Ranjani Raghavan: ಚುನಾವಣಾ ಪ್ರಚಾರದಲ್ಲಿ ರಂಜನಿ ರಾಘವನ್, ಕನ್ನಡತಿಯ ಅಬ್ಬರದ ಪ್ರಚಾರ.

ನಟಿ ರಂಜನಿ ರಾಘವನ್ (Ranjani Raghavan) ಇದೀಗ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಕಿರುತೆರೆಯ ಸ್ಟಾರ್ ನಟಿಯ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ.

Actress Ranjani Raghavan Election Campaign: ಈ ಬಾರಿ ವಿಧಾನಸಭಾ ಚುನಾವಣೆಯ (Assembly Election) ಕಾವು ಹೆಚ್ಚುತ್ತಿದೆ. ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಮುಖಂಡರ ಜೊತೆಗೆ ಸಿನಿಮಾ ಸ್ಟಾರ್ ನಟ ನಟಿಯರ ಪ್ರಚಾರ ಹೆಚ್ಚಾಗುತ್ತಿದೆ. ನಟ ಶಿವರಾಜ್ ಕುಮಾರ್, ನಟ ಸುದೀಪ್, ನಟ ದರ್ಶನ್, ನಟ ಧ್ರುವ ಸರ್ಜಾ ಸೇರಿದಂತೆ ಹಲವು ಸ್ಟಾರ್ ನಟ ನಟಿಯರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಕಿರುತೆಯ ಸ್ಟಾರ್ ನಟಿ ಕೂಡ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.

Ranjani Raghavan Election Campaign
Image Source: News18

ಚುನಾವಣಾ ಪ್ರಚಾರದಲ್ಲಿ ರಂಜನಿ ರಾಘವನ್

ಕಿರುತೆರೆ ಹಾಗೂ ಬೆಳ್ಳಿತೆರೆ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದ ನಟಿ ರಂಜನಿ ರಾಘವನ್ (Ranjani Raghavan) ಇದೀಗ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಕಿರುತೆರೆಯ ಸ್ಟಾರ್ ನಟಿಯ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ.

ಬಳ್ಳಾರಿ ತಾಲೂಕಿನ ಹರಪ್ಪನಹಳ್ಳಿ ತಾಲೂಕಿನಲ್ಲಿ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ ಪಿ ಪ್ರಕಾಶ್ ಅವರ ಮಗಳು ಲತಾ ಮಲ್ಲಿಕಾರ್ಜುನ್ ಅವರ ಪರ ರಂಜನಿ ರಾಘವನ್ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷೇತ್ತರ ಅಭ್ಯರ್ಥಿ ಲತಾ ಮಲ್ಲಕಾರ್ಜುನ್ ಪರ ಕನ್ನಡತಿ ನಿಂತಿದ್ದಾರೆ. ನಟಿ ರಂಜನಿ ರಾಘವನ್ ಮತದಾರರರಲ್ಲಿ ಮತಯಾಚಿಸಿದ್ದಾರೆ.

Ranjani Raghavan Election Campaign
Image Source: News18

ಮತ ನೀಡುವಂತೆ ಮನವಿ ಮಾಡಿದ ಕನ್ನಡತಿ
“ನಾನು ಪುಟ್ಟ ಗೌರಿ ಮದುವೆ ಹಾಗೂ ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿ ನಿಮ್ಮ ಮನೆಮಗಳಾಗಿ ನಿಮ್ಮೂರಿಗೆ ಬಂದಿರುವೆ. ನಾನು ನಟಿಸಿದ ಸೀರಿಯಲ್ ನೋಡಿ, ನನ್ನನ್ನು ಬೆಂಬಲಿಸಿರುವಂತೆ, ಈ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡಿ. ಲತಾ ಅವರ ಲೇಡಿ ಪಾರ್ಸ್ ಗುರುತಿಗೆ ಮತ ನೀಡಿ. ಲತಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡಿ, ಮಹಿಳೆಯರ ಶಕ್ತಿ ಎನ್ನುವುದನ್ನು ರಾಜ್ಯದ ಜನತೆಗೆ ತೋರಿಸಬೇಕು” ಎಂದು ರಂಜನಿ ರಾಘವನ್ ಮತ ಭೇಟೆ ಪ್ರಾರಂಭಿಸಿದ್ದಾರೆ.

Join Nadunudi News WhatsApp Group

Ranjani Raghavan Election Campaign
Image Source: Kannada News

Join Nadunudi News WhatsApp Group