Ramya And Rakshita: ರಮ್ಯಾ ಅವರನ್ನ ಕಂಡರೆ ರಕ್ಷಿತಾಗೆ ಯಾಕೆ ಇಷ್ಟ ಇಲ್ಲಾ…? ಇಬ್ಬರ ನಡುವೆ ಆಗಿದ್ದೇನು.

ರಕ್ಷಿತಾ ಹಾಗೂ ರಮ್ಯಾ ನಡುವೆ ಮುನಿಸು ಬರಲು ಕಾರಣವೇನು...?

Ramya And Rakshita Latest News: ಎರಡು ದಶಕಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ರಮ್ಯಾ ಹಾಗೂ ರಕ್ಷಿತಾ ಇಬ್ಬರು ಕೂಡ ಟಾಪ್ ನಟಿಯರಾಗಿದ್ದರು. ಆ ಸಮಯದಲ್ಲಿ ಈ ಇಬ್ಬರು ಇಲ್ಲದೆ ಸಿನಿಮಾಗಳೇ ಇರುತ್ತಿರಲಿಲ್ಲ. ದೊಡ್ಡ ದೊಡ್ಡ ಸ್ಟಾರ್ ನಂತರ ಜೊತೆ ಇಬ್ಬರು ಕೂಡ ತೆರೆ ಹಂಚಿಕೊಂಡಿದ್ದಾರೆ. ಇನ್ನು ಈಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ ವಾರ್ ನಡೆಯುತ್ತಲೇ ಇರುತ್ತದೆ.

ಆದರೆ ಆಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಇಲ್ಲದಿದ್ದರೂ ಕೂಡ ರಮ್ಯಾ ಹಾಗೂ ರಕ್ಷಿತಾ ನಡುವೆ ಫ್ಯಾನ್ ವಾರ್ ಕೇಳಿ ಬರುತ್ತಿತ್ತು. ಇಬ್ಬರು ನಟಿಯರ ನಡುವೆ ಬಾರಿ ಪೈಪೋಟಿ ಏರ್ಪಟ್ಟಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇದೀಗ ನಟಿ ರಕ್ಷಿತಾ ತಮ್ಮ ಹಾಗೂ ರಮ್ಯಾ ನಡುವಿನ ಪೈಪೋಟಿ ಬಗ್ಗೆ ಮನದಾಳದ ಮಾತನ್ನು ಆಡಿದ್ದಾರೆ.

Actress Ramya And Actress Rakshita
Image Credit: TV9kannada

ರಮ್ಯಾ ಅವರನ್ನ ಕಂಡರೆ ರಕ್ಷಿತಾಗೆ ಯಾಕೆ ಇಷ್ಟ ಇಲ್ಲಾ…?
ಇನ್ನು 2002 ರಲ್ಲಿ ವಜ್ರೇಶ್ವರಿ ಕಂಬೈನ್ಸ್‌ ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಮೂಲಕ ರಕ್ಷಿತಾ ಚಂದನವನವನ್ನು ಪ್ರವೇಶಿಸದರು. ಮೊದಲ ಚಿತ್ರವೇ ಸೂಪರ್ ಹಿಟ್ ಆಗಿದ್ದರಿಂದ ರಕ್ಷಿತಾಗೆ ಹಲವು ಸಿನಿಮಾ ಅವಕಾಶಗಳು ಬಂದಿದ್ದವು. ಅದರ ನಂತರ 2003 ರಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಅದೇ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಅಭಿ ಚಿತ್ರದಲ್ಲಿ ರಮ್ಯಾ ಅವರನ್ನು ಪರಿಚಯಿಸಿದರು. ಆ ಚಿತ್ರವೂ ಹಿಟ್ ಆಗಿತ್ತು. ಈ ಮೂಲಕ ಸಿನಿರಂಗದ ಇಬ್ಬರು ನಟಿಯರು ಬಾರಿ ಫೇಮಸ್ ಆಗಿದ್ದರು. ಇಲ್ಲಿಂದಲೇ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದ್ದು.

ಯೂಟ್ಯೂಬ್ ಚಾನೆಲ್ ನಲ್ಲಿ ನೀಡಿಯೋದ ಸಂದರ್ಶನದಲ್ಲಿ ನಟಿ ರಕ್ಷಿತಾ ಅವರು ತಮ್ಮ ನಡುವಿನ ಕಾಂಪಿಟೇಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಹೇಗೆ ಕ್ರಿಯೇಟ್ ಆಗಿತ್ತು ಎಂದು ನನಗೆ ತಿಳಿದಿಲ್ಲ. ನಾನು ಹಾಗೆ ಇರಲಿಲ್ಲ. ನಾನು ಎಂದಿಗೂ ಪೈಪೋಟಿಗೆ ಇಳಿದಿರಲಿಲ್ಲ. ಈಗಲೂ ಆ ದಿನಗಳನ್ನು ನೆನಪಿಸಿಕೊಂಡರೆ ಅದು ತುಂಬಾ ಕಷ್ಟದ ಸಮಯವಾಗಿತ್ತು. ಸಮಯ ಸರಿಯಿಲ್ಲ ಅನ್ನಿಸಿತು. ನಿರ್ಮಾಪಕರು ತಂದ ಸಿನಿಮಾ ಕಥೆ, ನನಗೆ ಬೇಡವಾದಾಗ ಅವರ ಬಳಿ ಹೋಗುತ್ತಿದ್ದರು. ಅವಳಿಗೆ ಬೇಡ ಅಂದಾಗ ನನ್ನ ಬಳಿಗೆ ಬರುತ್ತಿದ್ದರು. ಇದು ಕಾಮನ್ ಆಗಿತ್ತು.

Ramya And Rakshita Latest News
Image Credit: Filmibeat

ಇಬ್ಬರ ನಡುವೆ ಮುನಿಸು ಬರಲು ಕಾರಣವೇನು…?
ಈಗ ನೆನೆಸಿಕೊಂಡರೆ ನಮ್ಮಿಬ್ಬರ ನಡುವಿನ ಆ ಜಗಳ ಇಲ್ಲದಿದ್ದರೆ ನಮ್ಮ ಸಿನಿಮಾ ಪಯಣ ಅಪೂರ್ಣವಾಗುತ್ತಿತ್ತು ಅನ್ನಿಸುತ್ತದೆ. ಆ ಒಂದು ದ್ವೇಷದಿಂದಲೇ ನಾವು ಜಿಡಿಗೆ ಬಿದ್ದಷ್ಟು ಹಠ ಸಾಧಿಸಲು ಸಾಧ್ಯವಾಯಿತು. ಆ ಒಂದು ಹೆಜ್ಜೆ ಇಲ್ಲದಿದ್ದರೆ ನಾವು ಈ ಮಟ್ಟಕ್ಕೆ ಬರುತ್ತಿರಲಿಲ್ಲವೇನೋ. ಇಬ್ಬರಲ್ಲೂ ಅದು ಮಾಡಬೇಕು, ಹೀಗೆ ಮಾಡಬೇಕು ಎಂಬ ತುಡಿತವಿತ್ತು. ಆದರೆ, ಇದು ಆರೋಗ್ಯಕರ ಕಾಂಪಿಟೇಷನ್ ಆಗಿರಲಿಲ್ಲ. “ವೈಯಕ್ತಿಕವಾಗಿ ನೋಡಿದರೆ ನಮಗೇನು ಸಿಕ್ತು ಅನ್ನೋ ಭಾವ ಕಾಡುತ್ತದೆ.

Join Nadunudi News WhatsApp Group

ಆಗ ನಮ್ಮ ನಡುವೆ ಸಾಕಷ್ಟು ಪೈಪೋಟಿ ಇತ್ತು. ಅದು ಒಳ್ಳೆ ಪೈಪೋಟಿ ಇರಲಿಲ್ಲ.ಆಗ ಸೋಶಿಯಲ್ ಮೀಡಿಯಾ ಇರಲಿಲ್ಲ.. ರಮ್ಯಾ ಟ್ಯಾಬ್ಲಾಯ್ಡ್ ಗೆ ಸಂದರ್ಶನ ನೀಡಿದ್ದ ವೇಳೆ ಅದರ ಹಿಂದಿನ ದಿನ ನನಗೆ ಫೋನ್ ಬಂದಿತ್ತು. ರಮ್ಯಾ ಕುರಿತು ಆರ್ಟಿಕಲ್ ಬರುತ್ತಿದೆ ನೀವು ಸ್ಟೇಟ್ಮೆಂಟ್ ಕೊಡಿ ಎನ್ನುತ್ತಿದ್ದರು. ಇದಕ್ಕೆ ನಿಮ್ಮ ಅನಿಸಿಕೆ ಏನು ಎಂದು ಕೇಳುತ್ತಿದ್ದರು. ಆಗ ನಾನು ಏನನ್ನು ಹೇಳುತ್ತಿರಲಿಲ್ಲ. ಆ ಟೈಮ್ ನೆನಪಿಸಿಕೊಂಡರೆ ಈಗಲೂ ನನಗೆ ಇರಿಟೇಟ್ ಆಗುತ್ತದೆ ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.

Actress Rakshita Latest News
Image Credit: Andhrafriends

Join Nadunudi News WhatsApp Group