ರಾಮಲಲ್ಲಾ ದರ್ಶನವನ್ನು ಪಡೆದಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಗರಿಷ್ಟ ಭಕ್ತರು ದರ್ಶನ ಪಡೆದು ಅಯೋದ್ಯೆಯಲ್ಲಿ ಹೊಸ ದಾಖಲೆಯೇ ಸೃಷ್ಟಿಯಾಗಿದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group