Ram Mandir: ಅಯೋಧ್ಯಾ ರಾಮನಿಗೆ ಅಫ್ಘಾನಿಸ್ತಾನದಿಂದ ಬಂದ ಉಡುಗೊರೆ ಏನು ಗೊತ್ತಾ…? ಇದು ರಾಮನ ಮಹಿಮೆ

ಅಯೋಧ್ಯಾ ರಾಮನಿಗಾಗಿ ಪ್ರಪಂಚದ ಹಲವೆಡೆಯಿಂದ ವಿಶೇಷ ಉಡುಗೊರೆ

Ram Mandir Pran Pratishtha Ceremony Special Gift From Afghanistan: ಹಲವು ವರ್ಷಗಳಿಂದ ಕಾಯುತ್ತಿದ್ದ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿದೆ. ಇಂದು ಕೋಟ್ಯಾಂತರ ಭಕ್ತರ ಬಹುನಿರೀಕ್ಷಿತ ಕನಸು ನೆರವೇರಲಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಯೋಧ್ಯ ರಾಮ ಮಂದಿರವನ್ನು ಉದ್ಘಾಟನೆ ಮಾಡಲಿದ್ದಾರೆ. ಅಯೋಧ್ಯಾ ನಗರ ವರ್ಣರಂಜಿತ ಹೂವುಗಳು, ದೀಪಗಳಿಂದ ಅಲಂಕರಿಸಲ್ಪಟ್ಟಿದೆ.

ಎಲ್ಲೆಡೆ ರಾಮನ ಧ್ವಜಗಳು ಹಾರಾಡುತ್ತಿವೆ. ರಾಮಸ್ತೋತ್ರ, ಗಾಯನ, ನೃತ್ಯ, ಸಂಗೀತಗಳೊಂದಿಗೆ ಇಡೀ ನಗರ ರಾಮಮಯವಾಗಿ ಮಾರ್ಪಟ್ಟಿದೆ. ಇಡೀ ದೇಶದ ಜನತೆ ಇಂದು ರಾಮ ಮಂದಿರ ಉದ್ಘಾಟನೆಗಾಗಿ ಕಾಯುತ್ತಿದ್ದು, ರಾಮನ ಭಕ್ತರು ರಾಮ ಮಂದಿರಕ್ಕೆ ಸಾಕಷ್ಟು ಕಾಣಿಕೆಯನ್ನು ನೀಡುತ್ತಿದ್ದಾರೆ. ಈಗಾಗಲೇ ಪ್ರಪಂಚದ ಹಲವೆಡೆಯಿಂದ ಉಡುಗೊರೆಗಳು ಬಂದಿದ್ದು ಅಫ್ಘಾನಿಸ್ತಾನದಿಂದ ಕೂಡ ಉಡುಗೊರೆ ಬಂದಿದೆ.

Gift From Afghanistan To Ayodhya Ram Mandir
Image Credit: Organiser

ಅಯೋಧ್ಯಾ ರಾಮನಿಗಾಗಿ ಪ್ರಪಂಚದ ಹಲವೆಡೆಯಿಂದ ವಿಶೇಷ ಉಡುಗೊರೆ
ಈಗಾಗಲೇ ಅಯೋಧ್ಯಾ ರಾಮನಿಗಾಗಿ ಪ್ರಪಂಚದ ಹಲವೆಡೆಯಿಂದ ಹಲವು ಉಡುಗೊರೆಗಳು ಬಂದಿದೆ. ಬೀಗದ ಕೈ, ಉದ್ದಿನಕಡ್ಡಿ, ಲಾಡು, ಪಾದುಕೆ, ಬೆಳ್ಳಿ ಇಟ್ಟಿಗೆ ಹೀಗೆ ರಾಶಿ ರಾಶಿ ಉಡುಗೊರೆಗಳು ರಾಮ್ ಮಂದಿರಕ್ಕೆ ಬಂದಿವೆ. ಇದಲ್ಲದೆ ಶ್ರೀಲಂಕಾದಿಂದ ವಿಶೇಷ ಕಲ್ಲು ರಾಮನಿಗೆ ಉಡುಗೊರೆಯಾಗಿ ಬಂದಿದೆ. ಹಾಗೆ ನೇಪಾಳದಿಂದ ಹಣ್ಣು, ಹೂವು, ಸಿಹಿ ತಿಂಡಿ, ಸೌಂದರ್ಯವರ್ಧಕ, ಸೇರಿ, ರಾಶಿ ರಾಶಿ ವಸ್ತುಗಳು ಬಂದಿದೆ.

ರಾಮದ ಪತ್ನಿಯಾದ ಜಾನಕೀ ನೇಪಾಳದವಳಾಗಿದ್ದು, ತಮ್ಮ ಅಳಿಯನಿಗಾಗಿ ಈ ವಸ್ತುಗಳನೆಲ್ಲ ಕಳುಹಿಸಿಕ್ಕೊಡುತಿದ್ದೇವೆ ಎಂದು ನೇಪಾಳದ ಜನ ಹೇಳಿದ್ದಾರೆ. ಇದಷ್ಟೇ ಅಲ್ಲದೆ ಅಮೇರಿಕಾದಲ್ಲಿ ಕೂಡ ರಾಮನ ಜಪ ಜೋರಾಗಿ ನೆಡೆಯುತ್ತಿದೆ. ಅಮೇರಿಕಾದ ರಸ್ತೆಗಳಲ್ಲಿ ರಾಮನ ದೊಡ್ಡ ದೊಡ್ಡ ಭಾವಚಿತ್ರಗಳನ್ನು ಹಾಕಿದ್ದಾರೆ. ಮಾರಿಷಿಯಸ್‌ನಲ್ಲಿ ರಾಮಮಂದಿರ ಉದ್ಘಾಟನೆ ಸಲುವಾಗಿ ಹಿಂದೂ ಅಧಿಕಾರಿಗಳಿಗೆ 2 ಗಂಟೆಯ ವಿಶೇಷ ವಿಶ್ರಾಂತಿ ಅನ್ನು ನೀಡಲಾಗಿದೆ.

Ram Mandir Pran Pratishtha Ceremony
Image Credit: Hindustantimes

ಅಯೋಧ್ಯಾ ರಾಮನಿಗೆ ಅಫ್ಘಾನಿಸ್ತಾನದಿಂದ ಬಂಡ ಉಡುಗೊರೆ ಏನು ಗೊತ್ತಾ…?
ಇದೀಗ ಅಫ್ಘಾನಿಸ್ತಾನದಿಂದ ಕೂಡ ರಾಮನಿಗಾಗಿ ಉಡುಗೊರೆ ಬಂದಿದೆ. ಹೌದು ಅಫ್ಘಾನಿಸ್ತಾನದಿಂದ 2 ಕೆಜಿ ಕುಂಕುಮದ ಜೊತೆಗೆ, ಕಾಬೂಲ್ ನದಿ ನೀರನ್ನು ಕಳುಹಿಸಿಕೊಟ್ಟಿದ್ದಾರೆ.

Join Nadunudi News WhatsApp Group

Join Nadunudi News WhatsApp Group