Rama Mandir Darshan: ಒಂದೇ ತಿಂಗಳಲ್ಲಿ ಅಯೋಧ್ಯಾ ರಾಮನ ದರ್ಶನ ಪಡೆದ ಭಕ್ತರ ಸಂಖ್ಯೆ ಎಷ್ಟು ಗೊತ್ತಾ…? ತಿರುಪತಿಗಿಂತ ಹೆಚ್ಚು.

ಒಂದೇ ತಿಂಗಳಲ್ಲಿ ಅಯೋಧ್ಯಾ ರಾಮನ ದರ್ಶನ ಪಡೆದ ಭಕ್ತರ ಸಂಖ್ಯೆ ಎಷ್ಟು ಗೊತ್ತಾ...?

Rama Mandir Darshan Details: ಹಿಂದೂಗಳ ಆರಾಧ್ಯ ಭಗವಾನ್ ಶ್ರೀರಾಮ ಇದೀಗ ಅಯೋದ್ಯೆಯಲ್ಲಿ ನೆಲೆಸಿದ್ದಾನೆ. ಅಯೋದ್ಯೆಯ ರಾಮ ಮಂದಿರದಲ್ಲಿ ಭಕ್ತರು ಶ್ರೀರಾಮನ ದರ್ಶನವನ್ನು ಪಡೆದುಕೊಳ್ಳಬಹುದಾಗಿದೆ. ಅದೆಷ್ಟೋ ವರ್ಷಗಳಿಂದ ರಾಮನ ದರ್ಶನ ಭಾಗ್ಯಕ್ಕಾಗಿ ಕಾಯುತ್ತಿದ್ದ ಭಕ್ತರು ಸದ್ಯ ಅಯೋದ್ಯೆಗೆ ಭೇಟಿ ನೀಡಿ ರಾಮನನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಸಾಕಷ್ಟು ಜನರು ರಾಮನ ದರ್ಶನ ಮಾಡುತ್ತಿದ್ದಾರೆ. ಸದ್ಯ ರಾಮ ಮಂದಿರದ ಟ್ರಸ್ಟ್ ಕಳೆದ ಒಂದು ತಿಂಗಳಲ್ಲಿ ರಾಮನ ದರ್ಶನ ಮಾಡಿರುವ ಭಕ್ತರ ಬಗ್ಗೆ ಮಾಹಿತಿ ನೀಡಿದ್ದಾರೆ.

Rama Mandir Darshan Details
Image Credit: India TV News

ಒಂದೇ ತಿಂಗಳಲ್ಲಿ ಅಯೋಧ್ಯಾ ರಾಮನ ದರ್ಶನ ಪಡೆದ ಭಕ್ತರ ಸಂಖ್ಯೆ ಎಷ್ಟು ಗೊತ್ತಾ…?
ಜನವರಿ 23 ರಿಂದ ಸಾರ್ವಜನಿಕರು ಶ್ರೀರಾಮನ ದರ್ಶನವನ್ನು ಲಕ್ಷಾಂತರ ಸಂಖ್ಯೆಯಲ್ಲಿ ಪಡೆದುಕ್ಕೊಳ್ಳುತ್ತಿದ್ದಾರೆ. ಇನ್ನು ಸಾರ್ವಜನಿಕರಿಗೆ ದರ್ಶನ ಭಾಗ್ಯ ಕಲ್ಪಿಸಿಕೊಟ್ಟ ಒಂದೇ ದಿನದಲ್ಲಿ 5 ಲಕ್ಷಕ್ಕೂ ಅಧಿಕ ಭಕ್ತರು ದರ್ಶನವನ್ನು ಪಡೆದು, ರಾಮ ಮಂದಿರ ಹೊಸ ದಾಖಲೆಯನ್ನೇ ಬರೆದಿತ್ತು. ಸದ್ಯ ನಿನ್ನೆಗೆ ರಾಮ ಮಂದಿರ ಪ್ರತಿಷ್ಠಾಪನೆಗೊಂಡು ಒಂದು ತಿಂಗಳು ಮುಗಿದಿದೆ. ಜನವರಿ 22 ರಿಂದ ಫೆಬ್ರವರಿ 22 ರ ವರೆಗೆ ಶ್ರೀರಾಮನ ದರ್ಶನ ಪಡೆದ ಭಕ್ತರ ಸಂಖ್ಯೆಯ ಬಗ್ಗೆ ಕೇಳಿದರೆ ನೀವು ಅಚ್ಚರಿ ಪಡುವುದುದಂತೂ ನಿಜ.

ಹೌದು, ಪ್ರತಿನಿತ್ಯ ರಾಮನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಲಕ್ಷಾಂತರ ಭಕ್ತರು ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ರಾಮನ ದರ್ಶನ ಪಡೆಯಲು ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇನ್ನು ಜನವರಿ 22 ರಿಂದ ಫೆಬ್ರವರಿ 22 ರ ಒಂದು ತಿಂಗಳಿನ ಅವಧಿಯಲ್ಲಿ ಸರಿಸುಮಾರು 60 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಶ್ರೀರಾಮನ ದರ್ಶನವನ್ನು ಪಡೆದಿದ್ದಾರೆ. ಕಡಿಮೆ ಸಮಯದಲ್ಲಿ ತಿರುಪತಿ ತಿಮ್ಮಪ್ಪನಿಗಿಂತ ರಾಮ ಮಂದಿರದಲ್ಲಿ ಜನರು ಸೇರಿದ್ದಾರೆ ಎನ್ನಬಹುದು.

Rama Mandir Darshan Timings
Image Credit: Jagran

ಅಯೋಧ್ಯಾ ರಾಮನಿಗೆ ಕಾಣಿಕೆ ರೂಪದಲ್ಲಿ ಬಂದ ಚಿನ್ನ, ಬೆಳ್ಳಿಯ ವಿವರ ಇಲ್ಲಿದೆ
ರಾಮ ಮಂದಿರಕ್ಕೆ ಬಂದಂತಹ ವಿವಿಧ ಮೂಲಗಳಿಂದ ಮೀಸಲಾದ ಒಟ್ಟು ಮೊತ್ತವನ್ನು ಲೆಕ್ಕ ಹಾಕಿದರೆ 25 ಕೋಟಿ ರೂ. ದೇಣಿಗೆ ಬಂದಿದೆ. ಆಭರಣಗಳು ಮತ್ತು ರತ್ನಗಳ ಬಗ್ಗೆ ಹೇಳುವುದಾದರೆ, ರಾಮಮಂದಿರ ಟ್ರಸ್ಟ್ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಪಾತ್ರೆಗಳು ಮತ್ತು ವಸ್ತುಗಳನ್ನು ಸ್ವೀಕರಿಸುತ್ತಿದೆ. ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಕಿರೀಟ, ಮಾಲೆ, ಛತ್ರಿ, ರಥ, ಬಳೆಗಳು, ಆಟಿಕೆಗಳು, ಕಾಲುಂಗುರಗಳು, ದೀಪ ಮತ್ತು ಧೂಪ ಸ್ಟ್ಯಾಂಡ್, ಬಿಲ್ಲು ಮತ್ತು ಬಾಣಗಳು, ವಿವಿಧ ರೀತಿಯ ಪಾತ್ರೆಗಳು ಸೇರಿದಂತೆ ಬಹಳಷ್ಟು ವಸ್ತುಗಳನ್ನು ಒಳಗೊಂಡಿದೆ.

ಇನ್ನು ಬೆಳ್ಳಿಯ ಕಾಣಿಕೆಯ ಬಗ್ಗೆ ಹೇಳುವುದಾದರೆ, ರಾಮ ಭಕ್ತರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಮೂಲಕ ಇದುವರೆಗೆ 25 ಕೆ.ಜಿ.ಗೂ ಹೆಚ್ಚು ಬೆಳ್ಳಿಯನ್ನು ನೀಡಿದ್ದಾರೆ. ಹಾಗೆಯೆ ಕಿರೀಟಗಳು ಸೇರಿದಂತೆ ಸಮರ್ಪಿಸಲಾದ ವಸ್ತುಗಳ ಒಟ್ಟು ಚಿನ್ನದ ತೂಕ ಸುಮಾರು 10 ಕೆ.ಜಿ. ಆಗಿದೆ. ಅತಿ ಕಡಿಮೆ ಸಮಯದಲ್ಲಿ ಇಷ್ಟೆಲ್ಲ ಕಾಣಿಕೆ ಬಂದಿರುವುದು ನೋಡಿದರೆ ಭಕ್ತರಿಗೆ ಶ್ರೀರಾಮನ ಮೇಲೆ ಭಕ್ತಿ ಎಷ್ಟಿದೆ ಎನ್ನುವುದು ತಿಳಿಯುತ್ತದೆ.

Join Nadunudi News WhatsApp Group

Join Nadunudi News WhatsApp Group