Rashmika Mandanna: ಕಿರಿಕ್ ಪಾರ್ಟಿ ನಂಬರ್ ಬ್ಲಾಕ್ ಮಾಡಿದ ರಶ್ಮಿಕಾ, ಕಾಲೆಳೆದ ನೆಟ್ಟಿಗರು.

ಕಿರಿಕ್ ಪಾರ್ಟಿ ಪ್ರೊಡಕ್ಷನ್ ಹೌಸ್ ನಂಬರ್ ಬ್ಲಾಕ್ ಮಾಡಿದ ರಶ್ಮಿಕಾ ಮಂದಣ್ಣ.

Rashmika Mandanna Block Rakshit Shetty Number: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಒಂದಲ್ಲ ಒಂದಲ್ಲ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ನಂತರ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಗೆ (Rakshit Shetty) ನಾಯಕಿಯಾಗಿ ನಟಿಸಿದ ರಶ್ಮಿಕಾ ಮಂದಣ್ಣ ಈ ಸಿನಿಮಾದ ಮೂಲಕ ಖ್ಯಾತಿ ಪಡೆದಿದ್ದರು. ನಂತರ ತೆಲುಗು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿಮಾಗಳನ್ನು ಮರೆತರು. ಈ ಕಾರಣದಿಂದಾಗಿ ನೆಟ್ಟಿಗರು ಅವರನ್ನು ಹೆಚ್ಚಾಗಿ ಟ್ರೊಲ್ ಮಾಡುತ್ತಾರೆ.

Rashmika Mandanna Block Rakshit Shetty Number
Image Source: Times Of India

ಹೊಸ ವಿಚಾರ ಒಂದನ್ನು ಬಹಿರಂಗಪಡಿಸಿದ ನಟಿ ರಶ್ಮಿಕಾ
ಕಿರಿಕ್ ಪಾರ್ಟಿ ಸಿನಿಮಾದಿಂದ ಖ್ಯಾತಿ ಪಡೆದ ಜೋಡಿ ರಕ್ಷಿತ್ ಶೆಟ್ಟಿ ಹಾಗು ರಶ್ಮಿಕಾ ಮಂದಣ್ಣ ಅವರು ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥ ಮಾಡಿಕೊಂಡ ಸ್ವಲ್ಪ ದಿನಕ್ಕೆ ಇವರಿಬ್ಬರ ನಡುವೆ ಬ್ರೇಕಪ್ ಆಯಿತು ಎಂಬ ಸುದ್ದಿ ಹೊರ ಬಿತ್ತು. ಆದರೆ ಅದು ಯಾಕೆ ಯಾವ ಕಾರಣಕ್ಕೆ ಅನ್ನುವುದನ್ನು ಇಲ್ಲಿಯವರೆಗೂ ರಕ್ಷಿತ್ ಆಗಲಿ, ರಶ್ಮಿಕಾ ಆಗಲಿ ಬಹಿರಂಗಪಡಿಸಿಲ್ಲ. ಇದೀಗ ರಶ್ಮಿಕಾ ಮಂದಣ್ಣ ಸಂದರ್ಶನ ಒಂದರಲ್ಲಿ ಮತ್ತೊಂದು ವಿಚಾರ ರಿವೀಲ್ ಮಾಡಿದ್ದಾರೆ.

Rashmika Mandanna Block Rakshit Shetty Number
Image Source: India Today

ಕಿರಿಕ್ ಪಾರ್ಟಿ ಪ್ರೊಡಕ್ಷನ್ ಹೌಸ್ ನಿಂದ ಕರೆ ಬಂದಾಗ ನಾನು ಆ ನಂಬರ್ ಅನ್ನು ಬ್ಲಾಕ್ ಮಾಡಿದೆ ಎಂದ ನಟಿ ರಶ್ಮಿಕಾ
ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ನಟಿ ರಶ್ಮಿಕಾ ಅವರು ಕಿರಿಕ್ ಪಾರ್ಟಿ ಪ್ರೊಡಕ್ಷನ್ ಹೌಸ್ ನಿಂದ ಕರೆ ಬಂದಿತ್ತು. ಆದರೆ ನಾನು ಅದನ್ನು ತಮಾಷೆ ಕರೆ ಎಂದು ಭಾವಿಸಿದ್ದೆ, ಹಾಗಾಗಿ ನನಗೆ ಯಾವುದೇ ಸಿನಿಮಾದಲ್ಲಿ ಆಸಕ್ತಿ ಇಲ್ಲ ಸರ್, ದಯವಿಟ್ಟು ನಿಲ್ಲಿಸಿ ಎಂದಿದ್ದೆ.

ನಂತರ ನಾನು ಆ ನಂಬರ್ ಅನ್ನು ಬ್ಲಾಕ್ ಮಾಡಿದ್ದೆ ಎಂದು ಹೇಳಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಈ ಮಾತನ್ನು ಕೇಳಿ ನೆಟ್ಟಿಗರು ನಟಿ ರಶ್ಮಿಕಾಗೆ ಅಟಿಟ್ಯೂಡ್ ಎಂದು ಹೇಳುತ್ತಿದ್ದಾರೆ. ಮತ್ತೆ ನಟಿ ರಶ್ಮಿಕಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Join Nadunudi News WhatsApp Group

Rashmika Mandanna Block Rakshit Shetty Number
Image Source: Times Of India

Join Nadunudi News WhatsApp Group