Ranbir Kapoor: ಆಲಿಯಾಗೆ ನಾನು ಒಳ್ಳೆಯ ಗಂಡ ಅಲ್ಲ, ಹೆಂಡತಿಯನ್ನ ಹೊಗಳಿದ ರಣಬೀರ್.

ಆಲಿಯಾ ಭಟ್ ಗೆ ನಾನು ಒಳ್ಳೆಯ ಗಂಡ ಅಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ ನಟ ರಣಬೀರ್ ಕಪೂರ್

Alia Bhat And Ranbir Kapoor: ನಟಿ ಆಲಿಯಾ ಭಟ್ (Alia Bhatt) ಹಾಗು ರಣಬೀರ್ ಕಪೂರ್ (Ranbir Kapoor) ಅವರಿಗೆ ಇಂದು ಮದುವೆಯ ವಾರ್ಷಿಕೋತ್ಸವದ ಸಂಭ್ರಮ. ಈ ಜೋಡಿ ಮದುವೆಯಾಗಿ ಒಂದು ವರ್ಷ ಕಂಪ್ಲೀಟ್ ಆಗಿದೆ. ಸಂಸಾರದ ಬಗ್ಗೆ ಸಂದರ್ಶನ ಒಂದರಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಮಾತಾಡಿದ್ದಾರೆ.

Alia Bhat And Ranbir Kapoor
Image Source: India Today

ಆಲಿಯಾ ಭಟ್ ಗೆ ನಾನು ಒಳ್ಳೆಯ ಗಂಡ ಅಲ್ಲ ಎಂದ ರಣಬೀರ್ ಕಪೂರ್
ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ರಣಬೀರ್ ಕಪ್ಪೋರ್ ತಮ್ಮ ವಯಕ್ತಿಕ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಟಿ ಆಲಿಯಾಗೆ ನಾನು ಒಳ್ಳೆಯ ಪತಿಯಾಗದಿದ್ದರು ಉತ್ತಮ ಪತಿಯಾಗಬೇಕೆಂದು ಸರಿ ದಾರಿಯಲ್ಲೇ ಸಾಗುತ್ತಿದ್ದೇನೆ ಎಂದು ನಟ ರಣಬೀರ್ ಕಪೂರ್ ಹೇಳಿದ್ದಾರೆ.

ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಬಾಲಿವುಡ್ ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿದ್ದಾರೆ. ಮದುವೆ ಹಾಗು ಪತ್ನಿಯ ಬಗ್ಗೆ ಮಾತನಾಡಿದ ರಣಬೀರ್ ಕಪೂರ್ ಜೀವನವು ಎಂದಿಗೂ ಪರಿಪೂರ್ಣವಲ್ಲ. ನಾನು ಒಳ್ಳೆಯ ಮಗ ಅಥವಾ ಒಳ್ಳೆಯ ಗಂಡ ಅಥವಾ ಒಳ್ಳೆಯ ಸಹೋದರ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.

Alia Bhat And Ranbir Kapoor
Image Source: India Today

ಪತ್ನಿ ಆಲಿಯಾ ಭಟ್ ಅವರನ್ನು ಕೊಂಡಾಡಿದ ರಣಬೀರ್ ಸಿಂಗ್
ಪತ್ನಿ ಆಲಿಯಾ ಭಟ್ ಅವರನ್ನು ರಣಬೀರ್ ಕಪೂರ್ ಅವರು ಕೊಂಡಾಡಿದ್ದಾರೆ. ತನ್ನನ್ನು ತಾನು ತಾನು ಸುಧಾರಿಸಿಕೊಳ್ಳಬೇಕು ಎಂದಿದ್ದಾರೆ. ರಣಬೀರ್ ಹಾಗು ಆಲಿಯಾಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಮದುವೆ ವಾರ್ಷಿಕೋತ್ಸವದ ಶುಭಯಗಳು ಬರುತ್ತಿದೆ.

ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಹಲವು ವರ್ಷಗಳ ಕಾಲ ಪ್ರೀತಿಸಿ ಕಳೆದ ವರ್ಷ ಏಪ್ರಿಲ್ 14 ರಂದು ಹಸೆಮಣೆ ಏರಿದ್ದಾರೆ. ಈ ಜೋಡಿ ಮದುವೆಯಾಗಿ ಇಂದು ಒಂದು ವರ್ಷವಾಗಿದೆ. ಆಲಿಯಾ ಭಟ್ ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ.

Join Nadunudi News WhatsApp Group

Alia Bhat And Ranbir Kapoor
Image Source: Times Of India

Join Nadunudi News WhatsApp Group